KSP Recruitment 2022: 3484 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ | SSLC ಪಾಸಾದವರಿಗೆ ಆದ್ಯತೆ

ಕರ್ನಾಟಕ ಪೊಲೀಸ್ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದ ಹಾಗೂ ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯಲಿಂಗ) (ಸಿಎಆರ್/ ಡಿಎಆರ್) ಹುದ್ದೆಗಳ ಭರ್ತಿಗೆ ಅಧಿಸೂಚನೆ ಇದೀಗ ಕರ್ನಾಟಕ ರಾಜ್ಯಪತ್ರದಲ್ಲಿ ಬಿಡುಗಡೆ ಆಗಿದೆ.

 

ಕರ್ನಾಟಕ ರಾಜ್ಯಪತ್ರದ ಮೂಲಕ ಅಧಿಸೂಚನೆ ಪ್ರಕಟಿಸಲಾಗಿದೆ. ಶೀಘ್ರದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಅಪ್‌ಲೋಡ್ ಮಾಡಲಾಗುತ್ತದೆ. ಹುದ್ದೆಗಳ ಕುರಿತು ಇತರೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು.

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
19-09-2022 ರ ಬೆಳಿಗ್ಗೆ 10-00 ಗಂಟೆಯಿಂದ.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-10-2022 ರ ಸಂಜೆ 06 ಗಂಟೆವರೆಗೆ.
ಆನ್‌ಲೈನ್‌ನಲ್ಲಿ / ಬ್ಯಾಂಕ್ ಶಾಖೆಗಳಲ್ಲಿ / ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ:
03-11-2022

ಉದ್ಯೋಗ ಇಲಾಖೆ : ಕರ್ನಾಟಕ ಪೊಲೀಸ್ ಇಲಾಖೆ
ಹುದ್ದೆ ಹೆಸರು : ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್

ಹುದ್ದೆಗಳ ಸಂಖ್ಯೆ : ಉಳಿಕೆ ಮೂಲ ವೃಂದದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು: 3064
ಕಲ್ಯಾಣ ಕರ್ನಾಟಕ ವೃಂದದ ಸಶಸ್ತ್ರ ಪೊಲೀಸ್
ಕಾನ್ಸ್‌ಟೇಬಲ್ ಹುದ್ದೆಗಳು: 420
ಒಟ್ಟು ಹುದ್ದೆಗಳ ಸಂಖ್ಯೆ: 3484

ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳಿಗೆ ರೂ.400.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.200.

ಖಾಯಂ ಪೂರ್ವ ಅವಧಿ : ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷ ಆರು ತಿಂಗಳು ಖಾಯಂ ಪೂರ್ವ ಅವಧಿಯಲ್ಲಿರುತ್ತಾರೆ.

ವಯೋಮಿತಿ : ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆ ದಿನಾಂಕ 31-10-2022 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ 27 ವರ್ಷ. ಇತರೆ ಅಭ್ಯರ್ಥಿಗಳಿಗೆ 25 ವರ್ಷ. ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ.

ವಿದ್ಯಾರ್ಹತೆ : ಎಸ್ಎಸ್ಎಲ್‌ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.

ವೇತನ : ರೂ.23,500 – 47,650.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave A Reply

Your email address will not be published.