Home ಕೃಷಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್!

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್!

Hindu neighbor gifts plot of land

Hindu neighbour gifts land to Muslim journalist

ಕೊರೋನಾ ಅವಧಿಯಲ್ಲಿ ಮೋದಿ ಸರ್ಕಾರ ಬಡವರ ಸಹಾಯಕ್ಕಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೂಲಕ ಬಡವರಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡಲಾಗುತ್ತದೆ. ಇದೀಗ ಸರಕಾರದಿಂದ ನೀಡುತ್ತಿರುವ ಉಚಿತ ಪಡಿತರದ ಪ್ರಯೋಜನವನ್ನು ಪಡೆದುಕೊಂಡವರಿಗೆ  ಗುಡ್ ನ್ಯೂಸ್ ಇಲ್ಲಿದೆ.

ಫಲಾನುಭವಿಗಳಿಗೆ ಸರಕಾರ ಸೆ.30ರವರೆಗೆ ಉಚಿತ ಪಡಿತರ ಸೌಲಭ್ಯ ಒದಗಿಸಲಿದೆ. ಈ ಹಿಂದೆ ಆಗಸ್ಟ್ ತಿಂಗಳಿಗೆ ಉಚಿತ ಪಡಿತರ ನೀಡುವ ಬಗ್ಗೆ ಚರ್ಚೆ ನಡೆದಿದೆ. ಈಗ ಫಲಾನುಭವಿಗಳು ಸೆಪ್ಟೆಂಬರ್ 30 ರವರೆಗೆ ಉಚಿತ ಪಡಿತರ ಪ್ರಯೋಜನವನ್ನು ಪಡೆಯಬಹುದು ಎಂದು ಹೇಳಿದೆ. ಅಂದರೆ, ಫಲಾನುಭವಿಗಳು ಸೆಪ್ಟೆಂಬರ್ ತಿಂಗಳವರೆಗೆ ಪಡಿತರಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಆದರೆ, ಸೆಪ್ಟೆಂಬರ್ ತಿಂಗಳ ನಂತರ, ಫಲಾನುಭವಿಗಳು ಸರ್ಕಾರ ನಿಗದಿಪಡಿಸಿದ ಶುಲ್ಕದ ಅಡಿಯಲ್ಲಿ ಮಾತ್ರ ಪಡಿತರ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಸರಕಾರ ನೀಡುತ್ತಿರುವ ಪಡಿತರವನ್ನು ನ್ಯಾಯಬೆಲೆ ಮಾರಾಟಗಾರರ ಅಂಗಡಿಯಿಂದ ಪಡೆಯಬಹುದು. ಪಿಒಎಸ್ ಯಂತ್ರದ ಮೂಲಕ ಆಧಾರ್ ಆಧಾರಿತ ವಿತರಣೆಯನ್ನು ಮಾಡಲಾಗುತ್ತದೆ. ಮೊಬೈಲ್ OTP ಮೂಲಕ ಡೆಲಿವರಿ ಲಭ್ಯವಾಗುತ್ತದೆ. ಪೋರ್ಟಬಿಲಿಟಿ ಮೂಲಕ ಅಗತ್ಯ ವಸ್ತುಗಳನ್ನು ಪಡೆಯುವ ಸೌಲಭ್ಯವೂ ಕಾರ್ಡ್‌ದಾರರಿಗೆ ಲಭ್ಯವಾಗಲಿದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2021 ರಲ್ಲಿ, ಕೇಂದ್ರ ಸರ್ಕಾರವು, ದೊಡ್ಡ ಬದಲಾವಣೆಯನ್ನು ಮಾಡಿದೆ.  ಅದರ ಅಡಿಯಲ್ಲಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಅಂದರೆ, ಈಗ ರೈತರು ಹೊಸ ನಿಯಮದೊಂದಿಗೆ ಮುಂದಿನ ಕಂತಿಗೆ ಅರ್ಜಿ ಸಲ್ಲಿಸಬೇಕು. ಈಗ ಕಿಸಾನ್ ಯೋಜನೆ(ಪಿಎಂ ಕಿಸಾನ್ ಕಂತು) ನೋಂದಣಿಗೆ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವೂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ತಕ್ಷಣವೇ ಪಡಿತರ ಚೀಟಿಯನ್ನು ಮಾಡಿಸಿ.   ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಈಗ 11 ನೇ ಕಂತನ್ನು ಈಗಾಗಲೇ ಕೋಟ್ಯಾಂತರ ಜನ ಅನ್ನದಾತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.