Home News ಎಣ್ಣೆ ಏರಿಸಿಕೊಂಡು ಶಾಲೆಗೆ ಬರುವ ಶಿಕ್ಷಕಿ | ನಮಗೆ ಡ್ರಿಂಕ್ಸ್ ಟೀಚರ್ ಬೇಡವೆಂದು ಗ್ರಾಮಸ್ಥರಿಂದ ಶಾಲೆಗೆ...

ಎಣ್ಣೆ ಏರಿಸಿಕೊಂಡು ಶಾಲೆಗೆ ಬರುವ ಶಿಕ್ಷಕಿ | ನಮಗೆ ಡ್ರಿಂಕ್ಸ್ ಟೀಚರ್ ಬೇಡವೆಂದು ಗ್ರಾಮಸ್ಥರಿಂದ ಶಾಲೆಗೆ ಬೀಗ

Hindu neighbor gifts plot of land

Hindu neighbour gifts land to Muslim journalist

ಅಲ್ಲ ಈ ವಿಷಯ ನಾವು ಹೇಳಿದರೆ ನಿಮಗೆ ನಂಬೋಕೆ ಆಗೋತ್ತೋ ಇಲ್ವೋ ಗೊತ್ತಿಲ್ಲ. ಏಕೆಂದರೆ ಇಲ್ಲೊಬ್ಬ ಶಿಕ್ಷಕಿ ಅರೆ ಈಕೆ ಅಂತಿಂತಹ ಶಿಕ್ಷಕಿಯಲ್ಲ ಸದಾ ಅಮಲೇರಿಸಿಕೊಂಡು ತರಗತಿಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಟೀಚರ್. ಅಷ್ಟು ಮಾತ್ರವಲ್ಲ ಈ ಏರಿದ ಕಿಕ್ಕು ಇಳಿಯುತ್ತಿದ್ದಂತೆ ಮತ್ತೇರಿಸಲು ಡ್ರಾವರ್‌ನಲ್ಲೂ ಮದ್ಯದ ಬಾಟಲ್‌ಗಳ ಸ್ಟಾಕ್ ಕೂಡಾ ಇರುತ್ತೆ.

ಹೌದು, ಈ ಎಣ್ಣೆ ಶಿಕ್ಷಕಿಯ ಕಾಟದಿಂದ ನೊಂದ ಗ್ರಾಮಸ್ಥರು ಹಾಗೂ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಂತೆ ಆತ್ಮಹತ್ಯೆಯ ನಾಟಕ ಬೇರೆ ಮಾಡಿದ್ದಾಳೆ. ಟೀಚರಮ್ಮನ ಎಣ್ಣೆ ನಶೆ ಬಗ್ಗೆ ತಿಳಿದ ಜನರು, ನಮ್ಮ ಮಕ್ಕಳಿಗೆ ಎಣ್ಣೆ ಶಿಕ್ಷಕಿ ಬೇಡವೇ ಬೇಡವೆಂದು ಪಟ್ಟುಹಿಡಿದು ನಿಂತಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹ ಒಂದು ಘಟನೆ ನಡೆದಿರೋದಾಗಿ ತಿಳಿದು ಬಂದಿದೆ. ಗಂಗಲಕ್ಷ್ಮಮ್ಮ ಎಂಬ ಶಿಕ್ಷಕಿಗೆ ಕುಡಿತದ ಚಟ ಇದ್ದು, ನಿತ್ಯ ಮದ್ಯ ಸೇವನೆ ಮಾಡಿಯೇ ಶಾಲೆಗೆ ಬರುತ್ತಿದ್ದಳು. ಸಾಲದು ಎಂಬಂತೆ ಎಣ್ಣೆ ನಶೆ ಇಳಿದಾಗ ಮತ್ತೇರಿಲು ತನ್ನ ಡ್ರಾವರ್ ಒಳಗೂ ಮದ್ಯದ ಬಾಟಲ್‌ಗಳನ್ನು ಇರಿಸಿಕೊಂಡಿದ್ದಾಳೆ. ಸದಾ ಎಣ್ಣೆ ಏಟಿನಲ್ಲೇ ಇರುತ್ತಿದ್ದ ಗಂಗಲಕ್ಷ್ಮಮ್ಮ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಕಿರಿಕ್ ಮಾಡಿಕೊಳ್ಳುತ್ತಿದ್ದಳು. ಅಷ್ಟೇ ಅಲ್ಲದೆ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದಳು.

ಕಳೆದ 20 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಂಗಲಕ್ಷ್ಮಮ್ಮನ ಪ್ರತಿನಿತ್ಯ ಜಗಳಕ್ಕೆ ಬೇಸತ್ತಿದ್ದಾರೆ. ಇಂದು ಸರಿಹೋಗಬಹುದು ಎಂದು ಯೋಚಿಸುತ್ತಿದ್ದ ಶಿಕ್ಷಕರೆಲ್ಲರೂ ಜನ್ಮದಲ್ಲಿ ಈಕೆಗೆ ಬುದ್ದಿ ಬರಲ್ಲ ಎಂದು ಅರಿತು ಬೇರೆ ಕಡೆಗೆ ವರ್ಗಾವಣೆ ಮಾಡಿ ಹೋಗಿದ್ದಾರೆ.

ಪೊಲೀಸರು ಮತ್ತು ಗ್ರಾಮಸ್ಥರು ಶಾಲೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಲು ಮುಂದಾದಾಗ ಪೊಲೀಸರ ಕರ್ತವ್ಯಕ್ಕೂ ಆಕೆ ಅಡ್ಡಿಪಡಿಸಿದ್ದಾಳೆ. ಅನಿವಾರ್ಯವಾಗಿ ಗ್ರಾಮಸ್ಥರು ಟೇಬಲ್ ಅನ್ನು ಹೊರತಂದು ಬೀಗ ಒಡೆದು ಡ್ರೈವರ್ ತೆರೆದಿದ್ದಾರೆ. ಈ ವೇಳೆ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ.

ಮದ್ಯದ ಬಾಟಲ್‌ಗಳು ಪತ್ತೆಯಾಗುತ್ತಿದ್ದಂತೆ ಗಂಗಲಕ್ಷ್ಮಮ್ಮ ಆತ್ಮಹತ್ಯೆಯ ನಾಟಕವಾಡಿದ್ದಾಳೆ. ಶಾಲೆ ಕೊಠಡಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆಕೆಯನ್ನು ಬಿಇಓ ವಾಹನದಲ್ಲಿ ಕೂರಿಸಿಕೊಂಡು ಕರೆದೊಯ್ಯಿದ್ದಿದ್ದಾರೆ.

ಎಣ್ಣೆ ಶಿಕ್ಷಕಿ ಡ್ರಾವರ್‌ನಲ್ಲಿ ಪತ್ತೆಯಾದ ಮದ್ಯದ ಬಾಟಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದರ ಮಧ್ಯೆದಲ್ಲೇ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಶಿಕ್ಷಕಿಯರನ್ನು ವರ್ಗಾವಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.