ಬಳ್ಳಾರಿಯಲ್ಲಿ ಮೂಢನಂಬಿಕೆ ಇನ್ನೂ ಜೀವಂತ – ಸತ್ತ ಬಾಲಕನನ್ನು ಬದುಕಿಸಲು 8 ಗಂಟೆ ಉಪ್ಪಿನಲ್ಲಿಟ್ಟ ಗ್ರಾಮಸ್ಥರು
ನಂಬಿಕೆಗಳು ಸದಾ ಜೀವಂತ. ಅದರಲ್ಲೂ ಮೂಢನಂಬಿಕೆಗಳು ಸದಾ ಎಚ್ಚರ. ಅಂತಹ ಒಂದು ನಂಬಿಕೆಯ ಪ್ರಯೋಗ ನಡೆದಿದೆ. ಸತ್ತವವನ್ನು ಬದುಕಿಸಲು ಹೊರಟ ವಿಲಕ್ಷಣ ಪ್ರಯೋಗ ಬಳ್ಳಾರಿ.
ಸೈನ್ಸ್ ಅದೆಷ್ಟು ಮುಂದುವರಿದಿದ್ದರೂ, ಸೋತು ಹೋಗಿ ಕೈಲಾಗದ ಸ್ಥಿತಿಯಲ್ಲಿ ಮನುಷ್ಯ ಮೌಢ್ಯತೆ, ಮೂಢನಂಬಿಕೆ ಗೆ ಬೇಗ ಬಲಿಬೀಳುತ್ತಾನೆ ಎಂಬುದಕ್ಕೆ ಇದೇ ಒಂದು ಹೊಸ ಉದಾಹರಣೆ.
ಬಳ್ಳಾರಿಯ ಸಿರವಾರ ಗ್ರಾಮದ ಶೇಖರ್ ಹಾಗೂ ಗಂಗಮ್ಮಾ ಅವರ ಕಿರಿಯ ಮಗ ಭಾಸ್ಕರ್ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದ. ಆತನನ್ನು ನೀರಿಂದ ಹೊರ ತೆಗೆಯಲಾಗಿತ್ತು. ಅಲ್ಲೇ ಇದ್ದ ಊರಿನ ಅರೆ ಬರೆ ವಿಜ್ಞಾನಿಗಳು ನೀರಿನಲ್ಲಿ ಮುಳುಗಿ ಸತ್ತವರನ್ನು 2 ಗಂಟೆಗಳ ಒಳಗೆ ಉಪ್ಪಿನಲ್ಲಿ ಹುದುಗಿಸಿಟ್ಟರೆ, ಅವರು ಮತ್ತೆ ಬದುಕುತ್ತಾರೆ ಎಂಬ ಯಾವುದೋ ಒಂದು ಸೋಷಿಯಲ್ ಮೀಡಿಯಾದ ಪೋಸ್ಟ್ ತೋರಿಸಿದ್ದಾರೆ. ಹೇಗಾದ್ರೂ ಸರಿ, ‘ಮಗಿ ಬದ್ಕಲಿ ‘ ಅಂತ ಮನೆಯವರೂ ಉಪ್ಪಿನ ಗುಪ್ಪೆಯಲ್ಪಿ 2 ಗಂಟೆ ಹೊತ್ತು ಮಗನನ್ನು ಹೂಳಲು ಒಪ್ಪಿದ್ದಾರೆ.
ಸೋಷಿಯಲ್ ಮೀಡಿಯಾದ ಆ ಒಂದು ಪೋಸ್ಟ್ ನಂಬಿ ಜನರು ಮಗುವಿನ ಶವವನ್ನು ಉಪ್ಪಿನಲ್ಲಿಟ್ಟು ಮತ್ತೆ ಬದುಕುತ್ತಾನೆ ಎಂದು ಕಾದು ಕುಳಿತಿದ್ದರು. ಆದರೆ 2 ಗಂಟೆ ಹೋಗಿ 8 ಗಂಟೆ ಆದರೂ ಬಾಲಕ ಮಗ ಬದುಕದಿದ್ದಾಗ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಮುಂದಾಗುತ್ತಾರೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪೋಸ್ಟ್ ನಂಬಿದ ಗ್ರಾಮಸ್ಥರು ಇಂತಹಾ ವಿಲಕ್ಷಣ ಪ್ರಯೋಗಕ್ಕೆ ಮುಂದಾಗಿದ್ದು ಮಾತ್ರ ವಿಪರ್ಯಾಸವೇ ಸರಿ.