ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ; ರೈಲು ತಡವಾದರೆ ನಿಮಗೆ ಸಿಗುತ್ತೆ ಈ ಸೌಲಭ್ಯಗಳು!

ರೈಲು ಪ್ರಯಾಣ ಸುಖಕರವಾದರೂ, ಸಮಯಕ್ಕೆ ಸರಿಯಾಗಿ ಬಾರದೆ ಹೋದಾಗ ಆಗುವ ತೊಂದರೆ ಅಷ್ಟಿಸ್ಪೆಪ್ಪರ್ ಹೊಟ್ಟೆಗೂ ಸರಿಯಾಗಿ ಬೀಳದೆ ಕೋಪ ಅಂತೂ ನೆತ್ತಿಗೇರಿರುತ್ತೆ. ಯಾವಾಗ ಬರುತ್ತೆ ಅಂತಾನೆ ಕಾದು ಕೂರಬೇಕಾಗುತ್ತೆ.

ಆದ್ರೆ, ಇದೀಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಪ್ರಯಾಣದ ವೇಳೆ ರೈಲು ತಡವಾದರೆ ನೀವು IRCTCಯಿಂದ ಕೆಲವು ಸೌಲಭ್ಯ ಪಡೆದುಕೊಳ್ಳಲು ಹಕ್ಕಿದೆ. ಹೌದು. ನೀವು ಈ ಸೌಲಭ್ಯವನ್ನು ಯಾವುದೇ ತೊಂದರೆಯಿಲ್ಲದೆ ಸ್ವೀಕರಿಸಬಹುದು.

ಹೌದು, ರೈಲು ತಡವಾದರೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕೆಲವು ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ನಿಮ್ಮ ರೈಲು ನಿಗದಿತ ಸಮಯಕ್ಕಿಂತ ತಡವಾದರೆ IRCTC ನಿಮಗೆ ಆಹಾರ ಮತ್ತು ತಂಪು ಪಾನೀಯವನ್ನು ನೀಡುತ್ತದೆ . IRCTCಯಿಂದ ಈ ಆಹಾರವನ್ನು ನಿಮಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ.

IRCTC ನಿಯಮಗಳ ಪ್ರಕಾರ, ರೈಲು ತಡವಾದರೆ ಪ್ರಯಾಣಿಕರಿಗೆ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ರೈಲು 30 ನಿಮಿಷ ತಡವಾದರೆ ನಿಮಗೆ ಊಟದ ಸೌಲಭ್ಯ ಸಿಗುವುದಿಲ್ಲ. ಅಡುಗೆ ನೀತಿಯಡಿ ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ತಡವಾಗಿದ್ದರೆ ಶತಾಬ್ದಿ, ರಾಜಧಾನಿ ಮತ್ತು ತುರಂತೋ ಎಕ್ಸ್‌ಪ್ರೆಸ್‌ ರೈಲುಗಳ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ.

IRCTCಯೇ ನೀಡುವ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ನಿಮ್ಮ ಹಕ್ಕಾಗಿರುತ್ತದೆ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ರೈಲು ತಡವಾಗಿ ಬಂದಾಗ ಪ್ರಯಾಣಿಕರಿಗೆ IRCTCಯ ಅಡುಗೆ ನೀತಿಯಡಿ ಉಪಹಾರ ಮತ್ತು ಲಘು ಊಟವನ್ನು ನೀಡಲಾಗುತ್ತದೆ.

ಉಪಾಹಾರದಲ್ಲಿ ಚಹಾ ಅಥವಾ ಕಾಫಿ ಮತ್ತು 2 ಬಿಸ್ಕತ್ತುಗಳನ್ನು ನೀಡಲಾಗುತ್ತದೆ. ಸಂಜೆಯ ತಿಂಡಿಯಲ್ಲಿ ಚಹಾ ಅಥವಾ ಕಾಫಿ ಮತ್ತು 4 ಬ್ರೆಡ್ ಸ್ಲೈಸ್‌ಗಳು ಮತ್ತು ಬಟರ್ ನೀಡಲಾಗುತ್ತದೆ. IRCTC ಯಿಂದ ಪ್ರಯಾಣಿಕರಿಗೆ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಅನ್ನ, ಉದ್ದಿನಬೇಳೆ ಸಾರು ಮತ್ತು ಉಪ್ಪಿನಕಾಯಿ ಪ್ಯಾಕೆಟ್‌ಗಳನ್ನು ನೀಡಲಾಗುತ್ತದೆ. ಅಥವಾ 7 ಪೂರಿಗಳು, ಮಿಕ್ಸ್ ವೆಜ್/ಆಲೂ ಭಜಿ, ಉಪ್ಪಿನಕಾಯಿ ಪ್ಯಾಕೆಟ್ ಮತ್ತು ತಲಾ 1 ಪ್ಯಾಕೆಟ್ ಉಪ್ಪು ಮತ್ತು Pepper ನೀಡಲಾಗುತ್ತದೆ ಎಂದು ತಿಳಿಸಿದೆ.

Leave A Reply

Your email address will not be published.