ಆದ್ಯತೇತರ ಪಡಿತರ ಚೀಟಿಯಾಗಿ ಪರಿವರ್ತನೆಗೊಂಡಿದ್ದ ಕಾರ್ಡ್ ದಾರರಿಗೆ ಗುಡ್ ನ್ಯೂಸ್ | ಪಡಿತರ ಚೀಟಿಗಳನ್ನು ಬಿಪಿಎಲ್ ಆಗಿ ಮುಂದುವರೆಸಲು ಸರ್ಕಾರ ಸೂಚನೆ

ಕುಟುಂಬದ ವಾರ್ಷಿಕ ವರಮಾನ ರೂ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದವರ ಕಾರ್ಡ್ ನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಇದೀಗ ಆದಾಯ ತಪ್ಪಾಗಿ ನೋಂದಣಿಯಾದವರ ಕಾರ್ಡ್ ಗಳನ್ನು ಬಿಪಿಎಲ್ ಪಡಿತರ ಚೀಟಿಯಾಗಿ ಮುಂದುವರಿಸಲು ಸೂಚಿಸಲಾಗಿದೆ.

ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಲು ನಿಗಧಿಪಡಿಸಿರುವ ಹೊರಗಿಡುವ ಮಾನದಂಡಗಳ ಆಧಾರದಲ್ಲಿ ವಾರ್ಷಿಕ ವರಮಾನ ರೂ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಮಾಹಿತಿ ಪರಿಶೀಲಿಸಿ ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಒಟ್ಟು 850 ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಆದಾಯವು ತಪ್ಪಾಗಿ ನಮೂದಾಗಿತ್ತು.

ಈ ಪಡಿತರ ಚೀಟಿಗಳನ್ನು ಕಂದಾಯಾಧಿಕಾರಿಗಳ ಮುಖಾಂತರ ಸಂಪೂರ್ಣವಾಗಿ ಪುನರ್ ಪರಿಶೀಲನೆ ಮಾಡಿ ಈ ಪಡಿತರ ಚೀಟಿಗಳನ್ನು ಬಿಪಿಎಲ್ (ಆದ್ಯತಾ ಪಡಿತರ ಚೀಟಿ)ಗಳನ್ನಾಗಿಯೇ ಮುಂದುವರೆಸಲು ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಸರ್ಕಾರವು 850 ಪಡಿತರ ಚೀಟಿಗಳನ್ನು ಆದ್ಯತಾ ಪಡಿತರ ಚೀಟಿಯನ್ನಾಗಿ ಮುಂದುವರೆಸಲು ಅನುಮತಿ ನೀಡಿ, ಪರಿವರ್ತನೆ ಕೂಡ ಮಾಡಿದೆ.

ಈ 850 ಪಡಿತರ ಚೀಟಿದಾರರಿಗೆ ಮುಂದಿನ ಅಕ್ಟೋಬರ್ 2022 ರ ಮಾಹೆಯಿಂದ ಪಡಿತರ ಹಂಚಿಕೆ ಪ್ರಾರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ಈ ಮೂಲಕ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ.

Leave A Reply

Your email address will not be published.