ಮಗಳ ಗಂಡ ದಲಿತನೆಂದು ಅತ್ತೆಯೇ ಕಿಡ್ನ್ಯಾಪ್‌ ಮಾಡ್ಸಿ ಕೊಂದಳು

ಮಗಳನ್ನು ಮದುವೆಯಾದ ವ್ಯಕ್ತಿ ದಲಿತ ಎಂಬ ಕಾರಣಕ್ಕೆ ಅತ್ತೆಯೇ ಅಳಿಯನನ್ನು ಕಿಡ್ನ್ಯಾಪ್‌ ಮಾಡಿಸಿ ಹತ್ಯೆ ಗೈದಿರುವ ಕ್ರೂರ ಘಟನೆ ಉತ್ತರಾಖಂಡದ ಅಲ್ಮೊರಾ ಜಿಲ್ಲೆಯಲ್ಲಿ ನಡೆದಿದೆ.

 

ಶುಕ್ರವಾರ ಈ ಘಟನೆ ನಡೆದಿದ್ದು, ಪನು ಅಧೋಖಾನ್‌ ರಾಜಕೀಯ ದಲಿತ ಮುಖಂಡರಾಗಿದ್ದ ಜಗದೀಶ್‌ ಚಂದ್ರ ಅವರು ಭಿಕಿಯಾಸೈನ್‌ ಪಟ್ಟಣದಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ನೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪತ್ನಿಯ ತಾಯಿ, ಆಕೆಯ ಮಲತಂದೆ ಹಾಗೂ ಮಲ ಸಹೋದರ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಪ್ಪಿನ ಉಪವಿಭಾಗದ ತಹಸೀಲ್ದಾರ್ ನಿಶಾ ರಾಣಿ ಮಾಹಿತಿ ನೀಡಿದ್ದಾರೆ.

ಆಗಸ್ಟ್‌ 21ರಂದು ದಲಿತ ಮಹಿಳೆಯೊಂದಿಗೆ ಸಪ್ತಪದಿ ತುಳಿದಿದ್ದ ಜಗದೀಶ್‌ ಚಂದ್ರ ಅವರಿಗೆ ಜೀವ ಬೆದರಿಕೆ ಬಂದಿರುವುದಾಗಿ ಆಗಸ್ಟ್‌ 27ರಂದು ಭದ್ರತೆ ಒದಗಿಸುವಂತೆ ಕೋರಿ ಆಡಳಿತಕ್ಕೆ ಪತ್ರ ಬರೆದಿದ್ದರು. ಆದರೆ ಭದ್ರತೆ ವಹಿಸದ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಅಲ್ಲದೇ ಜಗದೀಶ್‌ ಚಂದ್ರ ಅವರ ಪತ್ನಿ ತನ್ನ ಪತಿಯನ್ನು ಗುರುವಾರ ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಉತ್ತರಾಖಂಡ್‌ ಪರಿವರ್ತನ್‌ ಪಕ್ಷದ ನಾಯಕ ಪಿ.ಸಿ ತಿವಾರಿ, ಜಗದೀಶ್‌ ಚಂದ್ರ ಉಪ್ಪಿನ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ದೂರು ನೀಡದ ನಂತರ ಸೂಕ್ತ ಭದ್ರತೆ ನೀಡಿದ್ದರೆ, ರಕ್ಷಿಸಬಹುದಾಗಿತ್ತು. ಆದರೆ ಈ ಘಟನೆ ಉತ್ತರಖಂಡ್‌ಗೆ ನಾಚಿಗೇಡಿನ ಸಂಗತಿಯಾಗಿದೆ. ಮೃತರ ಪತ್ನಿಗೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Leave A Reply

Your email address will not be published.