ಬ್ಯುಟಿಫುಲ್ ಹುಡ್ಗಿ ಸಿಗಲು ‘ ಪಣಂ ‘ ನೇ ಮುಖ್ಯ, ಸುಂದರಿ ನಟಿಯನ್ನು ಮದ್ವೆಯಾದ ಈ ಜೋಡಿನ ನೋಡಿದ್ರಾ ?

ತಮಿಳಿನ ಜನಪ್ರಿಯ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ನಿನ್ನೆ ಗುರುವಾರ ನಟಿ ಮಹಾಲಕ್ಷ್ಮಿ ಅವರನ್ನು ವಿವಾಹವಾಗಿದ್ದಾರೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪತ್ನಿಯೊಂದಿಗಿನ ತಮ್ಮ ವಿವಾಹ ಸಮಾರಂಭದ ಸಂಭ್ರಮದ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮದುಮಗ ಮತ್ತು ಮದುಮಗಳು ಇಬ್ಬರೂ ತಮ್ಮ ಮದುವೆಯ ಸಾಂಪ್ರದಾಯಿಕ ಫೋಟೋಗಳಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ. ಈಗ ಈ ಅಪರೂಪದ ಜೋಡಿ ಎಲ್ಲರ ಗಮನ ಸೆಳೆದಿದೆ. ಆದರೆ ಮಹಾಲಕ್ಷ್ಮಿ ಸೆಲೆಕ್ಟ್ ಮಾಡಿದ ಹುಡುಗನನ್ನು ಕಂಡು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

 

ಪ್ರೀತಿ ಕುರುಡು ನಿಜ. ಹಾಗಂತ ಮಹಾಲಕ್ಷ್ಮೀ ಅಭಿಮಾನಿಗಳು ಈ ಮದುವೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಕಾರಣ ರವೀಂದ್ರ ಅವರ ಧಡೂತಿ ದೇಹ. ಮಹಾಲಕ್ಷ್ಮಿ ಗುಬ್ಬಚ್ಚಿ ಮರಿಯಂತೆ ಕಂಡರೆ, ರವೀಂದ್ರ ನಟಿಗಿಂತೂ ಮೂರ್ನಾಲ್ಕು ಪಟ್ಟ ದಪ್ಪ ಇದ್ದಾರೆ. ಹಾಗಾಗಿ ಇದು ನಿಜವಾಗಿಯೂ ನಡೆದ ಮದುವೆನಾ? ಅಥವಾ ಸೀರಿಯಲ್ ದೃಶ್ಯನಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಇದು ಇಬ್ಬರಿಗೂ ಎರಡನೇ ಮದುವೆ. ಮಹಾಲಕ್ಷ್ಮೀಗೆ ಒಂದು ಮಗು ಕೂಡ ಇದೆ. ಇದೆಲ್ಲವನ್ನೂ ರವೀಂದ್ರ ಒಪ್ಪಿಕೊಂಡಿದ್ದರೆ, ರವೀಂದ್ರ ಅವರ ಎಲ್ಲ ವಿಚಾರವನ್ನೂ ತಿಳಿದುಕೊಂಡು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಖುಷಿಯಿಂದ ಇರುವ ಹೊತ್ತಿನಲ್ಲಿ ‘ನಟಿಯು ಹಣಕ್ಕಾಗಿ ಆತನನ್ನು ಮದುವೆಯಾಗಿದ್ದಾರೆ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಆತನಲ್ಲಿರುವ ಝಣ ಝಣ’ ಪಣo ‘ ಕೆಲಸಮಾಡಿದೆ ಎಂದಿದ್ದಾರೆ ತಮಿಳು ಜನ.

ಕಾರಣ ಆಕೆಯ ರೂಪ, ಆತನ ಸ್ಥೂಲಕಾಯ ಮತ್ತು ಆತನ ಸ್ಥೂಲವಾದ ಬ್ಯಾಂಕ್ ಬ್ಯಾಲೆನ್ಸ್ !!

ಚಿತ್ರ ನಿರ್ಮಾಪಕ ಮತ್ತು ದೊಡ್ಡ ದುಡ್ಡಿನ ಕುಳ ರವೀಂದ್ರ ಮತ್ತು ಸೌಂದರ್ಯವಂತೆ ಯುವತಿ ಮಹಾಲಕ್ಷ್ಮಿ ಅವರು ನಿನ್ನೆ, ಸೆಪ್ಟೆಂಬರ್ 1, 2022 ರಂದು ಬೆಳಿಗ್ಗೆ 11 ಗಂಟೆಗೆ ತಿರುಪತಿಯಲ್ಲಿ ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ರವೀಂದ್ರ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ನಲ್ಲಿ ಮಹಾಲಕ್ಷ್ಮಿ ಅವರೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಮಿಳಿನ ಈ ನಿರ್ಮಾಪಕ ಲಿಬ್ರಾ ಪ್ರೊಡಕ್ಷನ್ಸ್ ಹೆಸರಿನ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ ಮತ್ತು ‘ ನಟ್ಪುನಾ ಎನ್ನನು ತೆರಿಯುಮಾ ‘ ಮತ್ತು ‘ ಮುರುಂಗೈಕೈ ಚಿಪ್ಸ್ ‘ ಸೇರಿದಂತೆ ಹಲವು ತಮಿಳು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಚಿತ್ರದ ನಿರ್ಮಾಪಕರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಬರೆದಿದ್ದಾರೆ, “ನಮಗೆ ಮಹಾಲಕ್ಷ್ಮಿಯಂತಹ ಹುಡುಗಿ ಸಿಕ್ಕರೆ, ಅವರು ಜೀವನ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಆ ಮಹಾಲಕ್ಷ್ಮಿಗೆ ಜೀವನ ಸಿಕ್ಕಿತೇ ?… ಶೀಘ್ರದಲ್ಲೇ ಬರಲಿದೆ ‘ ಫ್ಯಾಟ್ ಮ್ಯಾನ್ ಫ್ಯಾಕ್ಟ್ಸ್‌’ ನಲ್ಲಿ ” ನನ್ನ ಹೆಂಡತಿಯೊಂದಿಗೆ ಕುಟ್ಟಿ ಕಥೆ ” ಎಂದಿದ್ದಾರೆ ನಿರ್ಮಾಪಕ ರವೀಂದ್ರ.

ಮಹಾಲಕ್ಷ್ಮಿ ವಾಣಿ ರಾಣಿ, ಆಫೀಸ್, ಚೆಲ್ಲಮಯ್, ಉತಿರಿಪೂಕ್ಕಲ್ ಮತ್ತು ಒರು ಕೈ ಒಸೈ ಮುಂತಾದ ದೂರದರ್ಶನ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಜನಪ್ರಿಯ ನಟಿ ಮಹಾಲಕ್ಷ್ಮಿ. “ನನ್ನ ಜೀವನದಲ್ಲಿ ನಿನ್ನನ್ನು ಹೊಂದಲು ನಾನು ಅದೃಷ್ಟಶಾಲಿ.. ನಿನ್ನ ಬೆಚ್ಚಗಿನ ಪ್ರೀತಿಯಿಂದ ನನ್ನ ಜೀವನವನ್ನು ತುಂಬಿಸು. ಲವ್ ಯೂ ಅಮ್ಮು” ಎಂದು ನಿರ್ಮಾಪಕ ರವೀಂದ್ರ ಅವರಿಗೆ ಹೇಳಿದ್ದಾರೆ. ನಟಿ ಮಹಾಲಕ್ಷ್ಮಿ ಈ ಹಿಂದೆ ಅನಿಲ್‌ ಎಂಬವರನ್ನು ಮದುವೆಯಾಗಿದ್ದಳು. ಆದರೆ ಆ ಸಂಬಂಧ ವಿವಿಧ ಸಮಸ್ಯೆಗಳ ಕಾರಣದಿಂದ 2019 ರಲ್ಲಿ ವಿಚ್ಛೇದನ ಪಡೆದಳು. ಅವಳ ಹಿಂದಿನ ಮದುವೆಯಿಂದಲೂ ಅವಳು ಒಬ್ಬ ಮಗನನ್ನು ಕೂಡಾ ಹೊಂದಿದ್ದಾಳೆ. ಈಗ ಆಕೆ ಸಿನಿಮಾ ನಿರ್ಮಾಪಕನ್ನೇ ಮದುವೆ ಆಗಿದ್ದಾಳೆ. ಲೈಫ್ ಸೆಟ್ಟಲ್ ಆದಂತೆ ಅನ್ನುತ್ತಿದ್ದಾರೆ ತಮಿಳು ಪ್ರೇಕ್ಷಕರು. ಪಣ0 ಒಂದಿದ್ರೆ ಎಲ್ಲವೂ ಸಾಧ್ಯ ಅಂತ ಜನ ಮಾತಾಡ್ತ ಇದ್ದಾರೆ.

Leave A Reply

Your email address will not be published.