Home latest ಮದುವೆಯಾದವಳ ಜೊತೆ ‘ ಲಿವ್ ಇನ್ ರಿಲೇಷನ್ ಶಿಪ್’ | ಪ್ರಿಯತಮನಿಗೇ ‘ವಿದ್ಯುತ್ ಶಾಕ್’ ಕೊಟ್ಟು...

ಮದುವೆಯಾದವಳ ಜೊತೆ ‘ ಲಿವ್ ಇನ್ ರಿಲೇಷನ್ ಶಿಪ್’ | ಪ್ರಿಯತಮನಿಗೇ ‘ವಿದ್ಯುತ್ ಶಾಕ್’ ಕೊಟ್ಟು ಮಾರಣಾಂತಿಕ ಹಿಂಸೆ ನೀಡಿದ ಪ್ರಿಯತಮೆ…ಕಾರಣ…

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್ ಶಿಪ್ ಸಂಬಂಧಕ್ಕೆ ಯುವಕ ಯುವತಿಯರು ಮಾರು ಹೋಗ್ತಿದ್ದಾರೆ. ಆದರೆ ಕೆಲವರು ಈ ಸಂಬಂಧದಲ್ಲಿ ಸಕ್ಸಸ್ ಆಗಿ ಮದುವೆ ಆಗಿ ಮಕ್ಕಳು ಸಂಸಾರ ಅಂತ ಇರ್ತಾರೆ. ಆದರೆ ಇನ್ನು ಕೆಲವರ ಕಥೆಯಂತೂ ಟ್ರ್ಯಾಜೆಡಿಯಲ್ಲಿ ಎಂಡ್ ಆಗುತ್ತೆ. ಈ ಘಟನೆ ಅದೇ ರೀತಿಯದ್ದು.

‘ಲಿವ್ ಇನ್ ರಿಲೇಶನ್‌ಶಿಪ್‌’ ನಲ್ಲಿ ಬಿರುಕು ಮೂಡಿದ ಕಾರಣ, ಸಂಗಾತಿಯೇ ಪ್ರಿಯತಮನನ್ನು ಕಿಡ್ನ್ಯಾಪ್ ಮಾಡಿಸಿ ವಿದ್ಯುತ್ ಶಾಕ್ ಕೊಟ್ಟು ಹಿಂಸಿಸಿರುವ ಘಟನೆಯೊಂದು ನಡೆದಿದೆ.

ಈ ಘಟನೆಯ ಸಂತ್ರಸ್ತ ಮಹದೇವ ಪ್ರಸಾದ್ ಜತೆ ಈ ಹಿಂದೆ ವಾಸವಿದ್ದ ಕ್ಲಾರಾ ಆ.16ರಂದು ಭೇಟಿ ಮಾಡುವ ನೆಪದಲ್ಲಿ ಕರೆಸಿಕೊಂಡು, ನಂತರ ಉಳಿದ ಆರೋಪಿಗಳ ಜತೆ ಸೇರಿ ಅವರನ್ನು ಕಿಡ್ನ್ಯಾಪ್ ಮಾಡಿ ಗೋದಾಮಿನಲ್ಲಿ ಕೂಡಿ ಹಾಕಿ, ಮಾರಣಾಂತಿಕ ಹಲ್ಲೆ ನಡೆಸಿದ್ದರು. ವಿದ್ಯುತ್ ಶಾಕ್ ಕೊಟ್ಟು, ಹಿಂಸಿಸಿ ಮರುದಿನ ಬಿಟ್ಟು ಕಳುಹಿಸಿದ್ದರು. ಘಟನೆ ನಡೆದ ದಿನದಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಸಾದ್ ಆ.26ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಉಪಕರಣಗಳ ಸರಬರಾಜು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹದೇವ ಪ್ರಸಾದ್ ಅವರಿಗೆ 4 ವರ್ಷಗಳ ಹಿಂದೆ ಮೊಬೈಲ್ ಮಳಿಗೆಯೊಂದರಲ್ಲಿ ಕ್ಲಾರಾ ಅವರ ಪರಿಚಯವಾಗಿತ್ತು. ಕ್ರಮೇಣ ಇಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟಿತ್ತು. ಪತಿ ಮಧುನನ್ನು ತೊರೆದು ಬಂದಿದ್ದ ಕ್ಲಾರಾ ಒಂದು ವರ್ಷದಿಂದ ಮಹದೇವ ಪ್ರಸಾದ್ ಜತೆ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದಳು.

ಕೆಲ ತಿಂಗಳಿನಿಂದ ಕ್ಲಾರಾ ಮತ್ತೊಬ್ಬರ ಜತೆ ಸಂಬಂಧ ಹೊಂದಿರುವ ಬಗ್ಗೆ ಕುರಿತು ಪ್ರಸಾದ್‌ಗೆ ಅನುಮಾನ ಬಂದಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈ ಮಧ್ಯೆ ಪತಿ ಮಧು ಪುನಃ ಸಂಪರ್ಕಕ್ಕೆ ಸಿಕ್ಕಿದ್ದು, ಆತನೊಂದಿಗೆ ಕ್ಲಾರಾ ವಾಸಿಸುತ್ತಿದ್ದರು. ಸಾಂಗತ್ಯ ತೊರೆದು ಗಂಡನ ಜತೆ ವಾಸಿಸುತ್ತಿದ್ದ ಕ್ಲಾರಾ ಬೆನ್ನು ಬಿದ್ದಿದ್ದ ಪ್ರಸಾದ್, ತನ್ನೊಂದಿಗೆ ಬರುವಂತೆ ಪೀಡಿಸುತ್ತಿದ್ದ. ಈ ವಿಚಾರವನ್ನು ಕ್ಲಾರಾ ತನ್ನ ಸ್ನೇಹಿತೆ ಹೇಮಾವತಿಗೆ ತಿಳಿಸಿದ್ದರು. ಹೇಮಾವತಿ ತನ್ನ ಪತಿ ಸಂತೋಷ್‌ಗೆ ವಿಚಾರ ತಿಳಿಸಿ ಪ್ರಸಾದ್‌ಗೆ ಬುದ್ದಿ ಕಲಿಸುವ ಸಂಚು ರೂಪಿಸಿದ್ದರು.

ಅದರಂತೆ ಆ. 16ರಂದು ಕ್ಲಾರಾ, ಪ್ರಸಾದ್‌ಗೆ ಕರೆ ಮಾಡಿ ಮಾತನಾಡುವ ನೆಪದಲ್ಲಿ ಕರೆಸಿಕೊಂಡಿದ್ದಳು. ಈ ವೇಳೆ ಆಕೆಯ ಗಂಡ ಮಧು, ಸಂತೋಷ್, ಹೇಮಾವತಿ ಸೇರಿ ಉಳಿದ ಆರೋಪಿಗಳು ಕಿಡ್ಯ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.