Home latest ಭೀಕರ ಅಪಘಾತಕ್ಕೆ ತುತ್ತಾದ ಆಟೋ ಲಾರಿ; ಆಟೋದಲ್ಲಿದ್ದವರಿಗೆ ಗಂಭೀರ ಗಾಯ, ಅಷ್ಟಕ್ಕೂ ಆಟೋದಲ್ಲಿ ಏನು ಸಾಗಿಸುತ್ತಿದ್ದರು…ಇಲ್ಲಿದೆ...

ಭೀಕರ ಅಪಘಾತಕ್ಕೆ ತುತ್ತಾದ ಆಟೋ ಲಾರಿ; ಆಟೋದಲ್ಲಿದ್ದವರಿಗೆ ಗಂಭೀರ ಗಾಯ, ಅಷ್ಟಕ್ಕೂ ಆಟೋದಲ್ಲಿ ಏನು ಸಾಗಿಸುತ್ತಿದ್ದರು…ಇಲ್ಲಿದೆ ಟ್ವಿಸ್ಟ್

Hindu neighbor gifts plot of land

Hindu neighbour gifts land to Muslim journalist

ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಆಟೋಗೆ ಲಾರಿ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಈ ರಸ್ತೆ ಅಪಘಾತಕ್ಕೊಂದು ಟ್ವಿಸ್ಟ್ ಸಿಕ್ಕಿದೆ.

ಮುಮ್ಮಿಡಿವರಂ ಬಳಿ ನಡೆದ ರಸ್ತೆ ಅಪಘಾತದಲ್ಲಿ ಅಕ್ರಮವಾಗಿ ನಕ್ಷತ್ರ ಆಮೆ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕಾಟೇನಿಕೋಣ ಮಂಡಲದ ಅಗ್ರಹಾರದಲ್ಲಿ ಅಮಲಾಪುರ ಕಡೆಗೆ ಹೋಗುತ್ತಿದ್ದ ಆಟೋಗೆ ಎದುರಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.

ಅಪಘಾತದದ ತೀವ್ರತೆಗೆ ಆಟೋದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು 108 ಆಂಬುಲೆನ್ಸ್ ಸಹಾಯದಿಂದ ಅಮಲಾಪುರಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈ ಘಟನಾ ಅಪಘಾತದ ಸ್ಥಳದಲ್ಲಿ ಒಂದಷ್ಟು ಆಮೆಗಳು ಕೂಡ ಸತ್ತು ಬಿದ್ದಿದ್ದವು.

ಅಪರೂಪದಲ್ಲಿ ಅಪರೂಪವಾದ ರಕ್ಷಿತ ವನ್ಯಜೀವಿಗಳನ್ನು ಯಾರ ಕಣ್ಣಿಗೂ
ಬೀಳದಂತೆ ಗಪ್ ಚುಪ್ ಅಂತಾ ಗಡಿದಾಟಿಸುವುದಕ್ಕೆ ಆಟೋದಲ್ಲಿದ್ದವರು ಸ್ಕೆಚ್ ಹಾಕಿದ್ದರು. ಆದರೆ ಈ ಆಟೋಗೆ ಆಂಧ್ರ ಪ್ರದೇಶದಲ್ಲಿ ಅಪಘಾತ ಆಗಿದೆ‌. ಆಟೋಗೆ ಲಾರಿ ಡಿಕ್ಕಿ ಹೊಡೆದಿದೆ‌.
ಆದರೆ ಅಲ್ಲಿಗೆ ಬಂದ ಸ್ಥಳೀಯರಿಗೆ ಸತ್ತ ಅಮೆಗಳು ಕಾಣಲು ಸಿಕ್ಕಿದೆ. ರಸ್ತೆ ದಾಟುವಾಗ ವಾಹನಗಳ ಟೈರ್ ಅಡಿಯಲ್ಲಿ ಸಿಕ್ಕಿ ಬಿದ್ದು ಸತ್ತಿವೆ ಎಂದು ಸ್ಥಳೀಯರು ಭಾವಿಸಿದ್ದರು.

ಆದರೆ ಅಪಘಾತಕ್ಕೀಡಾದ ಆಟೋದಲ್ಲಿದ್ದ ಬ್ಯಾಗ್ ಗಳು ಕಂಡು ಬಂದಿದ್ದು, ಅದು ಚಲಿಸುತ್ತಿರುವ ಹಾಗೇ ಕಂಡು ಬಂದಿದೆ. ಅನುಮಾನ ಬಂದು ಚೀಲಗಳನ್ನು ತೆರೆದು ನೋಡಿದಾಗ ಅದರೊಳಗೆ 15 ಆಮೆಗಳು ಜೀವಂತವಾಗಿದ್ದವು. ಇದರಿಂದ ಆಮೆಗಳು ಕಳ್ಳಸಾಗಣೆಯಾಗುತ್ತಿರುವುದು ಸ್ಥಳೀಯರ ಅರಿವಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.