Home Entertainment ಬಿಗ್ ಬಾಸ್‌ಗೆ ಅವಾಜ್ ಹಾಕಿದ ಸೋನು | ಕ್ಷಮೆ ಕೇಳಲು ಪಟ್ಟು ಹಿಡಿದ ಟ್ರೋಲ್ ಬೆಡಗಿ

ಬಿಗ್ ಬಾಸ್‌ಗೆ ಅವಾಜ್ ಹಾಕಿದ ಸೋನು | ಕ್ಷಮೆ ಕೇಳಲು ಪಟ್ಟು ಹಿಡಿದ ಟ್ರೋಲ್ ಬೆಡಗಿ

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಒಟಿಟಿ ಆಟ ನಿಜಕ್ಕೂ ಗರಿಗೆದರುತ್ತಿದೆ. ಆಟದ ಕುತೂಹಲ ಹೆಚ್ಚಾಗುತ್ತಿದೆ. ಹಾಗೆನೇ ಎಲ್ಲರಿಗೂ ತಿಳಿದಿರುವ ಹಾಗೇ, ದೊಡ್ಮನೆಯಲ್ಲಿ ಯಾರಾದರೂ
ತಪ್ಪು ಮಾಡಿದರೆ ‘ಬಿಗ್ ಬಾಸ್’ ಆ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಜೊತೆಗೆ ಕಠಿಣ ಶಿಕ್ಷೆ ಕೂಡಾ ಕೊಡುತ್ತಾರೆ. ಹಾಗೇನೇ ‘ಬಿಗ್ ಬಾಸ್’ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಅನೇಕ ಬಾರಿ ಕಿವಿಮಾತು ಹೇಳಿಸಿಕೊಂಡಿದ್ದಾರೆ.

‘ಬಿಗ್ ಬಾಸ್ ಒಟಿಟಿ ಸೀಸನ್ 1’ನಲ್ಲಿ ಸೋನು
ಶ್ರೀನಿವಾಸ್ ಗೌಡ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ರಾಕೇಶ್ ಅಡಿಗ ಜತೆ ಆತ್ಮೀಯವಾಗಿದ್ದಾರೆ. ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಿದೆ. ಈಗ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್‌ಗೆ ಅವಾಜ್ ಹಾಕಿದ್ದಾರೆ. ಸೋನು ಈ ರೀತಿ ಹೇಳೋಕೂ ಒಂದು ಕಾರಣ ಇದೆ.

‘ಸೋನು ಮೈಕ್ ಅನ್ನು ಸರಿಯಾಗಿ ಧರಿಸಿ’ ಎಂದು ಬಿಗ್ ಬಾಸ್ ತಾಕೀತು ಮಾಡಿದ್ದಾರೆ. ಇದಕ್ಕೆ ಸೋನು ಸಿಟ್ಟಾಗಿದ್ದಾರೆ. ‘ನೋಡಿ ಬಿಗ್ ಬಾಸ್ ಮೈಕ್ ಅನ್ನು ಸರಿಯಾಗಿ ಧರಿಸಿದ್ದೇನೆ. ನೀವು ಏಕೆ ಪದೇಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಾ? ಎಂದು ಸಿಟ್ಟಾಗಿದ್ದಾರೆ.

‘ಉದ್ದೇಶ ಪೂರ್ವಕವಾಗಿಯೇ ನೀವು ಹೇಳುತ್ತಿದ್ದೀರಾ ಅಥವಾ ಬೇರೆಯವರಿಗೆ ಹೇಳುವುದನ್ನು ನನಗೆ ಹೇಳುತ್ತಿದ್ದೀರಿ ಎನಿಸುತ್ತದೆ. ನೀವು ಕ್ಷಮೆ ಕೇಳಬೇಕು’ ಎಂದು ಬಿಗ್ ಬಾಸ್‌ಗೆ ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಅಷ್ಟಕ್ಕೂ ಸೋನು ವಾದ ಮಾಡುವುದು ತಾನು ಮಾಡಿದ ತಪ್ಪನ್ನು ಒಪ್ಪದೇ ಇರುವುದು ಮೊಂಡುತನ ಮಾಡುವುದು ಇದೆಲ್ಲ ಬಿಗ್ ಬಾಸ್ ಮನೆಯಲ್ಲಿ ಮಾಮೂಲಿಯಾಗಿದೆ. ಯಾರು ಏನೇ ಹೇಳಿದರೂ ಆನೆ ನಡೆದದ್ದೇ ದಾರಿ ಎನ್ನುವ ಜಯಾಮಾನ ಸೋನು ಅವರದ್ದು.

ಈಗ ಆಗಸ್ಟ್ 27ರಂದು ಕಿಚ್ಚ ಸುದೀಪ್ ಬರಲಿದ್ದಾರೆ. ಸೋನು ಅವರು ಬಿಗ್ ಬಾಸ್ ಗೆ ಹಾಕಿದ ಅವಾಜ್ ಕುರಿತು ಚರ್ಚೆಗೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.