ಭೂಕಂಪನ : ನಿನ್ನೆ ರಾತ್ರಿ, ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವ, ಮನೆಬಿಟ್ಟು ಹೊರಗೋಡಿ ಬಂದ ಜನ | ತಜ್ಞರ ಭೇಟಿ

ಇತ್ತೀಚೆಗೆ ಎಲ್ಲೆಂದರಲ್ಲಿ ಭೂಕಂಪ ಆಗ್ತಾ ಇದೆ. ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಮುಂದುವರೆದಿದ್ದು, ನಿನ್ನೆ ರಾತ್ರಿ 8.51 ಸುಮಾರಿಗೆ ಮತ್ತು ಮಧ್ಯರಾತ್ರಿ 2.18ಕ್ಕೆ ಭೂಮಿ ಕಂಪಿಸಿದ್ದು, 3.9 ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ.

ಇಲ್ಲಿ ಮೇಲಿಂದ ಮೇಲೆ ಭೂಕಂಪನ ಉಂಟಾಗುತ್ತಿದ್ದು, ಈ ಕುರಿತು ಇಂದು ತಜ್ಞ ವಿಜ್ಞಾನಿಗಳು ಜಿಲ್ಲೆಗೆ ಆಗಮಿಸಿ ಪರೀಕ್ಷೆ ನಡೆಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಅಧ್ಯಯನ ಮಾಡಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ನಿನ್ನೆ ಸಾಯಂಕಾಲ ಹಾಗೂ ರಾತ್ರಿ ಭೂಮಿ ಕಂಪಸಿದ್ದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಇಷ್ಟರ ಬಳಿಕ ಆಗಷ್ಟ 26 ರ ನಸುಕಿನ ಜಾವ 2-21ಕ್ಕೆ ಕಂಪಿಸ ಭೂಮಿ ಕಂಪಿಸಿದ ಅನುಭವವಾಗಿದೆ. ವಿಜಯಪುರ ನಗರ ಬಸವನಬಾಗೇವಾಡಿ, ಸಿಂದಗಿ, ಇಂಡಿ, ನೆರೆಯ ಬಾಗಲಕೋಟೆಯ ಜಮಖಂಡಿ ಹಾಗೂ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕಂಪನದ ಅನುಭವ ಉಂಟಾಗಿದೆ. ಇಷ್ಟೇ ಅಲ್ಲದೆ ಇಂದು ಮುಂಜಾನೆ 6.58ಕ್ಕೆ ಮತ್ತೇ ಭೂಕಂಪನದ ಅನುಭವವಾಗಿದೆ. ಜನರು ಮನೆ ಬಿಟ್ಟು ಹೊರಗೋಡಿ ಬಂದಿದ್ದು, ಕೆಲ ಮನೆಗಳಲ್ಲಿನ ಪಾತ್ರೆ ಪಗಡೆ ಕೆಳಗೆ ಬಿದ್ದಿದ್ದವು. ಜನರು ಭೂಕಂಪನದಿಂದ ಆತಂಕಗೊಂಡಿದ್ದಾರೆ.

Leave A Reply

Your email address will not be published.