Home ದಕ್ಷಿಣ ಕನ್ನಡ ಇನ್ನು ಮುಂದೆ ಕಟೀಲು ಮೇಳಗಳಿಂದ ನಡೆಯುವ ಯಕ್ಷಗಾನಕ್ಕೆ ಕಾಲಮಿತಿ

ಇನ್ನು ಮುಂದೆ ಕಟೀಲು ಮೇಳಗಳಿಂದ ನಡೆಯುವ ಯಕ್ಷಗಾನಕ್ಕೆ ಕಾಲಮಿತಿ

Hindu neighbor gifts plot of land

Hindu neighbour gifts land to Muslim journalist

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಿಂದ ನಡೆಸಲ್ಪಡುವ 6 ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ಬದಲಾಯಿಸುವ ನಿರ್ಣಯವನ್ನು ಆಡಳಿತ ಮಂಡಳಿ ಕೈಗೊಂಡಿದೆ.

ಇತ್ತೀಚೆಗೆ ಸರಕಾರ, ರಾತ್ರಿ ಗಂಟೆ 10.30 ರಿಂದ 50 ಡೆಸಿಬಲ್‌ಗಿಂತ ಹೆಚ್ಚಿಗೆ ಧ್ವನಿವರ್ಧಕವನ್ನು ಬಳಸಬಾರದು ಎಂದು ಎಲ್ಲರಿಗೂ ನೋಟಿಸ್ ನೀಡಿರುವುದರಿಂದ ಹಾಗೂ ದೇವಸ್ಥಾನಗಳಿಗೆ ಕೂಡಾ ಸೂಚನೆ ಬಂದಿದೆ.
ಈ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಾಯಿಸುವುದು ಅನಿವಾರ್ಯವಾಗಿತ್ತು.

ಪ್ರತೀ ವರ್ಷ ಮೇಳಗಳು ಆರು ತಿಂಗಳು ತಿರುಗಾಟ ನಡೆಸುತ್ತದೆ, ವರ್ಷಕ್ಕೆ ಸುಮಾರು 1,000 ಅಧಿಕ ಪ್ರದರ್ಶನ ನೀಡುತ್ತದೆ. ರಾತ್ರಿ 8.30ಕ್ಕೆ ಪೂರ್ವರಂಗ ಆರಂಭವಾದರೆ ರಾತ್ರಿ 10.30ಕ್ಕೆ ಪ್ರಸಂಗ ಪೀಠಿಕೆ ಆರಂಭವಾಗುತ್ತದೆ ಬೆಳಗ್ಗಿನ ಜಾವ ಸುಮಾರು 5.30ಕ್ಕೆ ಯಕ್ಷಗಾನ ಮುಗಿಯುತ್ತಿತ್ತು.

ಮುಂದಿನ ದಿನಗಳಲ್ಲಿ ಸಂಜೆ 5.30ರಿಂದ ರಾತ್ರಿ 10.30ವರೆಗೆ ಯಕ್ಷಗಾನ ಸೇವೆ ನಡೆಯಲಿದೆ ಎಂದು ಕಟೀಲು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನುವಂಶಿಕ ಮೊಕ್ತೇಸರ ಕೊಡೆತ್ತೂರು ಗುತ್ತು ಸನತ್ ಕುಮಾರ ಶೆಟ್ಟಿ, ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕರಾದ ವಾಸುದೇವ ಅಸ್ರಣ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ದೇವರ ಎದುರು ಕಾಲಮಿತಿ ಯಕ್ಷಗಾನ ಬಗ್ಗೆ ಹೂಪ್ರಶ್ನೆ ಇಟ್ಟಾಗ ದೇವರ ಒಪ್ಪಿಗೆ ಬಂದಿದೆ. ಹಾಗಾಗಿ ಕಾಲಮಿತಿ ಯಕ್ಷಗಾನ ಮಾಡುವ ಬಗ್ಗೆ ಮಂಗಳವಾರ ಆಡಳಿತ ಮಂಡಳಿ ನಿರ್ಧಾರ ಮಾಡಿದ್ದು, ಸಂಜೆ 5 ಗಂಟೆಯಿಂದ ರಾತ್ರಿ 10.30ರ ತನಕ ಯಕ್ಷಗಾನ ನಡೆಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ.

ಇನ್ನು ಯಕ್ಷಗಾನ ಪ್ರದರ್ಶನದ ಸ್ವರೂಪ ಚಿಂತನೆಗಳ ಸ್ಪಷ್ಟ ರೂಪ ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.