ಸರಕಾರಿ ನೌಕರರೇ ನಿಮಗೊಂದು ಸಿಹಿ ಸುದ್ದಿ : ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ
ಸರಕಾರಿ ನೌಕರರಿಗೆ ಕೊನೆಗೂ ಗುಡ್ ನ್ಯೂಸ್ ದೊರಕಿದೆ. ತುಟ್ಟಿಭತ್ಯೆ ಹೆಚ್ಚಳವನ್ನು ಶೀಘ್ರದಲ್ಲೇ ಜಾರಿಗೊಳೊಸಲಾಗುತ್ತಿದೆ. ಸೆ.28 ರಂದು ತುಟ್ಟಿ
ಭತ್ಯೆ ಹೆಚ್ಚಳದ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಈ ಮೂಲಕ ಅಕ್ಟೋಬರ್ 1ರಿಂದ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆಯಾಗಲಿದೆ.
ಅಂದ್ದಾಗೆ, ಈಗಾಗಲೇ ಅರ್ಧವಾರ್ಷಿಕ ಅಂಕಿ-ಅಂಶಗಳನ್ನ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಬಿಡುಗಡೆ ಮಾಡಿದೆ. ಇದರಲ್ಲಿ ಸೂಚ್ಯಂಕ 0.2 ಪಾಯಿಂಟ್ ಏರಿಕೆ ಕಂಡು 129.2ಕ್ಕೆ ತಲುಪಿದೆ. ಈ ಸೂಚ್ಯಂಕ ಏರಿಕೆಯಿಂದಾಗಿ ಡಿಎಯಲ್ಲಿ ಶೇ.4ರಷ್ಟು ಏರಿಕೆಯಾಗುವುದು ಗ್ಯಾರಂಟಿ ಎಂದು ತಜ್ಞರು ಹೇಳುತ್ತಿದ್ದಾರೆ. ಅಂದ್ಹಾಗೆ, ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ನಿರ್ಧರಿಸಲು AICPI-IW ಸೂಚ್ಯಂಕದ ದತ್ತಾಂಶವನ್ನು ಬಳಸುತ್ತದೆ.
38% ಡಿಎ ಹಣ ಕೈ ಸೇರುವುದು ಯಾವಾಗ..? ತುಟ್ಟಿಭತ್ಯೆಯಲ್ಲಿ ಸದ್ಯ ಶೇ.4ರಷ್ಟು ಹೆಚ್ಚಳವಾಗಲಿದ್ದು, ನೌಕರರ ಒಟ್ಟು ತುಟ್ಟಿ ಭತ್ಯೆ ಶೇ.38ಕ್ಕೆ ತಲುಪಿದೆ. ಇನ್ನು ಈ ಹೊಸ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ 2022ರ ವೇತನದಲ್ಲಿ ಪಾವತಿಸಲಾಗುತ್ತೆ. ಇದರಲ್ಲಿ ಜುಲೈ, ಆಗಸ್ಟ್ ಎರಡು ತಿಂಗಳ ಬಾಕಿ ಹಣವೂ ಇರಲಿದ್ದು, ಹೊಸ ತುಟ್ಟಿಭತ್ಯೆಯನ್ನ ಜುಲೈ 1, 2022 ರಿಂದ ಅನ್ವಯಿಸುವಂತೆ ಪರಿಗಣಿಸಲಾಗುತ್ತದೆ.