ವಿವಿ ಕ್ಯಾಂಪಸ್‌ನಲ್ಲೇ ಪತ್ನಿಯಿಂದ ಪ್ರೊಫೆಸರ್ ಗೆ ಚಪ್ಪಲಿಯಲ್ಲಿ ಎರ್ರಾಬಿರ್ರಿ ಥಳಿತ..! ವೀಡಿಯೋ ವೈರಲ್

ಅಸಿಸ್ಟೆಂಟ್ ಪ್ರೊಫೆಸರ್ ಓರ್ವರಿಗೆ ಮಹಿಳೆಯೋರ್ವರು ಕಚೇರಿ ಸ್ಥಳದಲ್ಲಿಯೇ ಎರ್ರಾಬಿರ್ರಿ ಚಪ್ಪಲಿಯಲ್ಲಿ ಹೊಡೆದ ಘಟನೆಯೊಂದು ನಡೆದಿದೆ. ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರಿಗೆ ಅವರ ಚೇಂಬರ್‌ನೊಳಗೇ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ರೀತಿ ಥಳಿತಕ್ಕೊಳಗಾದವರನ್ನು ಬರ್ಹಾಂಪುರ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಅನಿಲ್ ಕುಮಾರ್ ಟಿರಿಯಾ ಎಂದು ತಿಳಿದುಬಂದಿದೆ.

 

ಮಹಿಳೆ ಹೊಡೆದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಅಸಿಸ್ಟೆಂಟ್ ಪ್ರೊಫೆಸರ್‌ಗೆ ಚಪ್ಪಲಿಯಲ್ಲಿ ಯರ್ರಾಬಿರಿ ಹೊಡೆದಿರುವುದು ಅವರ ಪತ್ನಿ ಎಂದು ವರದಿಗಳು ಹೇಳುತ್ತಿವೆ. ಈ ಘಟನೆ ಶನಿವಾರ ಬೆಳಗ್ಗೆ 11.30 ರ ವೇಳೆಗೆ ಅಸಿಸ್ಟೆಂಟ್ ಪ್ರೊಫೆಸರ್ ಅವರ ಚೇಂಬರ್‌ನೊಳಗೆ ನಡೆದಿದೆ. ಚೇಂಬರ್ ಗೆ ಇದ್ದಕ್ಕಿದ್ದಂತೆ ಬಂದ ಪತ್ನಿ ಕೊಠಡಿಯನ್ನು ಲಾಕ್ ಮಾಡಿಕೊಂಡಿದ್ದಾರೆ. ಅಲ್ಲದೆ, ಬಂದ ತಕ್ಷಣವೇ ಜೋರಾಗಿ ಕಿರುಚಲು ಆರಂಭಿಸಿದ್ದು ಹಾಗೂ ತನ್ನ ಚಪ್ಪಲಿಯಲ್ಲಿ ಹೊಡೆಯಲು ಆರಂಭಿಸಿದ್ದಾರೆ ಎಂಬುದನ್ನು ವೀಡಿಯೋದಲ್ಲಿ ದಾಖಲಾಗಿದೆ.

ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಈ ಘಟನೆ ನಡೆದ ಕಾರಣ ಇಡೀ ವಿವಿಯೇ ಕೆಲ ಕಾಲ ಬೆಚ್ಚಿ ಬಿದ್ದಿತ್ತು ಹಾಗೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಹ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪತಿ – ಪತ್ನಿ ನಡುವಿನ ಜಗಳವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಬಾಗಿಲು ತೆಗೆಯುವಂತೆ ಕಾಲೇಜು ಸಿಬ್ಬಂದಿಗಳು ಮಹಿಳೆಯನ್ನೂ ಕೇಳಿಕೊಂಡಿದ್ದಾರೆ. ಆದರೆ, ಆಕೆ ಒಪ್ಪದಿದ್ದಾಗ, ಅಸಿಸ್ಟೆಂಟ್ ಪ್ರೊಫೆಸರ್ ಅವರನ್ನು ರಕ್ಷಿಸಲು ವಿವಿಯ ಭದ್ರತಾ ಸಿಬ್ಬಂದಿಯನ್ನು ಕರೆದಿದ್ದಾರೆ. ನಂತರ ಕೆಲ ಪ್ರೊಫೆಸರ್‌ಗಳು ಹಾಗೂ ಇತರೆ ಸಿಬ್ಬಂದಿ ಮಹಿಳೆಯನ್ನು ಮನವಿ ಮಾಡಿದ ನಂತರ ಕೆಲ ಸಮಯದ ನಂತರ ಮಹಿಳೆ ಬಾಗಿಲು ತೆರೆದಿದ್ದಾರೆ ಎಂದು ತಿಳಿದುಬಂದಿದೆ.

https://twitter.com/niwasjha01/status/1561519116460036096?ref_src=twsrc%5Etfw%7Ctwcamp%5Etweetembed%7Ctwterm%5E1561519116460036096%7Ctwgr%5Ed0a7c8f1ac8c2296469e09e73224cdee97957918%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಒಡಿಶಾದ ಖ್ಯಾತ ವಿವಿಗಳಲ್ಲಿ ಬರ್ಹಾಂಪುರ ವಿಶ್ವವಿದ್ಯಾಲಯ ಕೂಡಾ ಒಂದು. ಇಲ್ಲಿ ಆಗ್ಗಿಂದಾಗ್ಗೆ ಕೆಲ ಪ್ರೊಫೆಸರ್‌ಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಸಹ ಕೇಳಿಬಂದಿವೆ. ಈ ದೌರ್ಜನ್ಯದ ವಿರುದ್ಧ ಕೆಲವು ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದರು ಹಾಗೂ ಸ್ಥಳೀಯ ಟಿವಿ ಮಾಧ್ಯಮದಲ್ಲೂ ಈ ಘಟನೆ ಬಗ್ಗೆ ಬಂದಿತ್ತು.

Leave A Reply

Your email address will not be published.