‘ಜೊತೆಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ್ ಔಟ್ | ಹೊಸ ನಟನ ಎಂಟ್ರಿ….ಆರ್ಯವರ್ಧನ ಪಾತ್ರಕ್ಕೆ ಹೊಸ ಹೀರೋ ಬಂದಾಯ್ತು…

‘ಜೊತೆಜೊತೆಯಲಿ’ ಆರ್ಯವರ್ಧನ್ ಪಾತ್ರದ ಅನಿರುದ್ಧ ಅವರು ಸಹ ಕಿರಿಕ್ ಮಾಡಿಕೊಂಡು ಹೊರ ನಡೆದಿದ್ದಾರೆ. ಹಾಗೂ ಎರಡು ವರ್ಷ ಕಿರುತೆರೆ ಶೂಟಿಂಗ್ ನಿಂದ ಬ್ಯಾನ್ ಮಾಡಿರುವ ವಿಷಯ ಗೊತ್ತೇ ಇದೆ. ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಬದಲಿಸಲು ಹೇಳಿದ ಅನಿರುದ್ಧ್ ಅವರ ಮಾತಿಗೆ ಧಾರಾವಾಹಿ ತಂಡ ಒಪ್ಪಿಗೆ ಸೂಚಿಸಿಲ್ಲ ಹಾಗೂ ಕ್ಷುಲ್ಲಕ ವಿಷಯಕ್ಕೆ ರೇಗಾಡುತ್ತಿದ್ದದ್ದು, ಸ್ಕ್ರಿಪ್ಟ್ ತಂತ್ರಜ್ಞರ ಕೋಪಕ್ಕೆ ಕಾರಣವಾಗಿತ್ತು. ಇದು ನಂತರ ಕಿರುತೆರೆ ನಿರ್ಮಾಪಕರ ಮಾತುಕತೆಯ ಮೂಲಕ ಬಗೆಹರಿದಿದ್ದು, ಎರಡು ವರ್ಷಗಳ ಕಾಲ ಅನಿರುದ್ಧ್ ಜತ್ಕರ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡುವ ನಿರ್ಧಾರಕ್ಕೆ ಬಂದಾಗಿದೆ. ಹಾಗಾಗಿ ಈ ಎಲ್ಲಾ ಕಾರಣದಿಂದಾಗಿ ಜೊತೆಜೊತೆಯಲಿ ಸೀರಿಯಲ್ ನಿಂದ ಅನಿರುದ್ಧ ಹೊರ ಹೋಗಿದ್ದಾರೆ

 

ನಿರ್ಮಾಪಕ ಆರೂರು ಜಗದೀಶ್ ಅವರು ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದು ಅಲ್ಲಿ ಚರ್ಚೆ ನಡೆಸಿ ಅನಿರುದ್ಧ್ ಅವರನ್ನು ಜೊತೆಜೊತೆಯಲಿ ಮಾತ್ರವಲ್ಲ ಎರಡು ವರ್ಷಗಳ ಕಾಲ ಸಂಪೂರ್ಣ ಕಿರುತೆರೆಯಿಂದಲೇ ಅನಿರುದ್ ಅವರನ್ನು ಹೊರಗೆ ಹಾಕಲಾಗಿದೆ. ಯಾವುದೇ ಧಾರಾವಾಹಿ ಯಾವುದೇ ಶೋ ದಲ್ಲಿ ಪಾಲ್ಗೊಳ್ಳುವಂತಿಲ್ಲ.

ಇದೀಗ ಆರ್ಯವರ್ಧನ್ ಪಾತ್ರಕ್ಕೆ ಹೊಸ ನಟನನ್ನೂ ಸಹ ಆಯ್ಕೆ ಮಾಡಿಕೊಳ್ಳಲಾಗಿದೆ.ಆ ನಟ ಮತ್ಯಾರೂ ಅಲ್ಲ ಅದು ಜೆಕೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಜನರ ಮನಗೆದ್ದಿದ್ದ ಜೆಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಸುದ್ದಿ ನಿಜನೇ ಆಗಿದ್ದರೆ, ಜೆಕೆ ಆರ್ಯವರ್ಧನ್ ಆಗಿ ಮಿಂಚುವಲ್ಲಿ ಹೆಚ್ಚು ದಿನ ಉಳಿದಿಲ್ಲ ಎಂದೇ ಹೇಳಬಹುದು.

Leave A Reply

Your email address will not be published.