ಶಿರಾಡಿ ಘಾಟ್ ಗೆ ಬದಲಿ ರಸ್ತೆ ಮೂಲಕ ಏಕಮುಖ
ಸಂಚಾರ – ಜಿಲ್ಲಾಡಳಿತ ಅವಕಾಶ

Share the Article

ಸಕಲೇಶಪುರ ತಾಲೂಕಿನ ಕೆಸಗನಹಳ್ಳಿ ಸಮೀಪ
ಲೋಕೋಪಯೋಗಿ ಇಲಾಖೆ ವತಿಯಿಂದ
ನಿರ್ಮಿಸಲಾಗಿರುವ ಹೊಸ ರಸ್ತೆಯಲ್ಲಿ ಶಿರಾಡಿ ಘಾಟಿಗೆ
ಹೋಗಲು 20 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳು
ಏಕಮುಖವಾಗಿ ಸಂಚರಿಸಲು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಅವಕಾಶ ಕಲ್ಪಿಸಿದ್ದಾರೆ.

ಬೆಳಗ್ಗೆ 6ರಿಂದ ಬೆಳಗ್ಗೆ 8ರ ವರೆಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ, ಬೆಳಗ್ಗೆ 9ರಿಂದ 11 ಗಂಟೆ ವರೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳಿಗೆ, ಮಧ್ಯಾಹ್ನ 12ರಿಂದ 2 ಗಂಟೆವರೆಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ, ಮಧ್ಯಾಹ್ನ 3ರಿಂದ ಸಂಜೆ 6ರ ವರೆಗೆ ಬೆಂಗ ಳೂರಿನಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Leave A Reply