‘ RSS ಎನ್ನುವುದು ಏನು ?’ ಈ ಸಿನಿಮಾ ಬರಲಿದೆ, ಬಾಹುಬಲಿ ನಿರ್ದೇಶಕ ರಾಜಮೌಳಿ ತಂದೆಯೇ ಅದರ ನಿರ್ದೇಶಕ !

ಭಾರತೀಯ ಸಿನಿಮಾ ರಂಗದ ಸದ್ಯದ ನಂಬರ್ ಒನ್ ಡೈರೆಕ್ಟರ್, ಖ್ಯಾತ ನಿರ್ದೇಶಕ, ಬಾಹುಬಲಿ ಖ್ಯಾತಿಯ ಎಸ್.ಎಸ್. ರಾಜಮೌಳಿ ಅವರ ತಂದೆ ಸ್ವತಹ ಚಿತ್ರ ನಿರ್ದೇಶನ ಮಾಡಲು ಇಳಿದಿದ್ದಾರೆ. ರಾಜ್ಯ ಸಭಾ ಸಂಸದರೂ ಆಗಿರುವ  ವಿಜಯೇಂದ್ರ ಪ್ರಸಾದ್ ಅವರು ಆರ್.ಎಸ್.ಎಸ್. ಕುರಿತಾಗಿ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡುವುದಾಗಿ ತಿಳಿಸಿದ್ದು, ಅದು ಸಿನಿ ಪ್ರಿಯರಿಗೆ ಕುತೂಹಲ ಮೂಡಿಸಿದೆ.

 

ವಿಜಯವಾಡದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ ಪ್ರಸಾದ್ ಅವರು ಆರ್ ಎಸ್ ಎಸ್ ಚಿತ್ರ ನಿರ್ಮಾಣದ ಕುರಿತು ಮಾತನಾಡಿದ್ದಾರೆ. RSS ಸಿನಿಮಾದ ಬಗ್ಗೆ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಇಡೀ ಕಥೆಯನ್ನು ಮೋಹನ್ ಭಾಗವಾತ್ ಮೆಚ್ಚಿಕೊಂಡಿದ್ದು, ಇದೊಂದು ಅಪರೂಪದ ಸಿನಿಮಾ ಆಗಲಿದೆ ಎಂದಿದ್ದಾರೆ.

ಆರ್.ಎಸ್.ಎಸ್ ಕುರಿತು ಸಿನಿಮಾ ಮತ್ತು ವೆಬ್ ಸೀರಿಸ್ ತಯಾರಾಗಲಿದ್ದು, ಎರಡಕ್ಕೂ ನಾನೇ ನಿರ್ದೇಶನ ಮಾಡಲಿದ್ದೇನೆ ಎಂದು ಹೇಳಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಬರೆಯುವುದಕ್ಕೆ ಆರಂಭಿಸಿರುವುದಾಗಿಯೇ ತಿಳಿಸಿದ್ದಾರೆ. ಆರ್.ಎಸ್.ಎಸ್ ಬಗ್ಗೆ ಊಹಾಪೋಹಗಳನ್ನು ಹರಿಬಿಡಲಾಗಿದೆ. ಗಾಂಧೀಜಿಯನ್ನು ಕೊಂದವರು ಆರ್.ಎಸ್.ಎಸ್ ನವರು ಎಂದು ಬಿಂಬಿಸಲಾಗುತ್ತಿದೆ. ಅದೆಲ್ಲದಕ್ಕೂ ಸಿನಿಮಾದಲ್ಲಿ ಉತ್ತರ ಕೊಡುತ್ತೇನೆ ಎಂದಿದ್ದಾರೆ.

ಇವತ್ತಿಗೆ ದೇಶದಲ್ಲಿ ಆರ್.ಎಸ್.ಎಸ್ ಇರದೇ ಇದ್ದರೆ ಹಿಂದೂಗಳು ಉಳಿಯುತ್ತಿರಲಿಲ್ಲ. ಕಾಶ್ಮೀರವೇ ಇರುತ್ತಿರಲಿಲ್ಲ. ಹೀಗೆ ಸಾಕಷ್ಟು ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ಆರ್.ಎಸ್.ಎಸ್ ಈ ದೇಶಕ್ಕೆ ಏನೆಲ್ಲ ತ್ಯಾಗ ಮಾಡಿದೆ, ಭಾರತಕ್ಕೆ RSS ಎಷ್ಟು ಅಗತ್ಯ ಎನ್ನುವುದನ್ನು ಚಿತ್ರದಲ್ಲಿ ವಿವರಿಸಲಿದ್ದೇನೆ ಎಂದಿದ್ದಾರೆ ವಿಜಯೇಂದ್ರ ಪ್ರಸಾದ್. ದೇಶಭಕ್ತಿಯ ಕಾಶ್ಮೀರಿ ಫೈಲ್ಸ್ ಚಿತ್ರದ ಮೂಡಿಸಿದ ಕುತೂಹಲದ ನಂತರ ಮತ್ತೊಂದು ದೇಶಭಕ್ತಿಯ ಚಿತ್ರ ಆರ್ ಎಸ್ ಎಸ್ ಆಗಲಿದೆ ಎನ್ನಲಾಗಿದೆ.

Leave A Reply

Your email address will not be published.