ವಾಹನಗಳ ದಾಖಲೆಗಳನ್ನು ಮನೆಯಲ್ಲೇ ಮರೆತು ಬಂದರೂ ನೋ ಟೆನ್ಶನ್ ; ಜಸ್ಟ್ ಇಷ್ಟೇ ಮಾಡಿದ್ರೆ ಆಯ್ತು..ನೀವು ಆಗಬಹುದು ಪಾಸ್
ಡ್ರೈವಿಂಗ್ ಲೈಸನ್ಸ್ ಅಂದರೆ ಡಿಎಲ್ ಇಲ್ಲದೆಯೇ ವಾಹನ ಚಲಾಯಿಸುವುದು ಸಾರಿಗೆ ಸಂಚಾರ ನಿಯಮಗಳಿಗೆ ವಿರುದ್ಧವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಚಾಲನ್ ವಿಧಿಸಬಹುದು. ಹಲವು ಬಾರಿ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರು ಕೂಡ ಮನೆಯಲ್ಲಿ ಮರೆತು ಹೋದ ಕಾರಣ ಪೊಲೀಸರು ನಿಮ್ಮ ಚಾಲನ್ ಕತ್ತರಿಸುತ್ತಾರೆ .
ಏಕೆಂದರೆ, ಪೊಲೀಸರು ಚಾಲನ್ ಬಗ್ಗೆ ನಿಮ್ಮನ್ನು ವಿಚಾರಣೆ ನಡೆಸಿದಾಗ ನೀವು ಡ್ರೈವಿಂಗ್ ಲೈಸನ್ಸ್ ತೋರಿಸಲೇಬೇಕು. ಡ್ರೈವಿಂಗ್ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ನಿಮಗೆ ದಂಡ ಬೀಳುತ್ತದೆ. ಆದರೆ, ಡಿಎಲ್ ಅನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗದೆಯೇ ಟೆನ್ಶನ್ ಫ್ರೀಯಾಗಿ ವಾಹನವನ್ನು ಓಡಿಸಬಹುದು.
ಹೌದು. ಡಿಜಿಲಾಕರ್ ನಿಮ್ಮ ನೆರವಿಗೆ ಬರುತ್ತದೆ. ಇದು ಸಾರ್ವಜನಿಕರಿಗೆಂದೇ ಆರಂಭಿಸಿರುವ ಅಪ್ಲಿಕೇಶನ್ ಆಗಿದ್ದು, ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಶೈಕ್ಷಣಿಕ ದಾಖಲೆಗಳು, ಸೇರಿದಂತೆ ಇತರ ದಾಖಲೆಗಳನ್ನೆಲ್ಲ ಇದರಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು. ಈ ದಾಖಲೆಗಳೆಲ್ಲ ಡಿಜಿಟಲ್ ಮಾದರಿಯಲ್ಲಿರುತ್ತವೆ.
ಹಾಗಾಗಿ ಎಲ್ಲಿ ಯಾವಾಗ ಬೇಕಾದ್ರೂ ಇದನ್ನು ಓಪನ್ ಮಾಡಲು ಅವಕಾಶವಿರುತ್ತದೆ. ನೀವು ನಿಮ್ಮ ಡಿಎಲ್ ಮತ್ತು ಇತರ ದಾಖಲೆಗಳನ್ನು ಮನೆಯಲ್ಲೇ ಮರೆತು ಬಂದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ದಾಖಲೆಗಳನ್ನು ಎಲ್ಲಾ ಇಲಾಖೆಯ ಅಧಿಕಾರಿಗಳು ಪರಿಗಣಿಸುತ್ತಾರೆ. ಡಿಜಿಲಾಕರ್ ನಮ್ಮ ಆಧಾರ್ ನಂಬರ್‌ಗೆ ಲಿಂಕ್ ಆಗಿರುತ್ತದೆ. ನಮ್ಮ ದಾಖಲೆಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಕ್ಲೌಡ್ ಸ್ಟೋರೇಜ್‌ನಲ್ಲಿ 1ಜಿಬಿ ಸ್ಪೇಸ್ ನೀಡಲಾಗುತ್ತದೆ. ಡಿಜಿಲಾಕರ್ ಓಪನ್ ಮಾಡಲು ನೀವು ಓಟಿಪಿ ಸಹಾಯ ಪಡೆದುಕೊಳ್ಳಬೇಕು. ಹಾಗಿದ್ರೆ ಡಿಜಿಲಾಕರ್‌ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ..
*ಗೂಗಲ್ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್‌ನಲ್ಲಿ ಡಿಜಿಲಾಕರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ಅಥವಾ ಅವರ ಅಧಿಕೃತ ವೆಬ್‌ಸೈಟ್ ಓಪನ್ ಮಾಡಿಕೊಳ್ಳಿ.
*ನಿಮ್ಮ ಫೋನ್ ನಂಬರ್, ಹೆಸರು, ಜನ್ಮ ದಿನಾಂಕ, ಆಧಾರ್ ಕಾರ್ಡ್ ವಿವರ, ಇಮೇಲ್ ವಿವರ ಹಾಗೂ ಇನ್ನಿತರ ವಿವರಗಳನ್ನು ನಮೂದಿಸಿ ಸೈನ್ ಅಪ್ ಮಾಡಬೇಕು. 6 ಡಿಜಿಟ್‌ಗಳ ಓಟಿಪಿ ನಮೂದಿಸಿ ನಿಮ್ಮ ಮೊಬೈಲ್ ನಂಬರ್ ಅನ್ನು ಅಧಿಕೃತಗೊಳಿಸಬೇಕು.
*ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಸೃಷ್ಟಿಸಿ ಆಧಾರ್ ನಂಬರ್ ಅನ್ನು ರಿಜಿಸ್ಟರ್ ಮಾಡಿಕೊಳ್ಳಿ.
*ಆಧಾರ್ ನಂಬರ್ ಸಬ್‌ಮಿಟ್ ಮಾಡಿದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿದಾಗ ನಿಮ್ಮ ಆಧಾರ್ ಅಲ್ಲಿ ಸೇವ್ ಆಗುತ್ತದೆ.
*ಡಿಜಿ ಲಾಕರ್ ಸೆಟಪ್ ಯಶಸ್ವಿಯಾಗಿದ್ದು, ನಿಮ್ಮ ದಾಖಲೆಗಳನ್ನ ಅಪ್ಲೋಡ್ ಮಾಡಿ ಎಂಬ ಸಂದೇಶ ಬರುತ್ತದೆ.
*ನಂತರ ಹೋಮ್ ಸ್ಕ್ರೀನ್‌ಗೆ ಹೋಗಿ, ನಿಮ್ಮ ದಾಖಲೆಗಳನ್ನು ಯಾವ ಇಲಾಖೆ ವಿತರಿಸಿರುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿ.ಯಾವ ದಾಖಲೆ ಅಪ್ಲೋಡ್ ಮಾಡಬೇಕೆಂಬುದನ್ನು ಆಯ್ಕೆ ಮಾಡಿಕೊಂಡಾಗ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕ ತಂತಾನೇ ಭರ್ತಿಯಾಗುತ್ತದೆ.
*ಸೀರಿಯಲ್ ನಂಬರ್ ಅಥವಾ ಗೆಟ್ ಡಾಕ್ಯುಮೆಂಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಸ್ಕ್ರೀನ್ ಮೇಲೆ ಕಾಣಿಸಿದ ದಾಖಲೆಯನ್ನು ಸೇವ್ ಮಾಡಿ.