ಕನ್ನಡ ಕಿರುತೆರೆಯಿಂದ ಬ್ಯಾನ್ ಮಾಡಿದ ವಿಷಯ ; ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ- ಆರೋಪಗಳಿಗೆ ಚಾಲೆಂಜ್ ಮಾಡಿದ ಅನಿರುದ್ಧ್
ನಟ ಅನಿರುದ್ಧ್ ಪತ್ರಿಕಾಗೋಷ್ಠಿ ಮಾಡಿ ತನ್ನ ವಿರುದ್ಧ ಕೇಳಿಬಂದಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ ಅವರ ಕಿರಿಕ್ ವರ್ತನೆಹೆ ಈಗ ಅವರನ್ನು ಕಿರುತೆರೆಯಿಂದ ಎರಡು ವರ್ಷ ಬ್ಯಾನ್ ಮಾಡಲಾಗಿದೆ. ಇದು ಇಂದು ಕಿರುತೆರೆ ನಿರ್ಮಾಪಕರ ತಂಡದಿಂದ ಚರ್ಚಿಸಿ ತೆಗೆದುಕೊಂಡ ನಿರ್ಧಾರ. ಇದರ ಬೆನ್ನಲ್ಲೇ ಇದೀಗ ನಟ ಅನಿರುದ್ಧ ಪತ್ರಿಕಾಗೋಷ್ಠಿ ನಡೆಸಿ ತನ್ನ ವಿರುದ್ಧ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಹೇಳಿರುವ ಪ್ರಕಾರ, ‘ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ಅದು ದುರಹಂಕಾರ ಹೇಗಾಗುತ್ತದೆ. ಅ ದುರಹಂಕಾರ ಎಂದು ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ. ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು. ಅವರ ಕಣ್ಣುಗಳೇ ಗೊತ್ತಾಗುತ್ತದೆ. ನನ್ನ ಅಭಿನಯದ ಯಾವುದೇ ಸಂಭಾವನೆಯನ್ನು ತೆಗೆದು ನೋಡಿ, ಅದರಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು. ಅಷ್ಟು ಮಾತ್ರವಲ್ಲ, ಈ ಪಾತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಇದಕ್ಕೆ ತುಂಬಾ ಕಷ್ಟ ಪಟ್ಟಿದ್ದೇನೆ. ಯಾವುದಕ್ಕಾಗಿ ಇದೆಲ್ಲ ಮಾಡಿದ್ದು. ಅಷ್ಟು ಸುಲಭ ಅಲ್ಲ ಇದು. ಇದನ್ನ ನಾನು ಮಾಡಿದ್ದು ಪಾತ್ರಕ್ಕಾಗಿ ಅಷ್ಟೆ ಎಂದು ಹೇಳಿದರು.
ಅನಂತರ ಕ್ಯಾರವಾನ್ ಆರೋಪದ ಕುರಿತು ಉತ್ತರಿಸುತ್ತಾ, ‘ನಾನು ರಂಗಭೂಮಿ ಕಲಾವಿದ, ಮಧ್ಯಮ ವರ್ಗ ವ್ಯಕ್ತಿ. ನಾ ಶೂಟಿಂಗ್ ಗೆ ಹೋದಾಗ, ಮೊದಲ ದಿನ ಕ್ಯಾರವಾನ್ ಇತ್ತು. ಆದರೆ 2ನೇ ದಿನ ಇರಲಿಲ್ಲ. ಅದನ್ನು ಕೇಳಿದ್ದಕ್ಕೆ ದುರಹಂಕಾರ ಹೇಗೆ ಆಗುತ್ತದೆ. ಇದು ಬೇಸಿಕ್, ನನಗೆ ಬಿಡಿ, ಆದರೆ ಹೆಂಗಸರು ಎಲ್ಲಿಗೆ ಹೋಗುತ್ತಾರೆ ಎಂದು ಅನಿರುದ್ಧ ಪ್ರಶ್ನೆ ಮಾಡಿದ್ದಾರೆ.
ಮೊದಲೇ ಹೇಳಿದ ಹಾಗೇ, ನಾನು ಹೋಮ್ ವರ್ಕ್ ಮಾಡಿಬರುವ ವ್ಯಕ್ತಿ. ಹಾಗಾಗಿ ಹಿಂದಿನ ದಿನ ನನಗೆ ಸ್ಕ್ರಿಪ್ಟ್ ಪೇಪರ್ ಕಳುಹಿಸಿ, ಎಂದು ನಾನು ಈ ಧಾರಾವಾಹಿ ಒಪ್ಪಿಕೊಳ್ಳುವಾಗಲೇ ಹೇಳಿದ್ದೆ. ನನಗೂ ಜವಾಬ್ದಾರಿ ಇದೆ. ಕೆಲವು ಸಂಭಾವಣೆ ಬದಲಾಯಿಸಬೇಕಾಗುತ್ತದೆ. ಮನಸ್ತಾಪ, ಭಿನ್ನಾಪ್ರಾಯ ಆಗುವುದು ಸಾಮಾನ್ಯ. ಅದೂ ಕಥೆಗಾಗಿ ಅಷ್ಟೆ. ಇದನ್ನು ಹೊರಗಡೆ ಹೇಳುವ ಅವಶ್ಯಕತೆ ಇಲ್ಲ. ಬೀದಿಗೆ ತರುವ ಅವಶ್ಯಕತೆ ಇರಲಿಲ್ಲ, ಅದು ನನ್ನ ಸಂಸ್ಕಾರ ಅಲ್ಲ ಎಂದು ಆರೂರು ವಿರುದ್ಧ ಅಸಮಾಧಾನ ಹೊರಹಾಕಿದರು.
‘ನಾನು ಮೊದಲೇ ಹೇಳಿದ್ದೆ. ಸ್ಕ್ರಿಪ್ಟ್ ಒಂದು ದಿನ ಮೊದಲೇ ಬೇಕು ಅಂತ ಆದರೂ ಸೆಟ್ ಗೆ ಬಂದಾಗ ಸ್ಕ್ರಿಪ್ಟ್ ಕೊಡುತ್ತಾರೆ. ಅದನ್ನ ಓದಲು ತುಂಬಾ ಸಮಯವಾಗುತ್ತದೆ. ಅನೇಕ ಬಾರಿ ಸರಿ ಇಲ್ಲ ಅಂತ ಹೇಳಿದ್ದೆ ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ಅಷ್ಟೇ ಮನಸ್ತಾಪ ಆಗಿದ್ದು. ಇದನ್ನು ಅವರು ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ, ನಾನು ನನ್ನ ಮಕ್ಕಳ ಮೇಲೆ ಕೈ ಇಟ್ಟು ಹೇಳುತ್ತೇನೆ ಎಂದು ಚಾಲೆಂಜ್ ಹಾಕಿದರು.
ನಾನು ಹೋರಾಟ ಮಾಡಿದ್ದು ಸ್ಕ್ರಿಪ್ಟ್ ಗೋಸ್ಕರ ಅಷ್ಟೇ. ಕೊನೆಯ ನಿಮಿಷಕ್ಕೆ ಸ್ಕ್ರಿಪ್ಟ್ ಕೊಟ್ಟರೆ ನನಗೆ ಕೋಪ ಬರುತ್ತೆ. ನನ್ನ ಪಾತ್ರ ನೆಗೆಟಿವ್ ಆಗಬಾರದು ಎಂದು ಮೊದಲೇ ಹೇಳಿದ್ದೆ ಅದಕ್ಕೆ ಒಪ್ಪಿದ್ದರು ಕೂಡಾ. ಆದರೆ ನಂತರ ಅದನ್ನು ನೆಗೆಟಿವ್ ಮಾಡಿದ್ದಾರೆ. ಆದರೂ ನಾನು ಮಾಡಿದೆ. ಈಗ ಅವರು ಅನಿರುದ್ಧ ಒಪ್ಪಿಕೊಳ್ಳುತ್ತಿಲ್ಲ ಅಂತ ನನ್ನ ಮೇಲೆ ಹೇಳುತ್ತಿದ್ದಾರೆ. ಇದನ್ನು ಸಹ ಅವರು ಅವರ ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ ಎಂದು ಹೇಳಿದರು. ನನ್ನ ಮಾನಹಾನಿಯಾಗಿದೆ ಇದನ್ನು ಯಾರಿಗೆ ಹೇಳುವುದು ಎಂದು ಪ್ರಶ್ನೆ ಮಾಡಿದ್ದಾರೆ.