ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಘಳಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ನೀಲಕಂಠ’ ನ ಬೆಡಗಿ ‘ಇಂದ್ರ’ನ ಚೆಲುವೆ ನಟಿ ನಮಿತಾ
ಸಿನಿ ರಂಗದಲ್ಲಿ ಈಗ ನಟಿಯರು ತಾಯಂದಿರಾಗಿ ತಮ್ಮ ಖುಷಿನ ಹಂಚಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ನಟಿ ಅಮೂಲ್ಯ ಅವರು ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ತನ್ನ ಮುದ್ದು ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿ, ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಈಗ ಮತ್ತೋರ್ವ ನಟಿ ನೀಲಕಂಠನ ಬೆಡಗಿ, ಅವಳಿ ಮಕ್ಕಳಿಗೆ ಜನ್ಮ ನೀಡಿದ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಹೌದು ಬಹುಭಾಷಾ ನಟಿ ನಮಿತಾ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಘಳಿಗೆಯಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
‘ನೀಲಕಂಠ’, ‘ಇಂದ್ರ’ ಸಿನಿಮಾ ನಟಿ
ನಮಿತಾ ಅವರು ಅವಳಿ ಮಕ್ಕಳಿಗೆ ಜನ್ಮ
ನೀಡಿದ್ದಾರೆ. ನವೆಂಬರ್ 2017 ರಲ್ಲಿ ನಟ-ಉದ್ಯಮಿ ವೀರೇಂದ್ರ ಚೌಧರಿ ಅವರನ್ನು ನಮಿತಾ ವಿವಾಹವಾದರು. ಈ ಜೋಡಿಯು ತಿರುಪತಿಯಲ್ಲಿರುವ ಇಸ್ಕಾನ್‌ನ ಲೋಟಸ್ ಟೆಂಪಲ್‌ನಲ್ಲಿ ತಮ್ಮ ಕುಟುಂಬ, ಸ್ನೇಹಿತರು ಮತ್ತು ಟಿವಿ ಮತ್ತು ಚಲನಚಿತ್ರ ಉದ್ಯಮದ ಗಣ್ಯರ ಸಮ್ಮುಖದಲ್ಲಿ ವಿವಾಹವಾದರು. ಮೇ 1 ರಂದು ತಮ್ಮ ಹುಟ್ಟುಹಬ್ಬದಂದು ನಮಿತಾ ತಾವು ಗರ್ಭಿಣಿಯಾಗಿರುವುದನ್ನು ಘೋಷಿಸಿದರು.
“ಮಕ್ಕಳ ವಿಷಯವನ್ನು ಹೇಳಿರುವ ನಮಿತಾ ಎಲ್ಲರ ಬಳಿ ಪ್ರೀತಿ, ಸಹಕಾರ ಇರಲಿ” ಎಂದು ಕೇಳಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಮಿತಾ” ಹರೇ ಕೃಷ್ಣ, ಈ ಶುಭದಿನದಂದು ನಾವು ಖುಷಿಯ ಸುದ್ದಿ ತಿಳಿಸಲು ಬಯಸುತ್ತೇವೆ. ನಮ್ಮಿಬ್ಬರಿಗೂ ಅವಳಿ ಗಂಡು ಮಕ್ಕಳು ಹುಟ್ಟಿವೆ. ನಿಮ್ಮ ಆಶೀರ್ವಾದ, ಹಾರೈಕೆ ನಮ್ಮ ಮೇಲಿರುತ್ತದೆ ಎಂದು ಭಾವಿಸುತ್ತೇವೆ’ ಎಂದು ಹೇಳಿದ್ದಾರೆ.