Big News | ಅಮೆರಿಕದ ಜನರಲ್ ಮೋಟಾರ್ಸ್ ಪ್ಲ್ಯಾಂಟ್ ಮಹೀಂದ್ರಾ ತೆಕ್ಕೆಗೆ ?!
ದೇಶದ ಅತೀ ದೊಡ್ಡ ವಾಹನ ತಯಾರಕ ಕಂಪೆನಿ ಮಹಿಂದ್ರಾ ಕಂಪನಿಯು ತಾಳೆಗಾಂವ್‌ನಲ್ಲಿರುವ ಜನೆರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕವನ್ನು ಮಹಿಂದ್ರಾ ಖರೀದಿಸುವ ಎಲ್ಲ ಸಾಧ್ಯತೆಗಳು ಇವೆ.
ಮಹಿಂದ್ರಾ ಕಂಪನಿಯ ಸಾಕಷ್ಟು ಹಿರಿಯ ಅಧಿಕಾರಿಗಳು ಈಗಾಗಲೇ ಜನೆರಲ್ ಮೋಟಾರ್ಸ್ ಘಟಕವನ್ನು ಹಲವು ಬಾರಿ ಪರಿಶೀಲಿಸಿ ಹೋಗಿದ್ದಾರೆ. ಮಹಿಂದ್ರ ಸೇರಿದಂತೆ ಬ್ರಿಟಿಷ್ ಮೂಲದ ಎಂ.ಜಿ ಮೋಟಾರ್ಸ್ ಸಹ ತನ್ನ ತೆಕ್ಕೆಗೆ ಪಡಿಯಲು ಸಜ್ಜಾಗಿದೆ. ಆದರೆ ಎಂ.ಜಿ ಮೋಟಾರ್ಸ್ ಹಿಂದೆ ಚೀನಾ ಹೂಡಿಕೆ ಇದ್ದು ಇದರ ಪರಿಶೀಲನೆ ಮತ್ತು ಎಲ್ಲ ಪ್ರಕ್ರಿಯೆಗಳು ಸಾಕಷ್ಟು ವಿಳಂಬ ಆಗುವುದರಿಂದ ಜನೆರಲ್ ಮೋಟಾರ್ಸ್ ಮಾತುಕತೆ ಇಂದ ಹಿಂದೆ ಹೆಜ್ಜೆ ಇಟ್ಟಿದೆ.
ಸದ್ಯ ಮಹಿಂದ್ರ ಕಂಪನಿಗೆ ಈ ಡೀಲ್ ಒಪ್ಪಿಗೆ ಆದರೆ ವಿದೇಶಿ
ಆಟೋ ಮೊಬೈಲ್ ಘಟಕವನ್ನು ಖರೀದಿಸಿದ ದೇಶದ ಎರಡನೇ ಕಂಪನಿ ಎಂಬ ಹೆಗ್ಗಳಿಕೆ ಸಿಗಲಿದೆ. ಈ ಹಿಂದೆ ಫೋರ್ಡ್ಡ್ ಕಂಪನಿಯ ಘಟಕವನ್ನು ಟಾಟಾ ಖರೀದಿಸಿತ್ತು.
ಮಹಿಂದ್ರ 2027 ಒಳಗೆ 2 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಲು ಸಜ್ಜಾಗಿದೆ. ಆದ್ದರಿಂದ ಹೊಸ ಉತ್ಪಾದನಾ ಘಟಕ ಖರೀದಿಸಲು ಪೈಪೋಟಿಯಲ್ಲಿ ನಿಂತಿದೆ ಎಂಬ ಮಾಹಿತಿ ವಾಹನ ಉದ್ಯಮ ವಲಯದಿಂದ ಬರ್ತಿದೆ.