ಕೊನೆಗೂ ಈಡೇರಿತು ಕಾಫಿ ನಾಡು ಚಂದುವಿನ ಆಸೆ | ಜೀ ಕನ್ನಡ ವೇದಿಕೆಯಲ್ಲಿ ಶಿವಣ್ಣನ ಭೇಟಿಯಾಗಿ ಹಾಡು ಹೇಳಿದ ಚಂದು
ಸೋಶಿಯಲ್ ಮೀಡಿಯಾ ತೆರೆದ್ರೆ ಸಾಕು ಎಲ್ಲೆಲ್ಲೂ ಇವರದ್ದೇ ಹವಾ.. ಯಾರು ಅಂತ ಗೊತ್ತಾಗಿಲ್ವ. ಅವ್ರೆ ನಮ್ಮ ‘ಹ್ಯಾಪಿ ಬರ್ತ್ ಡೇ’ ಸಿಂಗರ್. ಅದೇ ನಮ್ಮ ಕಾಫಿನಾಡು ಚಂದು. ಹೌದು. ಸದ್ಯ ಎಲ್ಲರ ಮನ ಗೆದ್ದಿರುವ ಕಾಫಿ ನಾಡು ಚಂದು ಎಲ್ಲರ ಬರ್ತ್ ಡೇ ಅಂದು ಸ್ಟೇಟಸ್ ನಲ್ಲಿ ಮಿಂಚುತ್ತಿರುತ್ತಾರೆ. ಯಾರದಾದ್ರೂ ಬರ್ತ್ ಡೇ ಇದ್ರೆ ಸಾಕು ಎಲ್ಲರ ಬಾಯಲ್ಲಿ ಕಾಫಿನಾಡು ಚಂದುದೇ ಹಾಡುಗಳು. ಅಷ್ಟರ ಮಟ್ಟಿಗೆ ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಸ್ಟಾರ್ ಆಗ್ಬಿಟ್ಟಿದ್ದಾರೆ.
ಅಷ್ಟೇ ಯಾಕೆ, ಈಗ ಕಾಫಿ ನಾಡು ಚಂದು ಸೆಲೆಬ್ರಿಟಿಯೇ ಆಗಿಬಿಟ್ಟಿದ್ದಾರೆ. ಬರ್ತ್ ಡೇ ಸಾಂಗ್ ನಿಂದಲೇ ಮಿಂಚಿನ ವೇಗದಲ್ಲಿ ಫೇಮಸ್ ಆಗಿದ್ದು, ಅವರ ಹಾಡು, ಕಾಮಿಡಿಗೆ ಜನ ಬಿದ್ದು-ಬಿದ್ದು ನಗುತ್ತಾರೆ. ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆ ಎಲ್ಲೆಡೆ ಫೇಮಸ್ ಆಗಿರುವ ಕಾಫಿನಾಡು ಚಂದು, ಇದೀಗ ನಿರೂಪಕಿ ಅನುಶ್ರೀ ಮುಂದೆ ಮಹತ್ವದ ಬೇಡಿಕೆಯೊಂದನ್ನು ಇಟ್ಟು ಅದನ್ನು ನೆರವೇರಿಸಿಕೊಂಡಿದ್ದಾರೆ.
ಹೌದು. ಆಗಸ್ಟ್ 18ರಂದು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೂಟಿಂಗ್ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್ಕುಮಾರ್ ಮುಂದೆ ಹಾಡು ಹೇಳಲು ಕಾಫಿ ನಾಡು ಚಂದುಗೆ ಅವಕಾಶ ಸಿಕ್ಕಿದೆ. ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎಂದು ಹಾಡು ಹಾಡುತ್ತಲೇ ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಿಸುವಂತೆ ಅನುಶ್ರೀಗೆ ಮನವಿ ಮಾಡಿದ್ದರು.
ಇದೀಗ ಕನಸನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಚಂದು ಅವರನ್ನು ಕರೆಸಲಾಗಿದೆ. ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಆಗಸ್ಟ್ 18ರಂದು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೂಟಿಂಗ್ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್ಕುಮಾರ್ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ. ಎಲ್ಲರನ್ನೂ ಅವರು ಭರ್ಜರಿಯಾಗಿ ಮನರಂಜಿಸಿದ್ದಾರೆ. ಚಂದು ಹೇಳಿದ ಹಾಡು ಕೇಳಿ ಶಿವಣ್ಣ ಕೂಡ ಚಪ್ಪಾಳೆ ತಟ್ಟಿದ್ದಾರೆ. ಶೂಟಿಂಗ್ ವೇಳೆ ಮೊಬೈಲ್ನಲ್ಲಿ ಸೆರೆಯಾದ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.
ಇನ್ನು, ಅನುಶ್ರೀ ಅವರ ಜೊತೆ ಚಂದು ಹೊಸದಾಗಿ ರೀಲ್ಸ್ ಮಾಡಿದ್ದಾರೆ. ಅದು ಕೆಲವೇ ಗಂಟೆಗಳಲ್ಲಿ ಐದೂವರೆ ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಲಕ್ಷಾಂತರ ಜನರು ಲೈಕ್ ಮಾಡಿದ್ದು, ಸಾವಿರಾರು ಕಮೆಂಟ್ಗಳು ಬಂದಿವೆ. ಅನುಶ್ರೀ ಕೂಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆ ಅವರು ಚಂದು ರೀತಿಯಲ್ಲಿ ರೀಲ್ಸ್ ಮಾಡಿದ್ದರು. ಒಟ್ಟಿನಲ್ಲಿ ಚಂದುಗೆ ಇದ್ದ ಜನಪ್ರಿಯತೆ ಈಗ ಇನ್ನಷ್ಟು ಹೆಚ್ಚಿದೆ. ಕಾಫಿ ನಾಡು ಚಂದು ಇನ್ನೂ ಎತ್ತರಕ್ಕೆ ಬೆಳೆಯೋದ್ರಲ್ಲಿ ಡೌಟ್ ಯೇ ಇಲ್ಲ..