Home Jobs Post Office Recruitment : ಅಂಚೆ ಇಲಾಖೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ, ಹೆಚ್ಚಿನ...

Post Office Recruitment : ಅಂಚೆ ಇಲಾಖೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ, ಹೆಚ್ಚಿನ ಮಾಹಿತಿ ಇಲ್ಲಿದೆ!!!

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಅಂಚೆ ಇಲಾಖೆಯಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ 23 ವೃತ್ತಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ.

ಇಂಡಿಯಾ ಪೋಸ್ಟ್ ಬಿಡುಗಡೆ ಮಾಡಿದ  ಅಧಿಸೂಚನೆಯ ಪ್ರಕಾರ ಹುದ್ದೆಗಳ ಲಿಸ್ಟ್ ಈ ರೀತಿ ಇದೆ. 59,099 ಪೋಸ್ಟ್ ಮ್ಯಾನ್
1445 ಮೇಲ್ ಗಾರ್ಡ್
37,539 ಮಲ್ಟಿ ಟಾಸ್ಕಿಂಗ್ ಪೋಸ್ಟ್ ಗಳು ಖಾಲಿ ಇವೆ.

ಇವುಗಳೊಂದಿಗೆ ಸ್ಟೆನೋಗ್ರಾಫರ್ ಗೆ ಸಂಬಂಧಿಸಿದ ಹುದ್ದೆಗಳನ್ನೂ ವೃತ್ತವಾರು ಮಂಜೂರು ಮಾಡಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಬಗ್ಗೆ ಜ್ಞಾನ ಹೊಂದಿರಬೇಕು. ಕೆಲವು ಹುದ್ದೆಗಳಿಗೆ ಅಭ್ಯರ್ಥಿಗಳು ಇಂಟರ್ ಅಥವಾ 12ನೇ ತರಗತಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು ಕನಿಷ್ಠ 18 ವರ್ಷಗಳು, ಗರಿಷ್ಠ 32 ವರ್ಷಗಳು ಎಂದು ಭಾರತೀಯ ಅಂಚೆ ಇಲಾಖೆ ಹೇಳಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :
India Post –indiapost.gov.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮುಖಪುಟದಲ್ಲಿ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಿ.

ನೀವು ಅರ್ಜಿ ಸಲ್ಲಿಸಲು ಬಯಸುವ ಪೋಸ್ಟ್ ಅನ್ನು ಆಯ್ಕೆ ಮಾಡಿ, ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ನೀವೇ ನೋಂದಾಯಿಸಿ
ಫಾರ್ಮ್ ಅನ್ನು ಭರ್ತಿ ಮಾಡಿ
ಶುಲ್ಕವನ್ನು ಪಾವತಿಸಿ, ಸಲ್ಲಿಸಿ
ಹೆಚ್ಚಿನ ಬಳಕೆಗಾಗಿ ಸ್ವೀಕೃತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಉಳಿಸಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅಂಚೆ ಮೋಟಾರ್ ಸೇವೆಗಳು, ಅಂಚೆ ಸೇವೆಗಳ ಗುಂಪು ಬಿ ಪೋಸ್ಟ್ ಗಳು, ಸಹಾಯಕ ಸೂಪರಿಂಟೆಂಡೆಂಟ್ ಹುದ್ದೆಗಳು, ಇನ್ಸ್ ಪೆಕ್ಟರ್ ಮತ್ತು ಪೋಸ್ಟಲ್ ಆಪರೇಟಿವ್ ಸೈಡ್ ವಿಭಾಗಗಳಲ್ಲಿ ಪೋಸ್ಟ್ ಗಳು ಲಭ್ಯವಿದೆ. ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್, ಸ್ಟೆನೋಗ್ರಾಫರ್, ಮಲ್ಟಿ ಟಾಸ್ಕಿಂಗ್ ಸ್ಟಾಪ್, ಉಳಿತಾಯ ಬ್ಯಾಂಕ್ ನಿಯಂತ್ರಣ ಸಂಸ್ಥೆಗೆ ಸಂಬಂಧಿಸಿದ ಹುದ್ದೆಗಳು ಮತ್ತು ರೈಲ್ವೆ ಮೇಲ್ ಸೇವೆಗಳ ಅಡಿಯಲ್ಲಿ ಪ್ರಾದೇಶಿಕ ಕಚೇರಿಗಳಂತಹ ಕೇಡರ್ ಹುದ್ದೆಗಳಿಗೆ ಎಷ್ಟು ಹುದ್ದೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂಬುದನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.