Home Interesting ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ | ಮೂರು ಗಂಟೆಯೊಳಗೆ ಕೊಲೆ ಮಾಡುವುದಾಗಿ ಕರೆ

ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ | ಮೂರು ಗಂಟೆಯೊಳಗೆ ಕೊಲೆ ಮಾಡುವುದಾಗಿ ಕರೆ

Hindu neighbor gifts plot of land

Hindu neighbour gifts land to Muslim journalist

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ ಬಂದಿದ್ದು, ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಡಿಸ್ಪ್ಲೇ ಸಂಖ್ಯೆಗೆ ಬೆದರಿಕೆ ಕರೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು  ತಿಳಿಸಿದ್ದಾರೆ. ಸೋಮವಾರ ನಾವು ಆಸ್ಪತ್ರೆಯವರಿಂದ ದೂರು ಸ್ವೀಕರಿಸಿದ್ದು ಅದನ್ನು ಪರಿಶೀಲಿಸುತ್ತಿದ್ದೇವೆ. ಆಸ್ಪತ್ರೆಯ ಡಿಸ್ಪ್ಲೇ ನಂಬರ್‌ಗೆ ಕರೆ ಮಾಡಲಾಗಿದೆ ಎಂದು ತೋರುತ್ತಿದೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಬೆದರಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ

ಮುಖೇಶ್ ಅಂಬಾನಿ ಕುಟುಂಬಕ್ಕೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ನೀಡುವ ಒಟ್ಟು ಎಂಟು ಕರೆಗಳು ಮಾಡಿದ್ದು, ಮೂರು ಗಂಟೆಗಳಲ್ಲಿ ಮುಗಿಸುತ್ತೇನೆ ಎಂದು ಹೇಳಿದ್ದಾನೆ. ಮುಂಬೈ ಪೊಲೀಸರಿಗೆ ನಾನು ದೂರು ನೀಡಿದ್ದೇನೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಿಇಒ ಡಾ ತರಂಗ್ ಗಿಯಾನ್ ಚಂದಾನಿ ಹೇಳಿದ್ದಾರೆ. ಇದಕ್ಕಿಂತ ಮುನ್ನ 2021ರಲ್ಲಿ ಅಂಬಾನಿ ಮನೆಯ ಬಳಿ ಸ್ಫೋಟಕವಿರಿಸಿದ್ದ ಎಸ್​ಯುವಿ ಕಾರು ಪತ್ತೆಯಾಗಿತ್ತು. ಆ ಕಾರಿನೊಳಗೆ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಅಂಬಾನಿ ಕುಟುಂಬಕ್ಕೆ ಬೆದರಿಕೆಯೊಡ್ಡಿರುವ ಪತ್ರವೂ ಇತ್ತು. ಈ ಬೆದರಿಕೆ ಹಿನ್ನಲೆಯಲ್ಲಿ ಮುಖೇಶ್ ಅವರಿಗೆ ಜೆಡ್ ಪ್ಲಸ್ ಸುರಕ್ಷಾ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಅದಾಗ್ಯೂ, ಇದರ ಖರ್ಚನ್ನು ಅಂಬಾನಿ ಅವರೇ ಭರಿಸುತ್ತಿದ್ದಾರೆ. ಅಂಬಾನಿ ಮತ್ತು ಅವರ ಕುಟುಂಬಕ್ಕೆ ನೀಡಿರುವ ಜೆಡ್ ಪ್ಲಸ್ ಸುರಕ್ಷಾ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2020 ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ತಳ್ಳಿ ಹಾಕಿತ್ತು.

ಸಾಮಾನ್ಯವಾಗಿ ಸುರಕ್ಷಾ ವ್ಯವಸ್ಥೆಯು X, Y, Y-plus, Z, Z-plus ನಿಂದ SPG (Special Protection Group) ಹೀಗಿರುತ್ತದೆ. ಈ ರೀತಿಯ ಸುರಕ್ಷಾ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನಿಗೆ 55 ಮಂದಿ ಭದ್ರತಾ ಸಿಬ್ಬಂದಿಗಳಿರುತ್ತಾರೆ.ಜೆಡ್ ಪ್ಲಸ್ ಮತ್ತು ಜೆಡ್ ಸುರಕ್ಷಾ ವ್ಯವಸ್ಥೆಯಲ್ಲಿ ಬೆಂಗಾವಲು ವಾಹನಗಳೂ ಇರುತ್ತವೆ. ವಿಐಪಿ ಮತ್ತು ವಿವಿಐಪಿಗಳಿಗೆ ಜೆಡ್ ಪ್ಲಸ್ ಸುರಕ್ಷಾವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಎನ್‌ಎಸ್ ಜಿಗಳು ಭದ್ರತೆಗಿರುತ್ತಾರೆ. ಜೆಡ್ ಕೆಟಗರಿಯಲ್ಲಿ 22 ಭದ್ರತಾ ಸಿಬ್ಬಂದಿಗಳಿರುತ್ತಾರೆ ಎಂದು ವರದಿ ಮಾಡಿದೆ.