ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಆ.22 ಕೊನೆಯ ದಿನಾಂಕ

ಮಹಾಲಕ್ಷ್ಮೀಪುರ ಶ್ರೀ ವಾಸವಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಂಗಳೂರು, ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.

 

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-08-2022

ಹುದ್ದೆ : ದ್ವಿತೀಯ ದರ್ಜೆ ಸಹಾಯಕರು 

ವಿದ್ಯಾರ್ಹತೆ : ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಕಾಂ, ಬಿಬಿಎ, ಮತ್ತು ಬಿಬಿಎಂ ಪದವಿ ಅಥವಾ ಮೇಲ್ಪಟ್ಟ ಪದವಿಯನ್ನು ಪಡೆದಿರಬೇಕು.
ಕೌಶಲಗಳು: ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ
ಓದುವ ಹಾಗೂ ಬರೆಯುವ ಕ್ಷಮತೆ ಇರತಕ್ಕದ್ದು ಹಾಗೂ ಕಂಪ್ಯೂಟರ್ ಅನುಭವ ಇರತಕ್ಕದ್ದು.
ವಯೋಮಿತಿ ಅರ್ಹತೆ : 35 ವರ್ಷಗಳನ್ನು
ಮೀರಿರಬಾರದು.

ಹುದ್ದೆ ಹೆಸರು : ವಸೂಲಾತಿ ಸಿಬ್ಬಂದಿ

ವಿದ್ಯಾರ್ಹತೆ : ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಮೇಲ್ಪಟ್ಟ ಪದವಿಯನ್ನು ಪಡೆದಿರಬೇಕು.
ಇತರೆ ಅರ್ಹತೆ : ಕಂಪ್ಯೂಟರ್ ಅನುಭವ ಹೊಂದಿರತಕ್ಕದ್ದು.
ವಯೋಮಿತಿ : ಗರಿಷ್ಠ 35 ವರ್ಷ ಆಗಿರಬೇಕು.
ಅನುಭವ : ಯಾವುದಾದರೂ ಹಣಕಾಸು ಸಂಸ್ಥೆಗಳಲ್ಲಿ ಈ ಹುದ್ದೆಗಳಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಾಗುವುದು.

ವಸೂಲಾತಿ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ದ್ವಿಚಕ್ರವಾಹನದ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು. ಇವುಗಳ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ತೇರ್ಗಡೆಯಾದ ವಿದ್ಯಾರ್ಹತೆ ಮತ್ತು ಅನುಭವ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಸ್ವವಿವರಗಳೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ : ಕಾರ್ಯದರ್ಶಿ ರವರು, ಮಹಾಲಕ್ಷ್ಮೀಪುರ ಶ್ರೀ ವಾಸವಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಮಹಾಲಕ್ಷ್ಮೀ ಬಡಾವಣೆ,
ಬೆಂಗಳೂರು-560086.

Leave A Reply

Your email address will not be published.