ಮುಟ್ಟಿನ ನೋವು ಹೇಗಿರುತ್ತೆ ಎಂದು ಅನುಭವಿಸಿದ ಯುವಕರು | ಹುಡುಗರಿಗೂ ಆ ನೋವೇನೂ ಅಂತ ತೋರಿಸಿದ ಮಾಲ್ !!!
ಮುಟ್ಟಿನ ನೋವು ಅಂದರೆ ಹೇಗಿರುತ್ತೆ ಇದು ಕೇವಲ ಹೆಣ್ಮಕ್ಕಳಿಗೆ ಮಾತ್ರ ತಿಳಿದಿರುತ್ತೆ. ಈ ನೋವು ಸಂಕಟದ ಬಗ್ಗೆ ಪುರುಷರಿಗೂ ತಿಳಿಯಲಿ ಎಂಬ ಕಾರಣಕ್ಕೆ ಕೇರಳದ ಕೊಚ್ಚಿಯಲ್ಲಿರುವ ಮಾಲ್‌ವೊಂದು ಪಿರೇಡ್ಸ್ ನೋವು ಹೇಗಿರುತ್ತೆ ಎಂಬ ನೋವನ್ನು ಅನುಭವಿಸಲು ಹೊಸ ತಂತ್ರಜ್ಞಾನದ ಮೂಲಕ ಯುವಕರಿಗೆ ನೀಡಿದೆ.
ಮುಟ್ಟಿನ ನೋವು ಎಲ್ಲಾ ಹೆಣ್ಮಕ್ಕಳಿಗೆ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ತರ ಇರುತ್ತದೆ. ಕೆಲವು ಹೆಣ್ಣು ಮಕ್ಕಳು ಪಿರೇಡ್ಸ್ ಸಮಯದಲ್ಲಿ ಹೊಟ್ಟೆನೋವಿನಿಂದ ನೆಲದಲ್ಲಿ ಬಿದ್ದು ಹೊರಳಾಡುತ್ತಾರೆ, ಕೆಲವರಿಗೆ ಸಹಜ ನೋವಿರುತ್ತೆ, ಇನ್ನು ಕೆಲವರಿಗೆ ತೀವ್ರವಾದ ಹೊಟ್ಟೆನೋವಿಲ್ಲದಿದ್ದರೂ ಸೊಂಟ ಕೈ ಕಾಲುಗಳು ಸೆಳೆಯುತ್ತಿರುತ್ತವೆ. ಮತ್ತೆ ಕೆಲವರಿಗೆ ಸಾಧಾರಣವಾದ ನೋವು ಇರುತ್ತದೆ. ಅಲ್ಲದೇ ಮಾನಸಿಕವಾಗಿಯೂ ಹಲವು ರೀತಿಯ ಕಿರಿಕಿರಿ ಅನುಭವಿಸುತ್ತಾರೆ ಕೆಲವರು.
ಸ್ನೇಹಿತೆ, ಪತ್ನಿ, ತಂಗಿ, ಅಮ್ಮ ಪಿರೇಡ್ಸ್ ನೋವಿನಿಂದ ಸಂಕಟ ಪಡುವುದನ್ನು ಕೆಲವರು ಯುವಕರು ನೋಡಿರಬಹುದು. ಆದರೆ ಇದರ ಕಿಂಚಿತ್ತು ನೋವಿನ ಅನುಭವ ಯುವಕರಿಗೆ ಇಲ್ಲ. ಆದರೆ ಪಿರೇಡ್ಸ್ ಅಂದರೆ ಹೇಗಿರುತ್ತೆ ಎಂಬ ಕುತೂಹಲ ಅನೇಕರಿಗೆ ಇದೆ. ಅದರ ಬಗ್ಗೆ ತಿಳಿಯುವ ಕೌತುಕವಿದೆ. ಇದೇ ಕಾರಣಕ್ಕೆ ಹಾಗೂ ಮಹಿಳೆಯರ ಕಷ್ಟ ಪುರುಷರಿಗೂ ತಿಳಿಯಲಿ ಎಂಬ ಕಾರಣಕ್ಕೆ ಕೇರಳದ ಕೊಚ್ಚಿಯಲ್ಲಿರುವ ಮಾಲ್‌ವೊಂದು ಪಿರೇಡ್ಸ್ ನೋವು ಹೇಗಿರುತ್ತೆ ಎಂಬ ನೋವನ್ನು ತಂತ್ರಜ್ಞಾನದ ಮೂಲಕ ಯುವಕರಿಗೂ ಅನುಭವಿಸಲು ಅವಕಾಶ ನೀಡಿದೆ. ಈ ಎಕ್ಸ್‌ಪೆರಿಮೆಂಟ್‌ನ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗು ಮೂಡಿಸುತ್ತಿದೆ.
ತಂತ್ರಜ್ಞಾನದ ಮೂಲಕ ಪಿರೇಡ್ಸ್ ಕೃತಕ ನೋವನ್ನು ಅನುಭವಿಸುತ್ತಿರುವ ಯುವಕರ ವೀಡಿಯೋ ನೋಡಿ ನಿಜವಾಗಲೂ, ಮುಟ್ಟಿನ ನೋವು ಅನುಭವಿಸುವ ಹೆಣ್ಣು ಮಕ್ಕಳ ಮುಖದಲ್ಲಿ ನಗು ತರಿಸುತ್ತಿದೆ. ಕೆಲ ಯುವಕರಂತೂ ಈ ಕೃತಕ ನೋವಿನಿಂದ ಹೊಟ್ಟೆ ಹಿಡಿದುಕೊಂಡು ಕಿರುಚಾಡುತ್ತಿರುವ ವಿಡಿಯೋಗಳನ್ನು ನೋಡಿದರೆ, ಹೆಣ್ಣು ಮಕ್ಕಳಿಗೆ ಎಷ್ಟು ಕಷ್ಟ ಇರಬಹುದು ಎಂಬ ಅರಿವನ್ನು ಇದು ತೋರಿಸುತ್ತದೆ. feelthepain ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಈ ಕಾರ್ಯಕ್ರಮವನ್ನು ಕಪ್ ಆಫ್ ಲೈಫ್‌ನ ಭಾಗವಾಗಿ ನಡೆಸಲಾಯಿತು. ಪಿರಿಯಡ್ ಪೇನ್ ಸಿಮ್ಯುಲೇಟರ್ ಅನ್ನು ಸ್ವತಃ ಪ್ರಯತ್ನಿಸಿದ್ದೀರಾ ಎಂದು ಸಂಸದ ಹೈಬಿ ಈಡನ್ ಅವರನ್ನು ಕೇಳಿದಾಗ, ನಾನು ಹೋಗುತ್ತಿದ್ದೇನೆ. ನಾನು ಒಮ್ಮೆ ಪ್ರಯತ್ನ ಮಾಡಿದೆ. ಇದು ನೋವಿನಿಂದ ಕೂಡಿಲ್ಲ. ಇದು ತುಂಬಾ ಕಿರಿಕಿರಿಯುಂಟುಮಾಡುವ ರೀತಿಯಲ್ಲಿ ನೋವಿನಿಂದ ಕೂಡಿದೆ ಎಂದು ಉತ್ತರಿಸಿದರು. 30ರ ಹರೆಯದ ಡಿಜಿಟಲ್ ಕಥೆಗಾರ ಪ್ರಕಾಶ್ ಅವರಿಗೆ ಈ ಅನುಭವದ ಬಗ್ಗೆ ಕೇಳಿದಾಗ ಇದೊಂದು ಕಣ್ಣು ತೆರೆಸುವ ಅನುಭವ ಎಂದು ಹೇಳಿಕೊಂಡಿದ್ದಾರೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಕೊಚ್ಚಿಯ ಲುಲು ಮಾಲ್‌ನಲ್ಲಿ ಈ ಪಿರಿಯಡ್ ಪೇನ್ ಸಿಮ್ಯುಲೇಟರ್ ಸೌಲಭ್ಯವನ್ನು ಸ್ಥಾಪಿಸಿದೆ. ಅಲ್ಲಿ ಹಲವಾರು ಯುವಕರು ಮುಟ್ಟಿನ ಸೆಳೆತ ಹೇಗಿರುತ್ತದೆ ಎಂಬ ಅನುಭವ ಪಡೆಯಲು ಮುಂದೆ ಬಂದರು.
ಸಿಮ್ಯುಲೇಟರ್‌ನಿಂದ ಉಂಟಾಗುವ ನೋವಿನ ಗರಿಷ್ಠ ತೀವ್ರತೆ ಅನೇಕರಿಗೆ ಸಾಧ್ಯವಾಗಲಿಲ್ಲ, ಮುಕ್ತ ವೇದಿಕೆಯಲ್ಲಿ ಮುಟ್ಟಿನ ಕುರಿತು ಸಂವಾದಗಳನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ. ಪಿರಿಯಡ್ಸ್ ಬಗ್ಗೆ ಕೇಳಿದ ನಂತರ ಜನರು ನಿಜವಾಗಿಯೂ ಆಶ್ಚರ್ಯಚಕಿತರಾದರು. ಹಲವಾರು ಜನರು ನೋವು ಅನುಭವಿಸಲು ಬಂದಿದ್ದಾರೆ. ಸಾರ್ವಜನಿಕರಲ್ಲಿ ಒಂದು ರೀತಿಯ ಹಿಂಜರಿಕೆ ಇತ್ತು ಎಂದು ಆಯೋಜಕರ ಅಭಿಪ್ರಾಯ.