ಸನ್ಯಾಸದ ಬದುಕು ಬೋರಾಗಿದೆ, ಕಾವಿ ಭಾರವಾಗಿದೆ ಎಂದು ಪತ್ರ ಬರೆದಿಟ್ಟು ಮಠ ತೊರೆದ ಸ್ವಾಮೀಜಿ !

”ನನಗೆ ಸನ್ಯಾಸ ಜೀವನ ಸಾಕಾಗಿದೆ, ನಾನು ಮತ್ತೆ ಕಾವಿ ತೊಡಲಾರೆನು. ನನ್ನನ್ನು ಹುಡುಕುವ ಮತ್ತೆ ಸನ್ಯಾಸ ಜೀವನಕ್ಕೆ ಕರೆ ತರುವ ಯಾವ ಪ್ರಯತ್ನ ಮಾಡಬೇಡಿ. ನನ್ನ ಪಾಡಿಗೆ ನನ್ನನು ಬದುಕಲು ಬಿಟ್ಟು ಬಿಡಿ. ಮತ್ತೊಮ್ಮೆ ಬಲವಂತವಾಗಿ ಮತ್ತೆ ಕಾವಿ ತೊಡಿಸಿದರೆ ಬದುಕು ಕಳೆದುಕೊಳ್ಳಬೇಕಾಗುತ್ತದೆ,”
ಎಂದು ಪತ್ರದಲ್ಲಿ ಎಚ್ಚರಿಸಿ ಸ್ವಾಮೀಜಿ ಪತ್ರ ಬರೆದಿದು ಮಾಯವಾಗಿದ್ದಾರೆ.

 

ರಾಮನಗರ ಜಿಲ್ಲೆ ಸೋಲೂರು ಸಮೀಪದ ಮಹಾಂತೇಶ್ವರ ಗದ್ದಿಗೆ ಮಠದ ಕಿರಿಯ ಶ್ರೀಗಳಾದ ಶಿವ ಮಹಾಂತ ಸ್ವಾಮೀಜಿ ಸಿದ್ದಗಂಗಾ ಮಠದಿಂದ ಎರಡು ದಿನಗಳ ಹಿಂದೆಯೇ ಕಾಣಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

2020 ಜೂನ್ 15ರಂದು ವೀರಾಪುರ ಗ್ರಾಮದ ಹರೀಶ್ ಸನ್ಯಾಸ ದೀಕ್ಷೆ ಸ್ವೀಕರಿಸಿ, ಇದಾದ ಬಳಿಕ ಸ್ವಾಮೀಜಿ ದೀಕ್ಷೆಯ ನಿಯಮ ಕಟ್ಟು ಪಾಡುಗಳನ್ನು ಅಧ್ಯಯನ ಮಾಡಲು ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಯಾಗಿದ್ದರು. ಇದರ ಜತೆಗೆ ಇಂಗ್ಲಿಷ್ ವಿಷಯದಲ್ಲಿ ದ್ವಿತೀಯ ವರ್ಷದ ಎಂಎ ಕೂಡ ಅಧ್ಯಯನ ಮಾಡುತ್ತಿದ್ದರು.

ಶಿವಮಹಂತ ಸ್ವಾಮೀಜಿ ಸೋಲೂರು ಸಮೀಪದ ಕಂಬಾಳು ಗ್ರಾಮದಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆ ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿದ್ದರಂತೆ. ಆ ಯುವತಿಗೆ ವಿವಾಹವಾಗಿ ಒಂದೂವರೆ ತಿಂಗಳು ಕಳೆದಿತ್ತು. ಈಗ ಆಕೆಯೊಂದಿಗೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸ್ವಾಮೀಜಿ ನಾಪತ್ತೆ ಬಗ್ಗೆ
ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲವಾದರೂ, ಸ್ವಾಮೀಜಿ ಜತೆ ಹೋಗಿದ್ದಾರೆ ಎನ್ನಲಾದ ಯುವತಿಯನ್ನು  ಹುಡುಕಿಕೊಡುವಂತೆ ಆಕೆಯ ಪತಿ ಕುದೂರು ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದಾರೆ.

Leave A Reply

Your email address will not be published.