ಮಹಿಳೆಯ ಪ್ರಾಣವನ್ನೇ ತೆಗೆದ ಬೀಚ್ ನಲ್ಲಿರಿಸಿದ್ದ ಛತ್ರಿ!

Share the Article

ಸಾವು ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲವೊಮ್ಮೆ ಈಗ ಇದ್ದವರು ಒಂದು ಕ್ಷಣದಲ್ಲಿ ದೇವರ ಪಾದ ಸೇರಿರುತ್ತಾರೆ. ಅದೇ ರೀತಿ ಮಹಿಳೆಯೊಬ್ಬರು ಬೀಚ್ ನಲ್ಲಿ ಎಂಜಾಯ್ ಮಾಡಿಕೊಂಡು ಕೂತಿದ್ದವರು, ಛತ್ರಿಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇಂತಹ ದುರದೃಷ್ಟಕರ ಘಟನೆಯೊಂದರಲ್ಲಿ ಸೌತ್ ಕೆರೊಲಿನಾದ ಬೀಚ್ ನಲ್ಲಿ ನಡೆದಿದ್ದು, ಛತ್ರಿಯಿಂದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಗಾಳಿಯ ರಭಸಕ್ಕೆ ಹಾರಿಹೋದ ಛತ್ರಿ, ಮಹಿಳೆಯ ಎದೆಗೆ ಚುಚ್ಚಿ ಅತ್ಯಂತ ಭಯಾನಕವಾಗಿ ಮೃತಪಟ್ಟಿದ್ದಾರೆ.

ಆ ಪ್ರದೇಶದಲ್ಲಿಯೇ ಇದ್ದ ಜನರು ಮತ್ತು ವೈದ್ಯರು ತಕ್ಷಣ ರಕ್ಷಣೆಗೆ ಬಂದರೂ, ಆಕೆ ಉಳಿಯಲಿಲ್ಲ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಟಮ್ಮಿ ಪೆರ್ರೊಲ್ಟ್ ಎಂದು ಗುರುತಿಸಲ್ಪಟ್ಟ ಮಹಿಳೆ ಬೀಚ್ನಲ್ಲಿ ಇರಿಸಲಾಗಿದ್ದ ಛತ್ರಿ ಎದೆಗೆ ಚುಚ್ಚಿ ಸಾವನ್ನಪ್ಪಿದ್ದಾರೆ.

ಹಿಂದೆ ಅಮೆರಿಕಾದ ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗವು ಛತ್ರಿಗಳ ಈ ಚೂಪಾದ ತುದಿಗಳು ಹೆಚ್ಚಿನ ವೇಗದ ಗಾಳಿಯಿಂದ ಒಮ್ಮೆ ಹಾರಿಹೋದರೆ ಅವು ಮಾರಕವಾಗಬಹುದು ಎಂದು ಹೇಳಿತ್ತು. ಅಂಕಿಅಂಶಗಳ ಪ್ರಕಾರ ಬೀಚ್​ಗಳಲ್ಲಿ ಇಡುವ ಛತ್ರಿಗಳಿಂದ ವಾರ್ಷಿಕವಾಗಿ ಸುಮಾರು 3,000 ಜನರು ಗಾಯಗೊಂಡಿದ್ದಾರೆ.

Leave A Reply