ಮಂಗಳೂರು : ಚರ್ಚ್ ಶಾಲೆಯಲ್ಲಿ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿದ ಪ್ರಕರಣ ಸುಖಾಂತ್ಯ !!!

Share the Article

ಮಂಗಳೂರು: ಶಾಲೆಗೆ ರಾಖಿ ಕಟ್ಟಿಕೊಂಡು ಹೋದ ಮಕ್ಕಳ ರಾಖಿ ಬಿಚ್ಚಿಸಿ ಡಸ್ಟ್ ಬಿನ್ ಗೆ ಹಾಕಿದ ಸುರತ್ಕಲ್ ಕಾಟಿಪಳ್ಳದಲ್ಲಿ ನಡೆದಿತ್ತು. ಈಗ ಈ ಘಟನೆಗೆ ಮಧ್ಯಪ್ರವೇಶಿಸಿದ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಧರ್ಮಗುರು ವ.ಸಂತೋಷ್ ಲೋಬೋ ಹಾಗೂ ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ.

ನಗರ ಹೊರವಲಯದ ಸುರತ್ಕಲ್‌ನ ಕಾಟಿಪಳ್ಳದಲ್ಲಿರುವ ಚರ್ಚ್ ಅಧೀನ ಶಾಲೆಗೆ ಬಂದ ವಿದ್ಯಾರ್ಥಿಗಳ ಕೈಯಿಂದ ರಕ್ಷೆ ಬಿಚ್ಚಿಸಿದ ಘಟನೆ ನಿನ್ನೆ ನಡೆದಿದೆ. ಇದು ಗೊತ್ತಾದ ಕೂಡಲೇ ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ‌. ಹಿಂದೂ ಸಂಘಟನೆ ಮುಖಂಡರು ಕೂಡಾ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಸಹಿತ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದೂ ಸಂಘಟನೆ ಮುಖಂಡರು ಹಾಗೂ ಪೋಷಕರು ಶಾಲೆಯ ಮುಂದೆ ಜಮಾಯಿಸಿ ಅಲ್ಲಿ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಪಟ್ಟು ಹಿಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಧರ್ಮಗುರು ವ.ಸಂತೋಷ್ ಲೋಬೋ ಹಾಗೂ ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ. ಕೊನೆಗೆ ಶಾಲಾ ಆಡಳಿತ ಮಂಡಳಿ ಘಟನೆಯ ಕುರಿತಂತೆ ಕ್ಷಮೆ ಕೇಳಿದ್ದು, ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ.

Leave A Reply