Home Interesting ಸಮುದ್ರದಲ್ಲಿ ಈಜುತ್ತಿದ್ದ ಮೀನುಗಾರನ ನುಂಗಿದ ದೈತ್ಯ ತಿಮಿಂಗಿಲ | ಈ ವ್ಯಕ್ತಿ ಬದುಕಿ ಬಂದದ್ದೇ ಮಿರಾಕಲ್...

ಸಮುದ್ರದಲ್ಲಿ ಈಜುತ್ತಿದ್ದ ಮೀನುಗಾರನ ನುಂಗಿದ ದೈತ್ಯ ತಿಮಿಂಗಿಲ | ಈ ವ್ಯಕ್ತಿ ಬದುಕಿ ಬಂದದ್ದೇ ಮಿರಾಕಲ್ !!!

Hindu neighbor gifts plot of land

Hindu neighbour gifts land to Muslim journalist

ಸಾಗರವೆಂಬುವುದು ಒಂದು ಅಪಾರ ಜೀವಿಗಳ ಸಂಗಮ. ದೊಡ್ಡದು ಸಣ್ಣದು ಹೀಗೆ ಅಪಾರ ಮೀನುಗಳು ಇರುತ್ತದೆ. ಇವುಗಳಲ್ಲಿ ತಿಮಿಂಗಿಲ ಬೃಹದಾಕಾರದ ಮೀನು ಎಂದರೆ ತಪ್ಪಿಲ್ಲ. ಈ ತಿಮಿಂಗಿಲದ ಹೊಟ್ಟೆ ಎಷ್ಟು ದೊಡ್ಡದಾಗಿದೆಯೆಂದರೆ ಅದು ಇಡೀ ಮನುಷ್ಯನನ್ನು ಜೀವಂತವಾಗಿ ನುಂಗಬಲ್ಲದು. ಹೌದು. ಈ ಮಾತನ್ನು ಯಾಕೆ ಹೇಳ್ತಾ ಇದ್ದೀನಿ ಅಂದರೆ, ಈ ತಿಮಿಂಗಿಲ ಮೀನು ಓರ್ವ ವ್ಯಕ್ತಿಯನ್ನು ಜೀವಂತವಾಗಿ ನುಂಗಿಬಿಟ್ಟಿದೆ.

ಇಂತಹದ್ದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಒಬ್ಬ ವ್ಯಕ್ತಿ ತನ್ನ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಮಿಂಗಿಲ ಮೀನು ಹೇಗೆ ತನ್ನನ್ನ ಜೀವಂತವಾಗಿ ನುಂಗಿತು ಮತ್ತು ನಂತರ ಅವನ ಜೀವವನ್ನು ಹೇಗೆ ಉಳಿಸಿಕೊಂಡೇ ಅನ್ನೋದನ್ನು ಹೇಳಿದ್ದಾನೆ.

ಈ ವ್ಯಕ್ತಿಯ ಹೆಸರು ಮೈಕೆಲ್ ಪೇಕಾರ್ಡ್. ಈತ ವೃತ್ತಿಯಲ್ಲಿ ಮೀನುಗಾರ. ಮೈಕೆಲ್ ಅಮೆರಿಕದ ಮ್ಯಾಸಚೂಸೆಟ್ಸ್‌ನ ಕೇಪ್ ಕಾಡ್‌ನಲ್ಲಿ ಮೀನುಗಾರಿಕೆಗೆ ಹೋದಾಗ ಸಮುದ್ರದ 10 ಅಡಿಗಳಷ್ಟು ಈಜುತ್ತಿದ್ದ. ಆಗ ಆತನಿಗೆ ಒಂದು ದೊಡ್ಡ ತಿಮಿಂಗಿಲ ಎದುರಾಗಿದ್ದು, ಆತ ಯಾವಾಗ ಅದರ ಹೊಟ್ಟೆ ಸೇರಿದನೋ ಆತನಿಗೆ ಅರಿವಾಗಿಲ್ಲ. ನಂತ್ರ ಮೈಕೆಲ್ ತನ್ನ ಕಥೆಯಲ್ಲಿ ತನ್ನ ಜೀವ ಉಳಿದಿದ್ದೇಗೆ ಅನ್ನೋದನ್ನಿ ಹೇಳಿದ್ದಾನೆ.

ಸಮುದ್ರದಲ್ಲಿ ಈಜುತ್ತಿದ್ದಾಗ, ಮೈಕೆಲ್ ಇದ್ದಕ್ಕಿದ್ದಂತೆ ಕತ್ತಲೆಯಾದ ಸ್ಥಳವನ್ನ ತಲುಪಿದ ಅನುಭವವಾಗಿದೆ. ಯಾವುದೋ ವಸ್ತು ತನ್ನನ್ನು ತಿರುಗಿಸುತ್ತಿದೆ ಎಂಬ ಅನುಭವವಾಗಿದೆ. ಆತನಿಗೆ ಚಲಿಸಲು ಸಹ ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ಆತನಿಗೆ ಅರಿವಾಗಿದೆ ಆತ ದೈತ್ಯ ತಿಮಿಂಗಿಲದ ಹೊಟ್ಟೆಯಲ್ಲಿದ್ದೇನೆ ಎಂದು. ವರದಿಯ ಪ್ರಕಾರ, ಈ ಘಟನೆಯು 2021ರ ವರ್ಷದಲ್ಲಿ ನಡೆದಿದೆ.

ಸ್ವತಃ ಸಾವಿನ ಬಾಯಿಯಿಂದ ಹೊರಬಂದ ಮೈಕೆಲ್ ತಿಮಿಂಗಿಲದ ಹೊಟ್ಟೆಯಲ್ಲಿದ್ದಾಗ, ಈತನಿಗೆ ತನ್ನ ಇಬ್ಬರು ಪುತ್ರರ ಬಗ್ಗೆ ಯೋಚನೆಯಲ್ಲಿ ಮುಳುಗಿದ್ದರಂತೆ. ಈ ಮೀನಿನ ರಕ್ಕಸ ಹೊಟ್ಟೆಯಿಂದ ಪಾರಾಗುವ ಯಾವುದೇ ದಾರಿ ಮೈಕಲ್ ಗೆ ಕಾಣಲಿಲ್ಲ. ಆಗ ತಿಮಿಂಗಿಲ ಒಂದು ಬಾರಿ ತನ್ನ ತಲೆಯನ್ನು ಬಲವಾಗಿ ಅಲ್ಲಾಡಿಸಲು ಪ್ರಾರಂಭ ಮಾಡಿದೆ. ಮೈಕೆಲ್ 30-40 ಸೆಕೆಂಡುಗಳ ಕಾಲ ತನ್ನ ತಲೆಯನ್ನು ಅಲ್ಲಿ ಇಲ್ಲಿ ಎಸೆಯುತ್ತಿದ್ದ ಆಗ ಇದ್ದಕ್ಕಿದ್ದಂತೆ ಆತನಿಗೆ ತಿಮಿಂಗಿಲದ ಹೊಟ್ಟೆಯೊಳಗಿನಿಂದ ಸ್ವಲ್ಪ ಬೆಳಕು ಕಂಡಿದ್ದಾನೆ. ಕೂಡಲೇ ತಿಮಿಂಗಿಲ ಆತನನ್ನ ಅಲುಗಾಡಿಸಿ ಹೊರಗೆ ಎಸೆದು ಬಿಟ್ಟಿದೆ. ಮೈಕೆಲ್ ಬದುಕುಳಿದ್ದಾನೆ. ನಂತರ ಮೈಕೆಲ್ ಸಹಚರರು ತಕ್ಷಣ ಆತನಿಗೆ ಆಮ್ಲಜನಕ ನೀಡಿದ್ದು, ಈ ಮೂಲಕ ಮೈಕೆಲ್‌ಗೆ ಜೀವ ಸಿಕ್ಕಿದೆ.

ಅಂತೂ ಮೀನಿನ ದೇಹದೊಳಗೆ ಹೋಗಿ ಜೀವಂತವಾಗಿ ಹೊರಬಂದ ಮೀನುಗಾರನ ಈ ಅನುಭವ ಅದ್ಭುತ.