ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ RCFL ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ -396, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆ.14

ನವದೆಹಲಿ : ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ, ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶವಿದ್ದು, ವಿವಿಧ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಆಸಕ್ತ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಕಂಪನಿ ಹೆಸರು : ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್ (RCF)
ಉದ್ಯೋಗದ ಹೆಸರು : ಪದವೀಧರ ಮತ್ತು ತಂತ್ರಜ್ಞ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 396
ಉದ್ಯೋಗ ಸ್ಥಳ : ರಾಯಗಡ – ಮುಂಬೈ
ಸ್ಟೈಪೆಂಡ್ : ತಿಂಗಳಿಗೆ ರೂ.5,000-9,000
ಅರ್ಜಿ ಸಲ್ಲಿಕೆ : ಆನ್‌ಲೈನ್
ಅರ್ಜಿ ಶುಲ್ಕ : ಇಲ್ಲ

ವಿದ್ಯಾರ್ಹತೆ : ದ್ವಿತೀಯ ಪಿಯುಸಿ, ಡಿಗ್ರಿ ಮಾಡಿರಬೇಕು. ಇನ್ನು ಕೆಲವು ಹುದ್ದೆಗಳಿಗೆ ಸಂಬಂಧಿಸಿದ ವಿಭಾಗದಲ್ಲಿ ಪದವಿ ಡಿಪ್ಲೊಮಾ, ಐಟಿಐ ಮಾಡಿರಬೇಕು.

ವಯಸ್ಸಿನ ಮಿತಿ: ರಾಷ್ಟ್ರೀಯ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ನೇಮಕಾತಿ ಅಧಿಸೂಚನೆಯ ಪ್ರಕಾರ ನೀಡಲಾಗುವುದು.

ವಯೋಮಿತಿ ಸಡಿಲಿಕೆ : ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷಗಳನ್ನ ಮೀರಬಾರದು. ಇನ್ನು OBC ಅಭ್ಯರ್ಥಿಗಳಿಗೆ 03 ವರ್ಷಗಳು, SC, ST ಅಭ್ಯರ್ಥಿಗಳಿಗೆ 05 ವರ್ಷಗಳು ಮತ್ತು PwD ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ : ಮೆರಿಟ್ ಪಟ್ಟಿಯನ್ನ ಆಧರಿಸಿ, ದಾಖಲೆ ಪರಿಶೀಲನೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜುಲೈ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಆಗಸ್ಟ್ 2022

ಅರ್ಜಿ ಸಲ್ಲಿಸುವ ವಿಧಾನ :
*ಅಧಿಸೂಚನೆಯನ್ನ ಸಂಪೂರ್ಣವಾಗಿ ಓದಿ.. ನೀವು ಅರ್ಹತಾ ಮಾನದಂಡಗಳನ್ನ ಪೂರೈಸಿದ್ದರೇ ಅರ್ಜಿ ಸಲ್ಲಿಸಬಹುದು.
*www.rcfltd.com ಲಿಂಕ್ ಅನ್ನು ಮತ್ತು ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ನೀಡಲಾದ ವಿವರಗಳನ್ನು ಭರ್ತಿ ಮಾಡಿ.
*ಇಮೇಲ್ ಐಡಿ ಮತ್ತು ಸಂವಹನ ಉದ್ದೇಶಕ್ಕಾಗಿಮೊಬೈಲ್‌ ಸಂಖ್ಯೆ ನೀಡಬೇಕು.
*ಎಲ್ಲಾ ಮಾಹಿತಿಯನ್ನ ಪೂರ್ಣಗೊಳಿಸಿದ ನಂತ್ರ ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಸಲ್ಲಿಸು ಬಟನ್ ಮೇಲೆ ಮತ್ತು ಅರ್ಜಿಯನ್ನು ಸಲ್ಲಿಸಿ.
*ಅಂತಿಮವಾಗಿ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿ

ಅಧಿಕೃತ ಜಾಲತಾಣ : rcfltd.com

Leave A Reply

Your email address will not be published.