Home Jobs ಪಿಯುಸಿ ಪಾಸ್ ಆದವರಿಗೆ BSF ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ – 323, ಅರ್ಜಿ...

ಪಿಯುಸಿ ಪಾಸ್ ಆದವರಿಗೆ BSF ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ – 323, ಅರ್ಜಿ ಸಲ್ಲಿಸಲು ಕೊನೆ ದಿನ-ಸೆ.6

Hindu neighbor gifts plot of land

Hindu neighbour gifts land to Muslim journalist

ಪಿಯುಸಿ ಪಾಸ್ ಆದವರಿಗೆ ಉದ್ಯೋಗವಕಾಶವಿದ್ದು, ಗಡಿ ಭದ್ರತಾ ಪಡೆಯ 323 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಗಡಿ ಭದ್ರತಾ ಪಡೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್) ಮತ್ತು ಹೆಡ್ ಕಾನ್ಸ್ಟೇಬಲ್ (ಮಿನಿಸ್ಟ್ರಿಯಲ್) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಈ ಪೈಕಿ ನೇಮಕಾತಿ ನಡೆಯುತ್ತಿರುವ 11 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಎಸ್ ಟಿ ವರ್ಗಕ್ಕೆ ಮೀಸಲಿಡಲಾಗಿದೆ.

ಇನ್ನು 312 ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈ ಎರಡೂ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 6 ಕೊನೆಯ ದಿನಾಂಕವಾಗಿರುತ್ತದೆ.

ಪಿಯುಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ನಿಗದಿತ ಟೈಪಿಂಗ್ ಸ್ಪೀಡ್ ಹೊಂದಿರುವುದು ಕಡ್ಡಾಯವಾಗಿದೆ. ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಪ್ರವೇಶ ಪತ್ರ ಕಳುಹಿಸಿದ ಬಳಿಕ ಬೆಂಗಳೂರಿನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಗಡಿ ಭದ್ರತಾ ಪಡೆಯ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಮತ್ತು ಇ-ಚಲನ್ ಮೂಲಕ ಪಾವತಿಸಬಹುದು. ಅರ್ಜಿ ಶುಲ್ಕ ಸಾಮಾನ್ಯ, OBC ಮತ್ತು IWS ವರ್ಗದವರಿಗೆ 100 ರೂ. ಎಸ್ಸಿ, ಎಸ್ಟಿ ಯಾವುದೇ ಶುಲ್ಕವಿಲ್ಲ. ಅರ್ಜಿಯನ್ನು ವೆಬ್‌ಸೈಟ್ ಮೂಲಕ ಸಲ್ಲಿಸಬೇಕು. ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡಬಹುದು. ಮೂಲಕ ಅರ್ಜಿ ಸಲ್ಲಿಸಬಹುದು.