ಗೂಗಲ್ ಸರ್ಚ್ ಮಾಡುವಾಗ ನಿಮಗೂ ಈ ಸಮಸ್ಯೆ ಎದುರಾಯ್ತೇ ?
ವಿಶ್ವದಾದ್ಯಂತ ಮಂಗಳವಾರ ಬೆಳಿಗ್ಗೆ ಭಾರತ ಸೇರಿದಂತೆ
ಅನೇಖ ಬಳಕೆದಾರರು ಗೂಗಲ್ ಸರ್ಚ್ ಮಾಡಲು ಮುಂದಾದಾಗ ಸಮಸ್ಯೆ ಎದುರಿಸಿದ್ದಾರೆ. ಗೂಗಲ್ ಸರ್ಚ್ ಡೌನ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಬಳಕೆದಾರರು ಇದನ್ನು ಹಂಚಿಕೊಂಡಿದ್ದು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಇಂತಹ ವಿಷಯಗಳನ್ನು ಟ್ರ್ಯಾಕ್ ಮಾಡುವ downdetector.com ಸಹ ಗೂಗಲ್ ಸರ್ಚ್ ಡೌನ್ ಆಗಿರುವುದನ್ನು ಖಚಿತಪಡಿಸಿದೆ. 40,000ಕ್ಕೂ ಅಧಿಕ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿದ್ದು ಕೆಲವರಿಗೆ ಸರ್ಚ್ ಮಾಡುವಾಗ 502 ಎರರ್ ಸಂದೇಶ ಬಂದರೆ ಮತ್ತೆ ಕೆಲವರಿಗೆ ತಾಂತ್ರಿಕ ದೋಷದಿಂದ ಈ ಸಮಸ್ಯೆ ಎದುರಾಗಿದೆ.
ನಮ್ಮ ಪರಿಣಿತರು ಇದನ್ನು ಪರೀಕ್ಷಿಸುತ್ತಿದ್ದು ಆದಷ್ಟು ಬೇಗನೆ ಸರಿಪಡಿಸುವುದಾಗಿ ಗೂಗಲ್ ತಿಳಿಸಿತ್ತು. 500 ಎರರ್ ಸಂದೇಶ ಬಂದಿತ್ತು. ಆದರೆ ಕೆಲ ಹೊತ್ತಿನಲ್ಲೇ ಗೂಗಲ್ ಇದನ್ನು ಸರಿಪಡಿಸಿದ್ದು, ಬಳಕೆದಾರರು ಈ ಮೊದಲಿನಂತೆ ಸರ್ಚ್ ಮಾಡಲು ಅನುವು ಮಾಡಿಕೊಡಲಾಗಿದೆ.