Home Entertainment BiggBoss : ಒಂದು ವೀಡಿಯೋ ಬಿಟ್ಟಿದ್ದಾನೆ, ಇನ್ನೊಂದು ವೀಡಿಯೋ ಯಾವಾಗ ಬಿಡ್ತಾನೆ ಗೊತ್ತಿಲ್ಲ – ಸೋನು...

BiggBoss : ಒಂದು ವೀಡಿಯೋ ಬಿಟ್ಟಿದ್ದಾನೆ, ಇನ್ನೊಂದು ವೀಡಿಯೋ ಯಾವಾಗ ಬಿಡ್ತಾನೆ ಗೊತ್ತಿಲ್ಲ – ಸೋನು ಗೌಡ

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಒಟಿಟಿ ಸೀಸನ್ 1 ಆರಂಭವಾಗಿದೆ. ಈ ರಿಯಾಲಿಟಿ ಶೋನಲ್ಲಿ ಒಂದು ಟಾಸ್ಕ್ ನಡೆಯುತ್ತಿದೆ. ಅದುವೇ ” ನಾನು ಯಾರು”. ಇಲ್ಲಿ ಬಿಗ್ ಬಾಸ್ ಮನೆಗೆ ಬಂದಿರುವ ಕಂಟೆಸ್ಟೆಂಟ್ ಗಳು ತಮ್ಮ ಖಾಸಗಿ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳುತ್ತಾರೆ.

ಇಲ್ಲಿ ನಾವು ಹೇಳೋಕೆ ಹೊರಟಿರೋದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುವ ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ. ಹೌದು ಟ್ರೋಲರ್ಸ್ ಗಳಿಂದಲೇ ಖ್ಯಾತಿ ಪಡೆದ ಈಕೆ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಅಲ್ಲಿ ತಮ್ಮ ಕುರಿತು ಶಾಕಿಂಗ್ ವಿಷಯವನ್ನು ತಿಳಿಸಿದ್ದಾರೆ. ಈ ವೇಳೆ ಸೋನು ಶ್ರೀನಿವಾಸ್ ಗೌಡ ತಮ್ಮ ಖಾಸಗಿ ವೀಡಿಯೋ ಲೀಕ್ ಆಗಿತ್ತು ಎಂಬ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಅದು ಯಾಕಾಯಿತು? ಹೇಗಾಯಿತು ಎಂಬುದರ ಬಗ್ಗೆನೂ ವಿವರಣೆ ನೀಡಿದ್ದಾರೆ. ಅಷ್ಟೇ ಅಲ್ಲ, ತಮ್ಮದು ಇನ್ನೊಂದು ವೀಡಿಯೋ ಇದೆ ಎಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ.

ಸೋನು ಗೌಡ ಅವರು ಹೇಳಿರುವ ಪ್ರಕಾರ, ನನಗೆ ಗೊತ್ತಿರುವ ವ್ಯಕ್ತಿ ನನ್ನ ಜೊತೆ ಮೂರು ವರ್ಷ ಇದ್ದ. ಅವನು ಎಂಎಸ್ಸಿ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ. ಎಲ್ಲ ಹುಡುಗಿಯರ ಲೈಫ್‌ನಲ್ಲಿ ಇದು ಕಾಮನ್. ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಹೇಳಿದ್ದಾರೆ.

ಇದೆಲ್ಲ ಆದನಂತರ ಆತ ತುಚ್ಛವಾಗಿ ಮಾತಾಡೋಕೆ ಶುರು ಮಾಡಿದ. ನನಗೆ ಯಾಕೋ ಇದು ಸರಿ ಕಾಣ್ತಿರಲಿಲ್ಲ. ನಾನು ಹೇಳಿದ್ದಂಗೆ ಬಿದ್ದಿರ್ತಿದ್ದ ಆತ, ಒಮ್ಮೆಲೇ ಈ ರೀತಿ ಚೇಂಜಸ್ ಆದದ್ದು ನೋಡಿ ನಾನು ಆವಾಕ್ಕಾಗಿದ್ದೆ. ಆದರೆ ಅನಂತರ ತಿಳಿಯಿತು ಆತ ನಮ್ಮಿಬ್ಬರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಎಂದು.

ಅವನು ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ. ಆಮೇಲೆ ನನಗೇ ಆ ವೀಡಿಯೋ ಕಳಿಸಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ. ಅನಂತರ ಕೊನೆಗೆ ಆತನಲ್ಲಿ ನನ್ನದು ಎರಡು ವೀಡಿಯೋ ಇದೆ. ಒಂದನ್ನು ಬಿಟ್ಟಿದ್ದಾನೆ. ಇನ್ನೊಂದು ಯಾವಾಗ ಬಿಡ್ತಾನೆ ಗೊತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ ಸೋನು ಗೌಡ. ಒಂದು ವಿಡಿಯೋನೇ ಅಷ್ಟೆಲ್ಲಾ ರಾಡಿ ಎಬ್ಬಿಸಿದೆ. ಇನ್ನೊಂದು ವಿಡಿಯೋ ಸುದ್ದಿ ಬಂದ ಮೇಲೆ, ಅದರಲ್ಲಿ ಏನಿದೆಯೋ, ಮತ್ತೆಷ್ಟು ‘ ಪ್ರೈವೇಟ್ ‘ ಮ್ಯಾಟರ್ ಪಬ್ಲಿಕ್ ಆಗುತ್ತೋ ಗೊತ್ತಿಲ್ಲ. ಅಥವಾ, ಇನ್ನೊಂದು ವಿಡಿಯೋ ಇದೆ ಎನ್ನುವುದು ಕೇವಲ ಗಿಮಿಕ್ಕಾ? ಅದೊಂದು ಮಾರಾಟದ ತಂತ್ರವಾ ? ಬಿಗ್ ಬಾಸ್ ಗೆ ಕಾಲಿಟ್ಟ ಪ್ರತಿಯೊಬ್ಬರೂ ಏನಾಡರೊಂದು ಸತ್ಯ ಅಥವಾ ಸುಳ್ಳು ಹೇಳಿ, ಅನುಕಂಪ ಗಿಟ್ಟಿಸೋಕೆ ಟ್ರೈ ಮಾಡ್ತಾರೆ. ಇದು ಕೂಡ ಅಂತದ್ದೇ ಒಂದು ಸೆಲ್ಲಿಂಗ್ ಟ್ಯಾಕ್ಟಿಸ್ ನಾ ? ಗೊತ್ತಿಲ್ಲ.