ಕರ್ನಾಟಕ ನೌಕರರ ರಾಜ್ಯ ವಿಮಾ ನಿಗಮ(ESI)ದಲ್ಲಿ ಉದ್ಯೋಗವಕಾಶ ; ಒಟ್ಟು ಹುದ್ದೆ-33, ನಾಳೆಯೇ ನೇರ ಸಂದರ್ಶನ

Share the Article

ಕರ್ನಾಟಕ ನೌಕರರ ರಾಜ್ಯ ವಿಮಾ ನಿಗಮವು  ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಒಟ್ಟು 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.

ಇದು ಮೂರು ವರ್ಷದ ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, ಅಭ್ಯರ್ಥಿಯ ಕಾರ್ಯ ದಕ್ಷತೆ ಅನುಸಾರ ಎರಡು ವರ್ಷಗಳ ಕಾಲ ವಿಸ್ತರಣೆ ನಡೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆಯ ಹೆಸರು: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC ಕರ್ನಾಟಕ)
ಹುದ್ದೆಗಳ ಸಂಖ್ಯೆ: 33
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
ವೇತನ: 130797-228942 ರೂ- ಪ್ರತಿ ತಿಂಗಳು
ಹುದ್ದೆ ಹುದ್ದೆ ಸಂಖ್ಯೆ ವೇತನ
ಪ್ರೊಫೆಸರ್ 2 228942 ರೂ ಮಾಸಿಕ
ಅಸೋಸಿಯೇಟ್ ಪ್ರೊಫೆಸರ್ 13 152241 ರೂ ಮಾಸಿಕ
ಸಹಾಯಕ ಪ್ರಾಧ್ಯಾಪಕ 18 130797 ರೂ ಮಾಸಿಕ

ವಯಸ್ಸಿನ ಮಿತಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 67 ವರ್ಷಗಳು.

ವಯಸ್ಸಿನ ಸಡಿಲಿಕೆ:
ನೌಕರರ ರಾಜ್ಯ ವಿಮಾ ನಿಗಮದ ಕರ್ನಾಟಕ ನಿಯಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ
ಸಂದರ್ಶನ ಮತ್ತು ಶೈಕ್ಷಣಿಕ ಅರ್ಹತೆ

ಆಯ್ಕೆ ವಿಧಾನ
ವಾಕ್ ಇನ್ ಇಂಟರ್​ವ್ಯೂ

ಅನುಭವ
ಶೈಕ್ಷಣಿಕ ಅನುಭವ, ವೈದ್ಯಕೀಯ ಸಂಸ್ಥೆಗಳ ನಿಯಮಾವಳಿಗಳಲ್ಲಿ ಶಿಕ್ಷಕರಿಗೆ ಕನಿಷ್ಠ ಅರ್ಹತೆಗಳು, 1998 ಪ್ರಕಾರದ ಅನುಭವ ಹೊಂದಿರಬೇಕು.

ಸೂಚನೆ
ನೇರ ಸಂದರ್ಶನಕ್ಕೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ESIC ವೆಬ್‌ಸೈಟ್‌ನಿಂದ ನಿಗದಿತ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ಜೊತೆಗೆ ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಮೇ 31, 2022

ನೇರ ಸಂದರ್ಶನದ ಸಮಯ:
ಪ್ರೊಫೆಸರ್ ಹುದ್ದೆಗೆ ಆಗಸ್ಟ್​ 22 ರಂದು ಬೆಳಗ್ಗೆ 9.30
ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಆಗಸ್ಟ್​ 22 ರಂದು ಬೆಳಗ್ಗೆ 9.30
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಗಸ್ಟ್​ 23 ಮತ್ತು 24 ರಂದು ಬೆಳಗ್ಗೆ 9.30

ಸಂದರ್ಶನ ನಡೆಯುವ ಸ್ಥಳ:
ನ್ಯೂ ಅಕಾಡೆಮಿಕ್​ ಬಿಲ್ಡಿಂಗ್​, ಇಎಸ್​ಐಸಿ ಮೆಡಿಕಲ್​ ಕಾಲೇಜ್​, ಪಿಜಿಐಎಂಎಸ್‌ಆರ್​ ಮತ್ತು ಮಾಡೆಲ್​ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು.

ಆಯ್ಕೆ ವಿಧಾನ:
*ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ
*ಆಯ್ಕೆ ಮಂಡಳಿಯ ಮುಂದೆ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ:
*ಎರಡು ಪಾಸಪೋರ್ಸ್​ ಸೈಜ್​ ಫೋಟೋ
*ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
*ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ

ಅಧಿಕೃತ ವೆಬ್‌ಸೈಟ್: esic.nic.in

Leave A Reply