ಗರ್ಲ್ ಫ್ರೆಂಡ್ ಎದುರು ಶೋ ಮಾಡಲು ಹೋದ ಬಾಯ್ ಫ್ರೆಂಡ್ | ಗೆಳತಿಗೆ ಕಾರು ನೀಡಿದ ಯುವಕ, ಯುವತಿ ಮಾಡಿದ್ದಾದರೂ ಏನು?

ಇಲ್ಲೊಬ್ಬ ಯುವಕ ತನ್ನ ಗೆಳತಿಯನ್ನು ಮೆಚ್ಚಿಸಲು ಹೋಗಿ ಈತ ಮಾಡಿದ ಕೆಲಸದಿಂದಾಗಿ ಇಬ್ಬರ ಜೀವ ಹೋಗಿದೆ. ಇಂಥದೊಂದು ಆಘಾತಕಾರಿ ಘಟನೆ ಚನ್ಗಡದ ಬಿಲಾಸ್ ಪುರದಲ್ಲಿ ನಡೆದಿದೆ.

 

ಹೌದು, ಬಿಲಾಸ್ ಪುರದ ಮುಂಗೇಲಿ ಬಡಾವಣೆ ನಿವಾಸಿ ರವೀಂದ್ರ ಕುರೆ ಎಂಬಾತ ತನ್ನ ಗೆಳತಿಯೊಂದಿಗೆ ಜಾಲಿ ರೈಡ್ ಹೊರಟಿದ್ದಾನೆ. ಈ ವೇಳೆ ಆತ ಸುಮ್ಮನಿರದೆ ಆಕೆಗೆ ಚಾಲನೆ ಬಾರದಿದ್ದರೂ ಸಹ ಕಾರು ಓಡಿಸಲು ಹೇಳಿದ್ದಾನೆ. ಪಕ್ಕದಲ್ಲಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದ್ದಾನೆ.

ಗೆಳೆಯನ ಮಾತು ಕೇಳಿ ಚಾಲಕನ ಸ್ಥಾನದಲ್ಲಿ ಕುಳಿತ ಆಕೆ ಏಕಾಏಕಿ ಎಕ್ಸಲೇಟರ್ ಒತ್ತಿದ್ದಾಳೆ. ಇದರಿಂದ ಎದುರಿಗೆ ಬರುತ್ತಿದ್ದ ಬೈಕ್ ಸವಾರರಿಗೆ ಕಾರು ರಭಸದಿಂದ ಡಿಕ್ಕಿ ಹೊಡೆದಿದೆ. ಬೈಕಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಡಿಕ್ಕಿಯ ತೀವ್ರತೆಗೆ ಮೀಟರ್ ಗಳಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾರೆ.

ಇದರ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ತೀವ್ರವಾಗಿ ಗಾಯಗೊಂಡಿರುವ ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಸ್ಥಳೀಯರು ರವೀಂದ್ರ ಮತ್ತು ಆತನ ಗೆಳತಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

Leave A Reply

Your email address will not be published.