ಅಂಗನವಾಡಿ ಕೇಂದ್ರದಲ್ಲಿ ಭರ್ಜರಿ ಉದ್ಯೋಗವಕಾಶ | 316 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Share the Article

ಬೆಳಗಾವಿ ಮತ್ತು ಯಾದಗಿರಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತರ ನೇಮಕಕ್ಕೆ ಕರ್ನಾಟಕ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಅಂಗನವಾಡಿ ನೇಮಕಾತಿಕ್ಕೆ ಸಂಬಂಧಿಸಿದಂತೆ 316 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 5 ಆಗಿದೆ. ಕರ್ನಾಟಕ ಅಂಗನವಾಡಿ ನೇಮಕಾತಿಯ ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 4
ಆಗಸ್ಟ್ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 5 ಸೆಪ್ಟೆಂಬರ್ 2022

ಇನ್ನು ಈ 316 ಹುದ್ದೆಗಳಲ್ಲಿ ಯಾದಗಿರಿಗೆ 34 ಮತ್ತು ಬೆಳಗಾವಿಗೆ 282 ಹುದ್ದೆಗಳು ಮೀಸಲಾಗಿದೆ. ಆಯಾ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಈ ಹುದ್ದೆಗಳು ಖಾಲಿ ಇದ್ದು ಆಸಕ್ತ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ
ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ – 38 ಹುದ್ದೆ ಮತ್ತು ಅಂಗನವಾಡಿ ಸಹಾಯಕಿ – 278 ಹುದ್ದೆ
ಒಟ್ಟು ಹುದ್ದೆಗಳ ಸಂಖ್ಯೆ: 316
ಉದ್ಯೋಗ ಸ್ಥಳ: ಯಾದಗಿರಿ-ಬೆಳಗಾವಿ
ವೇತನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ

ವಯೋಮಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply