ಕೇವಲ ಆರು ರೂಪಾಯಿಯಿಂದ ಕೋಟಿ ಗೆದ್ದ ಪೊಲೀಸ್ ಪೇದೆ!
ಅದೃಷ್ಟ ಎಂಬುದು ಯಾರಿಗೆ? ಹೇಗೆ? ಖುಲಾಯಿಸುತ್ತದೆ ಎಂಬುದು ಹೇಳಲಾಗುವುದಿಲ್ಲ. ಯಾಕಂದ್ರೆ, ಈ ಅದೃಷ್ಟ ಎಂಬುದು ಹೇಳಿ-ಕೇಳಿ ಬರುವುದಿಲ್ಲ. ಇಂದು ಭಿಕ್ಷೆ ಬೇಡುವವನು ನಾಳೆ ದೊಡ್ಡ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಸಂಶಯವಿಲ್ಲ. ಕೆಲವೊಂದು ಬಾರಿ ತಿರಸ್ಕಾರ ಭಾವನೆಯಿಂದ ತೆಗೆದುಕೊಂಡ ಲಾಟರಿ ಟಿಕೆಟ್ ಅದೃಷ್ಟವನ್ನೇ ಬದಲಾಯಿಸುತ್ತದೆ.
ಹೌದು.ಲಾಟರಿ ಟಿಕೆಟ್‌ಗಳು ಅನೇಕರ ಅದೃಷ್ಟವನ್ನು ಬದಲಾಯಿಸುತ್ತವೆ. ಅದೇ ರೀತಿ ಇಲ್ಲೊಂದು ಕಡೆ ತಾಯಿಯ ಒತ್ತಾಯಕ್ಕಾಗಿ ಆರು ತಿಂಗಳಿನಿಂದ ಲಾಟರಿ ಟಿಕೇಟ್ ಖರೀದಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಆರು ರೂಪಾಯಿಯಿಂದ ಕೋಟ್ಯಾಧಿಪತಿಯಾಗಿದ್ದಾರೆ.
ಪಂಜಾಬ್‌ನ ಫಿರೋಜ್‌ಪುರದ ಪೊಲೀಸ್ ಪೇದೆ ಕುಲದೀಪ್ ಸಿಂಗ್ ಅವರೇ ಲಾಟರಿ ಟಿಕೆಟ್ ನಿಂದ ಜೀವನವನ್ನು ಬದಲಾಯಿಕೊಂಡವರು. ತಾಯಿ ಬಲ್ಜಿಂದರ್ ಕೌರ್ ತನ್ನ ಮಗ ಕುಲದೀಪ್‌ಗೆ ಲಾಟರಿ ಟಿಕೆಟ್ ಖರೀದಿಸುವಂತೆ 6 ತಿಂಗಳಿನಿಂದ ಕೇಳುತ್ತಿದ್ದಳು. ಯಾಕಂದ್ರೆ, ತಾಯಿಗೆ ತನ್ನ ಮಗ ಮಿಲಿಯನೇರ್ ಆಗಬೇಕೆಂಬ ಕನಸು. ಹೀಗಾಗಿ ತಾಯಿಯ ಆಸೆಯಂತೆ ಕುಲದೀಪ್ 6 ತಿಂಗಳಿನಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು.
ಆದರೆ, ಆಗಸ್ಟ್ 2 ರ ಮಧ್ಯ ರಾತ್ರಿ ಅವರ ಅದೃಷ್ಟವೇ ಬದಲಾಗಿದೆ. ಹೌದು. ನಾಗಾಲ್ಯಾಂಡ್ ರಾಜ್ಯ ಲಾಟರಿ ಟಿಕೆಟ್ ರೂ.1 ಕೋಟಿ ಬಹುಮಾನವನ್ನು ಗೆದ್ದಿದೆ. ಟಿಕೆಟ್ ಅಂಗಡಿಯಿಂದ ಕುಲದೀಪ್ ಅವರಿಗೆ ಕರೆ ಬಂದಿದ್ದು, ನಂಬಲು ಅಸಾಧ್ಯವಾಗಿದೆ.
ಕುಲದೀಪ್ ಪಂಜಾಬ್‌ನಲ್ಲಿದ್ದರೂ, ಅವರ ತಾಯಿ, ಪತ್ನಿ ಮತ್ತು ಮಗ ಮೂಲ ಮನೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ವಾಸಿಸುತ್ತಿದ್ದಾರೆ. ರಾತ್ರೋರಾತ್ರಿ ಅದೃಷ್ಟ ಈ ರೀತಿ ಬದಲಾಗಬಹುದು ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕುಲದೀಪ್ ಹೇಳಿದ್ದಾರೆ. ಅತ್ತ ಅಮ್ಮ ಕಂಡಿದ್ದು ಕನಸು ಕೊನೆಗೂ ನನಸಾಗಿದ್ದು, ಆಕೆಯು ಖುಷಿ ತೋರ್ಪಡಿಸಿದ್ದಾಳೆ. ಒಟ್ಟಾರೆ, ಆರು ರೂಪಾಯಿ ಅದೃಷ್ಟವನ್ನೇ ಬದಲಾಯಿಸಿದೆ. ಇದಕ್ಕಾಗಿ ಹೇಳೋದು, ದೇವರು ಒಂದಲ್ಲ ಒಂದು ದಿನ ಕೈ ಹಿಡಿಯುತ್ತಾನೆ ಎಂದು. ಇಂದು ಕುಲದೀಪ್ ಗೆ ಅದೃಷ್ಟ ಒಲಿಸಿದೆ, ನಾಳೆ ನಿಮಗೂ..