ಮಂಗಳೂರು:ಫಾಝಿಲ್ ಹತ್ಯೆ ಪ್ರಕರಣ!! ಆರು ಮಂದಿ ಆರೋಪಿಗಳ ಬಂಧನ-ತೀವ್ರ ತನಿಖೆ

ಮಂಗಳೂರು:ನಗರದ ಹೊರವಲಯದ ಸುರತ್ಕಲ್ ಎಂಬಲ್ಲಿ ನಡೆದಿದ್ದ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ, ಮಂಗಳೂರು ಕಮಿಷನರ್ ಮಾರ್ಗದರ್ಶನದ ಪೊಲೀಸರ ತಂಡ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

 

ಆರೋಪಿಗಳನ್ನು ಪಣಂಬೂರು ಎಸಿಪಿ ಕಚೇರಿಯಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕಮಿಷನರ್, ಈಗಾಗಲೇ ಹತ್ಯೆಗೆ ಸಂಬಂಧಿಸಿ ಆರು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ವಿಚಾರಣೆಯ ವೇಳೆ ಆರೋಪಿಗಳು ಕೃತ್ಯ ಎಸಗಿರುವುದು ಒಪ್ಪಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದರು. ಅದಲ್ಲದೇ ಫಾಝಿಲ್ ಹತ್ಯೆಗೈದ ಹಂತಕರು ಬಂದಿದ್ದ ಕಾರು ಉಡುಪಿಯ ಇನೋಳಿ ಎಂಬಲ್ಲಿ ಪತ್ತೆಯಾಗಿದ್ದು,ಕಾರು ಮಾಲೀಕನನ್ನು ಬಂಧಿಸಲಾಗಿತ್ತು.

ಸದ್ಯ ಆತ ನೀಡಿದ ಮಾಹಿತಿಯ ಆಧಾರದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.