KPSC : ವಿವಿಧ ಗ್ರೂಪ್ ಬಿ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಬಿಡುಗಡೆ

ಕರ್ನಾಟಕ ಲೋಕಸೇವಾ ಆಯೋಗವು 2020ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಆಯುಷ್ ಇಲಾಖೆಯ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಸಂಬಂಧ, ಇದೀಗ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಆಯುಷ್ ಇಲಾಖೆ ಅಧೀನದ ಸಹಾಯಕ ಪ್ರಾಧ್ಯಾಪಕ (ವಿವಿಧ ವಿಷಯಗಳು) ಹುದ್ದೆಗಳು ಇವಾಗಿವೆ.

 

ಈ ಹುದ್ದೆಗೆ ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು, ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಆಯುಷ್ ಇಲಾಖೆಯ ವಿವಿಧ ಗ್ರೂಪ್ ಬಿ ಹುದ್ದೆಗಳ ಫೈನಲ್ ಸೆಲೆಕ್ಟ್ ಲಿಸ್ಟ್ ಅನ್ನು ಚೆಕ್ ಮಾಡಬಹುದು.

ಯಾವ್ಯಾವ ಹುದ್ದೆಗೆ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಈ ಕೆಳಗೆ ನೀಡಲಾಗಿದೆ.

  1. ಆರ್ಯುರ್ವೇದ ಸಹಾಯಕ ಪ್ರಾಧ್ಯಾಪಕರು (ಸಂಹಿತ
    ಸಿದ್ಧಾಂತ)
  2. ಆರ್ಯುರ್ವೇದ ಸಹಾಯಕ ಪ್ರಾಧ್ಯಾಪಕರು
    (ಕಾಯಾಚಿಕಿತ್ಸಾ)
  3. ಆರ್ಯುರ್ವೇದ ಸಹಾಯಕ ಪ್ರಾಧ್ಯಾಪಕರು (ಕ್ರಿಯಾ ಶರೀರ)
  4. ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಷಯ ಆರ್ಯುರ್ವೇದ ಸಹಾಯಕ ಪ್ರಾಧ್ಯಾಪಕರು
  5. ಹೋಮಿಯೋಪತಿ ಸಹಾಯಕ ಪ್ರಾಧ್ಯಾಪಕರು
    (ಆರ್ಗ್ಯಾನ್ ಆಫ್ ಮೆಡಿಷನ್)
  6. ಹೋಮಿಯೋಪತಿ ಸಹಾಯಕ ಪ್ರಾಧ್ಯಾಪಕರು
    (ಪೇಥಾಲಜಿ ಮತ್ತು ಮೈಕ್ರೋಬಯೋಲಜಿ)
  7. ಹೋಮಿಯೋಪತಿ ಸಹಾಯಕ ಪ್ರಾಧ್ಯಾಪಕರು (ಫಾರೆನ್ಸಿಕ್ ಮೆಡಿಷನ್ ಮತ್ತು ಟಾಕ್ಸಿಕೋಲಜಿ)
  8. ಹೋಮಿಯೋಪತಿ ಸಹಾಯಕ ಪ್ರಾಧ್ಯಾಪಕರು
    (ಪ್ರಾಕ್ಟಿಸ್ ಆಫ್ ಮೆಡಿಷನ್)
    9 ಹೋಮಿಯೋಪತಿ ಸಹಾಯಕ ಪ್ರಾಧ್ಯಾಪಕರು (ಸರ್ಜರಿ)
    10 ಸಂಸ್ಕೃತ ವಿಷಯ ಆರ್ಯುರ್ವೇದ ಸಹಾಯಕ ಪ್ರಾಧ್ಯಾಪಕರು

ಆಯುಷ್ ಇಲಾಖೆಯ ವಿವಿಧ ಗ್ರೂಪ್ ಬಿ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿ ಹೆಸರಿನ ಜತೆಗೆ, ಸಂಪೂರ್ಣ ವಿಳಾಸ, ಜನ್ಮ ದಿನಾಂಕ, ಸ್ಪರ್ಧಾತ್ಮಕ ಪರೀಕ್ಷೆ ಅಂಕಗಳು, ಆಯ್ಕೆಯಾದ ಮೀಸಲಾತಿ ವಿವರ / ಕೆಟಗರಿ ಎಲ್ಲ ಮಾಹಿತಿಗಳು ಲಭ್ಯ ಇರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.