ಶಾಲೆಯ ರಜೆಯ ಮಜ ತಗೊಳ್ಳುವಾಗಲೇ ಕಾದಿತ್ತು ಸಾವು | 5 ಪುಟ್ಟ ಮಕ್ಕಳ ಪ್ರಾಣ ತಗೊಂಡ ಆ ಹೊಂಡ!!!

ಶಾಲೆಗೆ ರಜೆ ನೀಡಿದ್ದ ಕಾರಣ ಆಟವಾಡಲೆಂದು ಹೋದ ಮಕ್ಕಳು ದಾರುಣವಾಗಿ ಮರಣಹೊಂದಿದ್ದಾರೆ. ಹೌದು…ಶಾಲೆಯ ರಜೆಯ ಖುಷಿ ಅನುಭವಿಸುತ್ತಿದ್ದ ಪುಟ್ಟ ಮಕ್ಕಳು ಆಟವಾಡುತ್ತಲೇ ಸಾವು ಕಂಡಿದ್ದಾರೆ. ಜಮೀನಿನಲ್ಲಿ ಆಟ ಆಡಲು ಹೋಗಿದ್ದ ಮಕ್ಕಳು ಈಜಲೆಂದು ಕೃಷಿ ಹೊಂಡಕ್ಕಿಳಿದಿದ್ದಾರೆ.

 

ಐವರು ಮಕ್ಕಳು ಗದ್ದೆಯಲ್ಲಿ ನಿರ್ಮಾಣ ಮಾಡಿದ್ದ ನೀರಿನ ಹೊಂಡದಲ್ಲಿ ಸ್ನಾನ ಮಾಡಲು ಇಳಿದು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಮೂವರು ಗಂಡು ಮಕ್ಕಳು ಸೇರಿದ್ದಾರೆ. ಇವರು ಗ್ರಾಮದ ಕೂಲಿ ಕಾರ್ಮಿಕ ಕುಟುಂಬದವರು ಎನ್ನಲಾಗ್ತಿದೆ. ಈ ಘಟನೆ ರಾಜಸ್ಥಾನದ ರಾಮಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.

ಹೊಂಡ ಆಳವಾಗಿದ್ದರಿಂದ ಐದು ಮಕ್ಕಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ನಿಶಾ (13), ಭಾವನಾ(10), ಅಂಕಿತ್ (10), ಅಂಶು (9) ಮತ್ತು ರಾಧೆ (11) ಎಂದು ಹೇಳಲಾಗಿದೆ.

ಕೂಲಿ ಕಾರ್ಮಿಕ ಕುಟುಂಬದ ಈ ಮಕ್ಕಳಿಗೆಲ್ಲಾ ಶಾಲೆಗೆ ರಜೆ ಇದ್ದ ಕಾರಣ ಗ್ರಾಮದ ಸಮೀಪದ ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಕ್ಕಳು ಹೊಂಡ ನೋಡಿ ಸ್ನಾನ ಮಾಡಲು ಇಳಿದಿದ್ದಾರೆ. ಮಕ್ಕಳಿಗೆ ಆಳದ ಬಗ್ಗೆ ತಿಳಿದಿರಲಿಲ್ಲ. ಆದರೆ ಹೊಂಡದಲ್ಲಿ ಆಳ ಹೆಚ್ಚಿದ್ದರಿಂದ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ರಾಮಸಿಂಗ್‌ಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಐವರು ಮಕ್ಕಳ ಮೃತದೇಹಗಳನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ರಾಮಸಿಂಗ್‌ಪುರ ಉಪ ಆರೋಗ್ಯ ಕೇಂದ್ರದ ಶವಾಗಾರದಲ್ಲಿರಿಸಲಾಗಿದೆ.

Leave A Reply

Your email address will not be published.