Home latest ತನ್ನ ಕೊನೆಯ ಆಸೆಯಂತೆ ಸ್ನೇಹಿತರನ್ನು ಭೇಟಿಯಾಗಿ ಕೊನೆಯುಸಿರೆಳೆದ ಬಾಲಕ!

ತನ್ನ ಕೊನೆಯ ಆಸೆಯಂತೆ ಸ್ನೇಹಿತರನ್ನು ಭೇಟಿಯಾಗಿ ಕೊನೆಯುಸಿರೆಳೆದ ಬಾಲಕ!

Hindu neighbor gifts plot of land

Hindu neighbour gifts land to Muslim journalist

ಸಾಯುವ ಮೊದಲು ತನ್ನ ಕೊನೆಯ ಆಸೆಯನ್ನು ಪ್ರತಿಯೊಬ್ಬರೂ ಕೂಡ ಈಡೇರಿಸಿಕೊಳ್ಳಲು ಬಯಸುತ್ತಾರೆ. ಅದೇ ರೀತಿ ಕಿಡ್ನಿ ವೈಫಲ್ಯದಿಂದ ನರಳಾಡುತ್ತಿದ್ದ ಬಾಲಕ ತನ್ನ ಕೊನೆಯ ಕ್ಷಣದಲ್ಲಿ ತನ್ನ ಸ್ನೇಹಿತರು ಹಾಗೂ ಶಾಲೆಯನ್ನು ಭೇಟಿ ಆದಂತಹ ಹೃದಯವಿದ್ರಾಯಕ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಜಿಲ್ಲೆಯ ಕಾರಟಗಿ ಪಟ್ಟಣ ನಿವಾಸಿ ಸುಹಾಸ್​, ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಈತನಿಗೆ ಬಾಲ್ಯದಿಂದಲೂ ಕಿಡ್ನಿ ಸಮಸ್ಯೆ ಇತ್ತು. ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ.

ಸಾವಿನ ಮನೆ ಸೇರುವ ಕಾಲ ಸಮೀಪಿಸುತ್ತಿದ್ದಂತೆ ಆ ಬಾಲಕನಿಗೆ ಏನು ಅನ್ನಿಸಿತ್ತೋ ಏನೋ, ಶಾಲೆಗೆ ಹೋಗುವ ಆಸೆ ಹುಟ್ಟಿಕೊಂಡಿದೆ. ಅನಾರೋಗ್ಯದ ನಡುವೆಯೂ ಶಾಲೆ, ಶಿಕ್ಷಕರು, ಸ್ನೇಹಿತರನ್ನು ನೆನೆಪಿಸಿಕೊಂಡಿದ್ದಾನೆ.

ಹೀಗಾಗಿ, ಆತನ ಪೋಷಕರು ನಿನ್ನೆ ಶಾಲೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ ಸುಹಾಸ್​ನನ್ನು ಮುತ್ತುವರೆದಿದ ಸ್ನೇಹಿತರು, ಅವರೆಲ್ಲರಿಂದಲೂ ಫ್ರೆಂಡ್​ಷಿಪ್​ ಬೆಲ್ಟ್​ ಕಟ್ಟಿಸಿಕೊಂಡಿದ್ದಾನೆ. ಸ್ನೇಹಿತರು ಕೂಡ ಸುಹಾಸ್​ನ ಪರಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಬಳಿಕ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿಸಿಕೊಂಡು ಮನೆಗೆ ಬಂದು ಹಾಯಾಗಿ ಮಲಗಿ ಇಂದು ಬೆಳಗ್ಗೆ ಕೊನೆ ಉಸಿರೆಳೆದಿದ್ದಾನೆ.