Home latest ವಯಸ್ಸು 60 ಆಗುತ್ತಿದ್ದಂತೆ, ಈ “ವಿಶೇಷ ಉದ್ಯೋಗಿ”ಗೆ ನಿವೃತ್ತಿ ಘೋಷಿಸಿದ ಸ್ಪ್ರೈಟ್ ಕಂಪನಿ!!!

ವಯಸ್ಸು 60 ಆಗುತ್ತಿದ್ದಂತೆ, ಈ “ವಿಶೇಷ ಉದ್ಯೋಗಿ”ಗೆ ನಿವೃತ್ತಿ ಘೋಷಿಸಿದ ಸ್ಪ್ರೈಟ್ ಕಂಪನಿ!!!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಸರಕಾರಿ ನೌಕರರು 60-62 ವಯಸ್ಸು ಆಗುತ್ತಿದ್ದಂತೆ, ಕೆಲಸದಿಂದ ನಿವೃತ್ತಿ ಪಡೆಯುತ್ತಾರೆ. ಈಗ ಕೋಕಾ ಕೋಲಾ ತಂಪು ಪಾನೀಯ ಸಂಸ್ಥೆ , ತನ್ನ ಸ್ಪೆಷಲ್ ಉದ್ಯೋಗಿಯೊಬ್ಬರಿಗೆ ನಿವೃತ್ತಿ ನೀಡಿದೆ. ಯಾರದು ಗೊತ್ತೇ ? ಬಾಟಲ್ ಕಣ್ರೀ ಹೌದು. ಕೋಕಾ ಕೋಲಾದ ಸಂಸ್ಥೆಯ ಉತ್ಪನ್ನವಾಗಿರುವ ಸ್ಪ್ರೈಟ್ ತನ್ನ ಹಸಿರು ಬಣ್ಣದ ಬಾಟಲ್‌ಗೆ ಗುಡ್ ಬೈ ಹೇಳಲಿದೆ. ಅದರ ಬದಲು ನೀರಿನ ಬಣ್ಣದ ಬಾಟಲ್‌ನಲ್ಲಿ ಇನ್ನು ಮುಂದೆ ಸ್ಪ್ರೈಟ್ ವಿತರಣೆ ಮಾಡಲು ನಿರ್ಧರಿಸಿದೆ.

ಸ್ಪ್ರೈಟ್‌ನ ಹಸಿರು ಬಾಟಲಿಗಳ ಹಸಿರು ಪಾಲಿಥಿಲೀನ್ ಟೆರೆಫ್ಲಾಲೇಟ್ (ಪಿಇಟಿ) ಪ್ಯಾಕೇಜಿಂಗ್ ಅನ್ನು ಮರುಬಳಕೆ ಮಾಡಬಹುದಾದರೂ, ಅದನ್ನು ಇತರ ಸ್ಪಷ್ಟ ವಸ್ತುಗಳಿಂದ ಪ್ರತ್ಯೇಕಿಸಲಾಗಿದೆ. ಇದರಿಂದಾಗಿ ಹೊಸ ಬಾಟಲಿಗಳನ್ನು ತಯಾರಿಸಲು ಬಳಸುವ ವೇಳೆ ಇದು ಬಣ್ಣ ಕಳೆದುಕೊಳ್ಳುವುದಿಲ್ಲ. ಹೀಗಾಗಿ ವಸ್ತುವನ್ನು ಹೆಚ್ಚಾಗಿ ಬಟ್ಟೆ ಮತ್ತು ಕಾರ್ಪೆಟ್‌ಗಳಂತಹ ಏಕ ಬಳಕೆಯ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ. ಹೊಸ ಪಿಇಟಿ ಬಾಟಲಿಗಳಾಗಿ ಮರುಬಳಕೆ ಮಾಡಲಾಗುವುದಿಲ್ಲ. ಹಸಿರು ಬಣ್ಣದಿಂದ ಸ್ಪಷ್ಟ ತಿಳಿ ಬಣ್ಣಕ್ಕೆ ಬದಲಾಯಿಸುವುದು ಕಷ್ಟಕರ. ಹೀಗಾಗಿ ಕೋಕಾಕೋಲಾ ಸಂಸ್ಥೆ ಬಾಟಲಿಯ ಬಣ್ಣ ಬದಲಾಯಿಸಲು ಮುಂದಾಗಿದೆ.

ಮೊದಲ ಬಾರಿಗೆ ಲಾಂಚ್ ಆದಾಗ, ಇದ್ದ ಬಣ್ಣವೇ ಹಸಿರಿ ಬಣ್ಣ. ಹಾಗಾಗಿ ಆವಾಗಿನಿಂದ ಇಲ್ಲಿಯವರೆಗೆ ಮಾರುಕಟ್ಟೆಗೆ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಹಸಿರು ಬಣ್ಣದ ಬಾಟಲ್‌ಗಳೇ ಮಾರುಕಟ್ಟೆಯಲ್ಲಿ ಇದೆ. ಈಗ ಏನನಿಸಿತೋ ಏನೋ ಅದು ತನ್ನ ಬಣ್ಣವನ್ನು ಬದಲಿಸಿದೆ. ಇದರ ಹಿಂದೆ ಪರಿಸರದ ಕಾಳಜಿಯ ಉದ್ದೇಶ ಇದೆ ಎಂದು ಸಂಸ್ಥೆ ಹೇಳಿದೆ. ಸುಸ್ಥಿರ ಅಭಿವೃದ್ಧಿ ಪರ್ಯಾಯವಾಗಿ ಬಿಳಿ ಬಣ್ಣದ ಬಾಟಲಿಯನ್ನು ಬಿಡುಗಡೆಗೊಳಿಸಿದೆ.