Home ದಕ್ಷಿಣ ಕನ್ನಡ Breaking news | ಕರಾವಳಿಯಲ್ಲಿ ಮತ್ತೆ ಚಿಮ್ಮಿದ ನೆತ್ತರು !! ಪ್ರವೀಣ್ ಹತ್ಯೆಯ ಬೆನ್ನಲ್ಲೇ ಸುರತ್ಕಲ್...

Breaking news | ಕರಾವಳಿಯಲ್ಲಿ ಮತ್ತೆ ಚಿಮ್ಮಿದ ನೆತ್ತರು !! ಪ್ರವೀಣ್ ಹತ್ಯೆಯ ಬೆನ್ನಲ್ಲೇ ಸುರತ್ಕಲ್ ನಲ್ಲಿ ಮುಸ್ಲಿಂ ಯುವಕನ ಮೇಲೆ ತಲವಾರ್ ದಾಳಿ, ಓರ್ವ ಮೃತ !

Hindu neighbor gifts plot of land

Hindu neighbour gifts land to Muslim journalist

ಸುರತ್ಕಲ್ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಬಳಿಕ ಕೆಂಡದಂತಿರುವ ಪರಿಸ್ಥಿತಿಯಲ್ಲಿ ಈಗ ಮತ್ತೆ ಕರಾವಳಿಯಲ್ಲಿ ರಕ್ತದೋಕುಳಿ ಚೆಲ್ಲಿದೆ. ತುಂತುರು ಮಳೆಯ ತುಂಬಾ ರಕ್ತದ ವಾಸನೆ ಗಾಢವಾಗಿ ಪಸರಿಸಿದೆ. ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಕಳವಳದ ವಾತಾವರಣ. ಇದರ ಮಧ್ಯೆ ಇಂದು ಈಗ ತಾನೇ ಇನ್ನೊಂದು ಅವಗಢ ನಡೆದು ಹೋಗಿದೆ. ಸುರತ್ಕಲ್ ನಲ್ಲಿ ಇಂದು ಗುರುವಾರ ರಾತ್ರಿ ಯುವಕನೊಬ್ಬನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಲಾಗಿದೆ. ಇದೀಗ ಬಂದ ಮಾಹಿತಿ : ಫಾಜಿಲ್ ಮೃತ. ತಳವಾರ್ ಅಟ್ಯಾಕ್ ಆದ ಫಾಜಿಲ್ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯ ಆಗಿದೆ.

ಸುರತ್ಕಲ್ ಮಂಗಳ ಪೇಟೆಯ ಫಾಜಿಲ್ ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿದೆ. ಚಪ್ಪಲಿ ಖರೀದಿಗೆ ಬಂದಿದ್ದ ವಾಝಿಯ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಫಾಜಿಲ್ ಪರಿಸ್ಥಿತಿ ಚಿಂತಾಜನಕವಾಗಿತ್ತು. ಇದೀಗ ಫಾಜಿಲ್ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ರಕ್ಷಿಸಲು ತೆರಳಿದ ಇನ್ನೊಬ್ಬನಿಗೂ ಗಾಯ ಆಗಿದೆ.

ಕಾರಿನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆಗ ಫಾಜಿಲ್ ಗೆಳೆಯನ ಜತೆ ಅಂಗಡಿ ಒಂದರ ಮುಂದೆ ಮಾತುಕತೆ ನಡೆಸುತ್ತಿದ್ದ. ಗೆಳೆಯ ರಕ್ಷಿಸಲು ಪ್ರಯತ್ನಿಸಿದ್ದ. ದುಷ್ಕರ್ಮಿಗಳು ಮೂರಕ್ಕಿಂತ ಹೆಚ್ಚು ಜನ ಇದ್ದರು ಎಂಬ ಮಾಹಿತಿ ಇದೆ. ಅಟ್ಯಾಕ್ ನ ವಿವರ ಸಿಸಿ ಟಿವಿಯಲ್ಲಿ ಸೆರೆ ಆಗಿದ್ದು, ಫಾಜಿಲ್ ತಪ್ಪಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದ.

ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ವಾಝಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಇದು ಬ್ರೇಕಿಂಗ್ ನ್ಯೂಸ್. ಉಳಿದ ವಿಷಯಗಳನ್ನು ಇದರಲ್ಲಿ ಒಂದೊಂದಾಗಿ ಸೇರಿಸುತ್ತಾ ಹೋಗುತ್ತೇವೆ. ಕಾಯಿರಿ.