ಬೆಳ್ಳಾರೆ:ಮೃತ ಪ್ರವೀಣ್ ನೆಟ್ಟಾರು ಮನೆಗೆ ಸಿ.ಎಂ ಬೊಮ್ಮಾಯಿ ಭೇಟಿ!! ಮನೆಯವರಿಗೆ ಸಾಂತ್ವನ

Share the Article

ಬೆಳ್ಳಾರೆ: ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಸಹಿತ ಜಿಲ್ಲೆಯ ಸಚಿವರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಪ್ರವೀಣ್ ಮನೆಯ ಸುತ್ತ ಮುತ್ತ ಇಕ್ಕೆಲಗಳಲ್ಲಿ ಭಾರೀ ಜನಸ್ತೋಮವೇ ಸೇರಿದೆ. ಅದರ ಮದ್ಯೆ ನಡೆದುಕೊಂಡು ಹೋದ ಸಿ ಎಂ ಬೊಮ್ಮಾಯಿಯವರು ಇದೀಗ ತಾನೇ ಮೃತ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಭೇಟಿನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಆರೋಪಿಗಳಿಗೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

Leave A Reply