ಪ್ರವಿಣ್ ನೆಟ್ಟಾರು ಹತ್ಯೆ ಪ್ರಕರಣ | ಶಂಕಿತ ಆರೋಪಿ ಶಫೀಕ್ ತಂದೆ ಮತ್ತು ಹೆಂಡತಿ ಪೊಲೀಸ್ ಠಾಣೆಗೆ ದೌಡು !!!

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ಳಾರೆಯ ಎಸ್ ಡಿಪಿಐ ಅಧ್ಯಕ್ಷ ಶಫೀಕ್ ಹಾಗೂ ಸವಣೂರಿನ ಜಾಕೀರ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಬಂಧನ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಫೀಕ್ ತಂದೆ ಇಬ್ರಾಹಿಂ ಹಾಗೂ ಆತನ ಪತ್ನಿ ಅನ್ಸಿಫಾ ಠಾಣೆಗೆ ದೌಡಾಯಿಸಿದ್ದಾರೆ.

 

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗುರುವಾರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶಫೀಕ್ ನನ್ನು ನಿನ್ನೆನೇ ವಿಚಾರಣೆಗಾಗಿ ಬೆಳ್ಳಾರೆ ಪೊಲೀಸರು ಠಾಣೆಗೆ ಕರೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಆತನ ಪತ್ನಿ ಹಾಗೂ ತಂದೆ ಠಾಣೆಗೆ ಆಗಮಿಸಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ಋಷಿಕೇಶ್ ಸೋನಾವಣೆ, ಆರೋಪಿಗಳು ಸವಣೂರು ಗ್ರಾಮದ 29 ವರ್ಷದ ಜಾಕೀರ್ ಮತ್ತು ಬೆಳ್ಳಾರೆ ಗ್ರಾಮದ 27 ವರ್ಷದ ಮೊಹಮ್ಮದ್ ಶಫೀಕ್ ಎಂದು ಹೇಳಿದ್ದು, ಈ ಪ್ರಕರಣ ಸಂಬಂಧ ಈಗಾಗಲೇ 15 ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ.

ಪ್ರವೀಣ್ ನೆಟ್ಟಾರ್ ಬಗ್ಗೆ ಬೆಳ್ಳಾರೆಯ ಶಾಫಿಕ್ ಮಾಹಿತಿ ನೀಡಿದ್ದ ಎನ್ನಲಾಗಿದೆ. ಆತನ ಮಾಹಿತಿಯ ಮೇಲೆ ಸವಣೂರಿನ ಜಾಕಿರ್ ಮತ್ತವನ ತಂಡ ಹತ್ಯೆ ನಡೆಸಿದೆ ಎನ್ನುವುದರ ಬಗ್ಗೆ ಎಸ್ ಪಿ ಸೋನಾವಣೆ ಮಾಹಿತಿ ನೀಡಿದ್ದಾರೆ. ಆರೋಪಿ ಜಾಕಿರ್ ಮೇಲೆ ಈ ಹಿಂದೆಯೂ ಕೋಮು ಸಂಬಂಧಿತ ಪ್ರಕರಣ ದಾಖಲಾಗಿತ್ತು ಎಂಬ ಮಹತ್ವದ ಮಾಹಿತಿ ಲಭ್ಯ ಆಗಿದೆ.

ಇಲ್ಲಿಯತನಕ ಒಟ್ಟು 21 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಅನುಭವಿ ಪೊಲೀಸ್ ಅಧಿಕಾರಿಗಳು ಖುದ್ದು ತನಿಖೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಬಂಧಿತರನ್ನು ನಮ್ಮ ಕಸ್ಟಡಿಗೆ ಕೇಳಿದ್ದೇವೆ, ಯಾವ ಕಾರಣಕ್ಕೆ ಕೊಲೆ ನಡೆಸಲಾಗಿದೆ ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಸುತ್ತೇವೆ. ಮತ್ತು ಕೊಲೆಯ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ. ಕೊಲೆಯ ಹಿಂದೆ ಪಿಎಫ್‌ಐ ಸಂಘಟನೆ ಇರುವ ಶಂಕೆ ಇದೆ ಎಂದಿದ್ದಾರೆ ಎಡಿಜಿಪಿ ಅಲೋಕ್ ಕುಮಾರ್.

Leave A Reply

Your email address will not be published.