Home Education ಸಿಇಟಿ ಫಲಿತಾಂಶ ಪ್ರಕಟ | ಈ ಬಾರಿ ಯುವಕರೇ ಸ್ಟ್ರಾಂಗ್ ಗುರೂ

ಸಿಇಟಿ ಫಲಿತಾಂಶ ಪ್ರಕಟ | ಈ ಬಾರಿ ಯುವಕರೇ ಸ್ಟ್ರಾಂಗ್ ಗುರೂ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: 2022-23ನೇ ಸಾಲಿನ ರಾಜ್ಯ ಸಿಇಟಿ ಪರೀಕ್ಷಾ ಫಲಿತಾಂಶವು ಈಗಾಗಲೇ ಪ್ರಕಟಗೊಂಡಿದ್ದು, ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ ಪ್ರಕಟಿಸಿದ್ದಾರೆ.

ಸಿಇಟಿ ಫಾಲಿತಾಂಶದಲ್ಲಿ ಈ ಬಾರಿ ಯುವತಿಯರನ್ನು ಹಿಂದಿಕ್ಕಿ, ಯುವಕರೇ ಮೇಲುಗೈ ಸಾಧಿಸಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್​ಗೆ 1,71,656 ರ್ಯಾಂಕ್​​​, ಕೃಷಿ ಕೋರ್ಸ್​ಗೆ 1,39,968 ರ್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್ ಬಂದಿದೆ.

Kea.kar.nic.in ಮತ್ತು karesults.nic.in ಫಲಿತಾಂಶ ಪ್ರಕಟ ಮಾಡಲಾಗಿದೆ. ಆನ್ ಲೈನ್ ಮೂಲಕವೇ ಈ ಬಾರಿ ದಾಖಲಾತಿ ಪರಿಶೀಲನೆ ನಡೆಯಲಿದ್ದು, ಆಗಸ್ಟ್ 5 ರಿಂದಲೇ ಪರಿಶೀಲನೆ ಶುರು ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಎಂಜಿನಿಯರಿಂಗ್‌, ಕೃಷಿ, ಪಶುಸಂಗೋಪನೆ, ಆಯುಷ್‌, ಯುನಾನಿ, ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕಳೆದ ಜೂನ್‌ 16 ಮತ್ತು 17 ರಂದು ನಡೆದ ಸಿಇಟಿ ಪರೀಕ್ಷೆಗೆ ಇಟ್ಟು 2,10,829 ವಿದ್ಯಾರ್ಥಿಗಳು ಹಾಜರಾಗಿದ್ದರು. ಜೂ.18ರಂದು ಹೊರನಾಡು ಹಾಗೂ ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.ಜು.17ರಂದೇ ಸಿಇಟಿ ಪರೀಕ್ಷೆ ಪ್ರಕಟಿಸಲು ಸಿದ್ದತೆ ನಡೆದಿತ್ತಾದರು ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಣೆ ವಿಳಂಬವಾಗಿದ್ದರಿಂದ ಪ್ರಾಧಿಕಾರ ಈಗ ಫಲಿತಾಂಶ ಪ್ರಕಟಿಸಿದೆ.

ಎಂಜಿನಿಯರಿಂಗ್ ನಲ್ಲಿ  ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  – ಅಪೂರ್ವ ಟಂಡನ್ (97% ), ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ
ಎರಡನೇ ರ‍್ಯಾಂಕ್‌ – ಸಿದ್ದಾರ್ಥ ಸಿಂಗ್ (96%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಮಾರತ್ತಹಳ್ಳಿ
ಮೂರನೇ ರ‍್ಯಾಂಕ್‌  – ಆತ್ಮಕುರಿ ವೆಂಕಟ ಮಾದ್, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಮಾರತ್ತಹಳ್ಳಿ

ಬಿಎಸ್ಸಿ ಅಗ್ರಿಕಲ್ಚರ್ ನಲ್ಲಿ  ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  – ಅರ್ಜುನ್ ರವಿಶಂಕರ್ (93%),  HAL ಪಬ್ಲಿಕ್ ಸ್ಕೂಲ್, ಬೆಂಗಳೂರು
ಎರಡನೇ ರ‍್ಯಾಂಕ್‌ – ಸುಮೀಸ್ ಎಸ್ ಪಾಟೀಲ್  (92%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಉಲ್ಲಾಳ, ಬೆಂಗಳೂರು
ಮೂರನೇ ರ‍್ಯಾಂಕ್‌  – ಸುದೀಪ್ YM  (92%), ವಿದ್ಯಾನಿಕೇತನ ಪಿಯು ಕಾಲೇಜ್, ತುಮಕೂರು

ಯೋಗ ಮತ್ತು ನ್ಯಾಚುರೋಪತಿಯಲ್ಲಿ  ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  – ಹೃಷಿಕೇಶ್ (98%), ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು
ಎರಡನೇ ರ‍್ಯಾಂಕ್‌ – ವಿ ರಾಜೇಶ್  (96%), ಮಾದವ ಕೃಪ ಇಂಗ್ಲೀಷ್ ಸ್ಕೂಲ್, ಉಡುಪಿ
ಮೂರನೇ ರ‍್ಯಾಂಕ್‌  – ಕೃಷ್ಣ S.R (96%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು

B.V.sc (ಪಶುವೈದ್ಯಕೀಯ ವಿಜ್ಞಾನ) ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  – ಹೃಷಿಕೇಶ್ (98%), ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು
ಎರಡನೇ ರ‍್ಯಾಂಕ್‌ – ಮನಿಶ್, SA  (97%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆ.ಆರ್.ಪುರ ಬೆಂಗಳೂರು
ಮೂರನೇ ರ‍್ಯಾಂಕ್‌  – ಶುಭ ಕೌಶಿಕ್ (96%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು

ಬಿಫಾರ್ಮಾ ನಲ್ಲಿ ಟಾಪರ್ ಆದವರು
ಮೊದಲ ರ‍್ಯಾಂಕ್‌  – ಶಿಶಿರ್, RK   (98%), ನಾರಾಯಣ ಇ-ಟೆಕ್ನೊ ಸ್ಕೂಲ್ ವಿದ್ಯಾರಣ್ಯಪುರ, ಬೆಂಗಳೂರು
ಎರಡನೇ ರ‍್ಯಾಂಕ್‌ – ಹೃಷಿಕೇಶ್   (98%), ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು
ಮೂರನೇ ರ‍್ಯಾಂಕ್‌  – ಅಪೂರ್ವ ಟಂಡನ್  (97%), ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ

KCET ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು?:
* ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡಿ
*ವೆಬ್​ಸೈಟ್​​ನಲ್ಲಿ ಮುಖಪುಟದಲ್ಲಿ ‘KCET ಫಲಿತಾಂಶ 2022’ ಮೇಲೆ ಕ್ಲಿಕ್ ಮಾಡಿ
* ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ
* ಆಗ ನಿಮ್ಮ KCET ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ
*ರಿಸಲ್ಟ್​ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ಔಟ್ ತೆಗೆದುಕೊಳ್ಳಿ.