ನವವಿವಾಹಿತೆಯ ಆತ್ಮಹತ್ಯೆ, ಶವವಿಟ್ಟು ಕುಟುಂಬಸ್ಥರ ಧರಣಿ!!!

ಚಿಕ್ಕಮಗಳೂರು : ಮದುವೆಯಾದ 11 ತಿಂಗಳಲ್ಲೇ ವಿವಾಹಿತೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾವಡಿ ಸಮೀಪದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ.

ಮಗಳ ಆತ್ಮಹತ್ಯೆಯಿಂದ ಬೆಂದ ಕುಟುಂಬಸ್ಥರು ಕಣ್ಣೀರಿಡುತ್ತಾ, ನಮ್ಮ ಮಗಳಿಗೆ ಹಿಂಸೆ ನೀಡಿದ್ದಾರೆ. ವರದಕ್ಷಿಣೆ ತರಲು ಒತ್ತಾಯ ಹಿಂಸೆ ಕೊಟ್ಟಿದ್ದಾರೆ ಎಂದು ಮಗಳ ಗಂಡನ ಮನೆಯವರ ವಿರುದ್ಧ ಆಕ್ರೋಶದ ಮಾತನಾಡಿದ್ದಾರೆ. ಕುಟುಂಬಸ್ಥರು ನ್ಯಾಯ ಸಿಗುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave A Reply

Your email address will not be published.