ಶಿರೂರು: ರೋಗಿಯನ್ನು ಹೊತ್ತು ತರುತ್ತಿದ್ದ ಆಂಬುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿ !! ಮಹಿಳೆ ಸಹಿತ ಮೂವರ ದುರ್ಮರಣ-ಭೀಕರ ಘಟನೆಯ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆ

Share the Article

ಉಡುಪಿ:ರೋಗಿಯನ್ನು ಹೊತ್ತು ತರುತ್ತಿದ್ದ ಆಂಬುಲೆನ್ಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ಶಿರೂರು ಟೋಲ್ ಗೇಟ್ ನಲ್ಲಿ ನಡೆದಿದೆ.

ಅಪಘಾತದ ಭೀಕರತೆಗೆ ಮಹಿಳೆ ಸಹಿತ ಮೂವರು ಮೃತಪಟ್ಟಿದ್ದು, ಆಂಬುಲೆನ್ಸ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾದ ಟೋಲ್ ಸಿಬ್ಬಂದಿ ಸಹಿತ ಆಂಬುಲೆನ್ಸ್ ನ ಇತರರು ಗಂಭೀರ ಗಾಯಗೊಂಡಿದ್ದು, ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಯನ್ನು ಹೊತ್ತು ತರುತ್ತಿದ್ದ ಆಂಬುಲೆನ್ಸ್ ಇದಾಗಿದ್ದು,ಶಿರೂರು ಟೋಲ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಘಟನೆಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಬೈಂದೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply